ಅನಾಥ ಹೆಣ್ಣುಮಕ್ಕಳಿಗೆ ರಕ್ಷಕನಾದ ಎಎಸ್‌ಐ ದೊರೆಸ್ವಾಮಿ

ಇಬ್ಬರು ಹೆಣ್ಣು ಮಕ್ಕಳಿಗೆ ಸ್ವಂತ ಹಣದಲ್ಲಿ ಸೂರು ಕಲ್ಪಿಸಿದ ಪೊಲೀಸ್‌ ಅಧಿಕಾರಿ

Team Udayavani, Oct 20, 2020, 3:11 PM IST

mysuru-tdy-1

ಎಚ್‌.ಡಿ.ಕೋಟೆ ತಾಲೂಕಿನ ಶಿರಮಳ್ಳಿ ಗ್ರಾಮದ ಜ್ಯೋತಿ ಮತ್ತು ಮಣಿಗೆ ಸ್ವಂತ ಹಣದಲ್ಲಿ ಹೊಸ ಮನೆ ನಿರ್ಮಿಸಿಕೊಟ್ಟ ಎಎಸ್‌ಐ ದೊರೆಸ್ವಾಮಿ, ಪತ್ನಿ ಚಂದ್ರಿಕಾ ಶುಭ ಹಾರೈಸಿದರು

ಎಚ್‌.ಡಿ.ಕೋಟೆ: ತಂದೆ ತಾಯಿಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಪೊಲೀಸ್‌ ಅಧಿಕಾರಿಯೊಬ್ಬರು ದತ್ತ ಪಡೆದು, ಅವರ ಬಾಳನ್ನು ಹಸನಾಗಿಸುವ ರಕ್ಷಕರಾಗಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಸ್ವಂತ ಹಣದಲ್ಲಿ ಅವರಿಗೆ ಸೂರನ್ನೂ ಕಲ್ಪಿಸಿದ್ದಾರೆ.

ತಾಲೂಕಿನ ಹಂಪಾಪುರ ಪೊಲೀಸ್‌ ಉಪ ಠಾಣೆ ಎಐಎಸ್‌ ಆಗಿರುವ ದೊರೆಸ್ವಾಮಿ ಈಮಹಾತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವಮೂಲಕ ಮಾದರಿಯಾಗಿದ್ದಾರೆ. ಈ ಕಾರ್ಯಕ್ಕೆ ಅವರ ಪತ್ನಿ ಚಂದ್ರಿಕಾ ಕೂಡ ಸಾಥ್‌ ನೀಡಿದ್ದಾರೆ.

ತಾಲೂಕಿನ ಶಿರಮಳ್ಳಿಯ ದೊಡ್ಡೇಗೌಡ- ಸಣ್ಣಮ್ಮ ದಂಪತಿ ಕಳೆದ 8 ವರ್ಷ ಹಿಂದೆನಿಧನರಾಗಿದ್ದರು.ಹೀಗಾಗಿಅವರಮಕ್ಕಳಾದ ಜ್ಯೋತಿ (17) ಮತ್ತು ಮಣಿ ಅನಾಥರಾಗಿದಿಕ್ಕು ತೋಚದಂತಾಗಿದ್ದರು. ಗ್ರಾಮದ ಒಬ್ಬರ ಸಹಕಾರದಿಂದ ಗ್ರಾಮದಲ್ಲಿದ ಶಿಥಿಲಾ ವಸ್ಥೆಯ ಮನೆಯೊಂದರಲ್ಲಿ ನೆಲೆಸಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ವಿಚಾರ ಎಎಸ್‌ಐ ದೊರೆಸ್ವಾಮಿಹಾಗೂ ಅವರ ಪತ್ನಿ ಚಂದ್ರಿಕಾಗೆ ತಿಳಿಯುತ್ತಿದ್ದಂತೆಯೇ ಖುದ್ದು ಗ್ರಾಮಕ್ಕೆ ಹೋಗಿ ಈ ಇಬ್ಬರು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡು ಇವರ ವಿದ್ಯಾಭ್ಯಾಸದಹೊಣೆ ವಹಿಸಿಕೊಂಡರು. ಜ್ಯೋತಿಯನ್ನು ಖಾಸಗಿ ಪಿಯು ಕಾಲೇಜಿಗೆ ದಾಖಲಿಸಿದ್ದಾರೆ.

ಆನ್‌ಲೈನ್‌ ತರಗತಿ ನೆರವಾಗಲು ಸ್ಮಾರ್ಟ್‌ ಫೋನ್‌ಕೊಡಿಸಿದ್ದಾರೆ. ಈ ಇಬ್ಬರು ಹೆಣ್ಣುಮಕ್ಕಳು ಶಿಥಿಲಾ ವಸ್ಥೆಯ ಮನೆಯಲ್ಲಿದ್ದರಿಂದ ಮರುಗಿದದೊರೆಸ್ವಾಮಿ, 2.50 ಲಕ್ಷ ರೂ. ವೆಚ್ಚದಲ್ಲಿಮನೆ ದುರಸ್ತಿಪಡಿಸಿ, ಹೊಸ ಸೂರನ್ನು ಕಲ್ಪಿಸಿದ್ದಾರೆ. ಸೋಮವಾರ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿಸಿದರು. ಬಂದ ಅತಿಥಿಗಳಿಗೆ ಬೆಳಗಿನ ಉಪಾಹಾರ ವ್ಯವಸ್ಥೆಯನ್ನೂ ಮಾಡಿದ್ದರು. ದೊರೆಸ್ವಾಮಿ ದಂಪತಿ ನೂತನ ಮನೆಯನ್ನುಹೆಣ್ಣುಮಕ್ಕಳಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.

ಸಮಾಜಮಖೀ ದೊರೆಸ್ವಾಮಿ :  ಕೋವಿಡ್, ಲಾಕ್‌ಡೌನ್‌ ಅವಧಿಯಲ್ಲಿ ಎಎಸ್‌ಐ ದೊರೆಸ್ವಾಮಿ 25 ಸಾವಿರಕ್ಕೂ ಅಧಿಕ ಮಂದಿಗೆ ಉಚಿತ ಮಾಸ್ಕ್ವಿತರಣೆ, ಬಡವರಿಗೆ ಆಹಾರದ ಕಿಟ್‌ ಮತ್ತು ಶಾಲಾಕಾಲೇಜು ಗಳ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದ್ದಾರೆ. ಸಮಾಜಮುಖೀ ದೊರೆಸ್ವಾಮಿ ಸೇವಾಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರೆಂದರೆ ತುಸು ಭಯ ಪಡುವಂತಹ ಸನ್ನಿವೇಶದಲ್ಲಿ ದೊರೆಸ್ವಾಮಿ ಹಲವರ ಬದುಕಿಗೆ ವೈಯಕ್ತಿಕವಾಗಿ ನೆರವಾಗುವ ಮೂಲಕ ಔದಾರ್ಯ ಮೆರೆದಿದ್ದಾರೆ.

ಎಚ್‌.ಬಿ. ಬಸವರಾಜು

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಚಿದ್ದ 5 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ದೋಚಿದ್ದ 5 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

girls hostel

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

s-t-somashekhar

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ತರಹ: ಎಸ್‌ಟಿ ಸೋಮಶೇಖರ್

9lake

23 ವರ್ಷದ ನಂತರ ತುಂಬಿದ ಹಳೇಬೀಡು ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.