ಕೆಟ್ಟವರನ್ನೂ ಒಳ್ಳೆಯ ದಾರಿಗೆ ತರುವ ಜನಸ್ನೇಹಿ ಪೊಲೀಸ್‌

Team Udayavani, Dec 15, 2019, 3:00 AM IST

ಮೈಸೂರು: ಪೊಲೀಸರು ಒಳ್ಳೆಯವರ ಜೊತೆ ಒಳ್ಳೆಯವರಾಗಿ ಹಾಗೂ ಕೆಟ್ಟವರ ಜೊತೆ ಕೂಡ ಒಳ್ಳೆಯವರಾಗಿ ಅವರನ್ನು ಸರಿಯಾದ ದಾರಿಗೆ ತರುವಂತೆ ಮಾಡುವುದು ಜನಸ್ನೇಹಿ ಪೊಲೀಸ್‌ ಎಂದು ದಕ್ಷಿಣ ವಲಯ ಪೊಲೀಸ್‌ ಮಹಾ ನಿರ್ದೇಶಕ ವಿಪುಲ್‌ ಕುಮಾರ್‌ ಹೇಳಿದರು.

ಮೈಸೂರಿನ ಪೊಲೀಸ್‌ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಶನಿವಾರ ಜನಸ್ನೇಹಿ ಪೊಲೀಸ್‌ ಕುರಿತು ವಲಯದ ಎಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಪೊಲೀಸ್‌ ಇಲಾಖೆಯ ನಮೆಲ್ಲರ ಕನಸು ಪೊಲೀಸರು ಜನಸ್ನೇಹಿಯಾಗುವುದು ಎಂದು ಹೇಳಿದರು.

ಜನರ ಧ್ವನಿಯಾಗುವುದು: ಪೊಲೀಸರು ಜನಸ್ನೇಹಿಯಾಗಲು ಪ್ರಮುಖವಾಗಿ ಗೌರವಯುತ ನಡತೆ, ವಿಶ್ವಾಸಾರ್ಹರಾಗುವುದು ಹಾಗೂ ಜನರ ಧ್ವನಿಯಾಗುವುದು. ಈ ಮೂರು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಜನ ಸಾಮಾನ್ಯರು ನಮ್ಮ ಬಳಿ ಬಂದಾಗ ನಮ್ಮ ಮೊದಲ ನೋಟ ಹೇಗಿರಬೇಕು ಎಂಬುದರ ಮೇಲೆ ವಿಶ್ವಾಸಾರ್ಹತೆ ನಿಂತಿದೆ. ಸಾರ್ವಜನಿಕರನ್ನು ನಾವು ಹೇಗೆ ಘನತೆ, ಗೌರವದಿಂದ ನೋಡುತ್ತೇವೆ ಎನ್ನುವುದು ಮುಖ್ಯ ಎಂದರು.

ಆತ್ಮಸ್ಥೈರ್ಯ ತುಂಬಿ: ನೊಂದವರು ದೂರು ನೀಡಲು ಠಾಣೆಗೆ ಬಂದಾಗ ಅವರ ನೈತಿಕ ಬಲವನ್ನು ಕುಗ್ಗಿಸುವ ಕೆಲಸವನ್ನು ಪೊಲೀಸರು ಮಾಡಬಾರದು. ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಠಾಣೆ ಬಂದ ದೂರುದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ದಿನದಿಂದ ದಿನಕ್ಕೆ ಪೊಲೀಸ್‌ ಠಾಣೆಗಳು ಕೂಡ ಆಧುನೀಕತೆ ಮೈಗೂಡಿಸಿಕೊಂಡು ಮೇಲ್ದರ್ಜೆಗೇರುತ್ತಿವೆ. ಮೊದಲೆಲ್ಲಾ ಠಾಣೆಗಳಲ್ಲಿ ಸ್ವಾಗತಕಾರರು ಇರಲಿಲ್ಲ. ಈಗ ಸ್ವಾಗತಕಾರರನ್ನು ನೇಮಿಸಲಾಗಿದ್ದು, ಅವರು ದೂರು ನೀಡಲು ಬಂದವರಿಗೆ ಸೂಕ್ತ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಸಾರ್ವಜನಿಕರ ಸಹಕಾರ ಮುಖ್ಯ: ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಅಪರಾಧ ತಡೆಗಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಸಾಮಾನ್ಯ ಜನರನ್ನು ಮಾನವೀಯತೆ ದೃಷ್ಟಿಯಿಂದ ನೋಡಿ, ಅವರಿಗೆ ಗೌರವ ನೀಡಬೇಕು. ಪೊಲೀಸರು ನಂಬಿಕಸ್ಥರಾಗಿರಬೇಕು. ಜಗತ್ತಿನಲ್ಲಿ ಬಹಳಷ್ಟು ಜನ ನಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿರುವುದಿಲ್ಲ. ಜನರು ನಮ್ಮ ಮೇಲೆ ವಿಶ್ವಾಸ ಹೊಂದುವಷ್ಟರ ಮಟ್ಟಿಗೆ ನಾವಿನ್ನು ಬೆಳೆದಿಲ್ಲ. ಆ ನಂಬಿಕೆಯ ಹಂತವನ್ನು ನಾವು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪೊಲೀಸರು ಜನರ ಧ್ವನಿಯಾಗಬೇಕು. ಜನರ ಮಾತನ್ನು ಕೇಳಿಸಿಕೊಳ್ಳಬೇಕು. ಒಳ್ಳೆಯವರನ್ನು ರಕ್ಷಿಸಬೇಕು. ಕಾನೂನು ಉಲ್ಲಂ ಸುವವರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕು ಎಂದರು. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ನ್ಯಾಯಾಲಯದ ಕೆಲಸ. ಶಿಕ್ಷೆ ಕೊಡಲು ನ್ಯಾಯಾಲಯಕ್ಕೆ ಬೇಕಾದ ಪ್ರಕ್ರಿಯೆಗಳಿಗೆ ನ್ಯಾಯ ಕೊಡುವುದು ಪೊಲೀಸರ ಕೆಲಸ ಎಂದು ಹೇಳಿದರು. ಮೈಸೂರು ಎಸ್‌.ಪಿ. ಸಿ.ಬಿ.ರಿಷ್ಯಂತ್‌, ಹಾಸನ ಎಸ್‌.ಪಿ.ರಾಮ್‌ ನಿವಾಸ್‌ ಸಪಟ್‌, ಕೊಡಗು ಎಸ್‌.ಪಿ.ಸುಮನ್‌ ಡಿ. ಪನ್ನೇಕರ್‌, ಮಂಡ್ಯ ಎಸ್‌.ಪಿ. ಪರಶುರಾಮ, ಚಾಮರಾಜನಗರ ಎ.ಎಸ್‌.ಪಿ.ಅನಿತಾ ಸೇರಿದಂತೆ ದಕ್ಷಿಣ ವಲಯದ ಎಲ್ಲಾ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ