Udayavni Special

75 ಕಿ.ಮೀ., 91 ವೃತ್ತಗಳಲ್ಲಿ ಆಕರ್ಷಕ ದೀಪಾಲಂಕಾರ


Team Udayavani, Sep 13, 2019, 1:03 PM IST

mysuru-tdy-2

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ದಸರಾ ದೀಪಾಲಂಕಾರದ ಭಿತ್ತಿಚಿತ್ರ ಬಿಡುಗಡೆ ಮಾಡಿದರು.

ಮೈಸೂರು: ದಸರಾ ಪ್ರಯುಕ್ತ ಈ ವರ್ಷ ನಗರದ ರಸ್ತೆಗಳಲ್ಲಿ 75 ಕಿ.ಮೀ. ಹಾಗೂ 91 ವೃತ್ತಗಳಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಎಂಜಿನಿಯರ್‌ಗಳು ಹಾಗೂ ನಗರದ ವಿದ್ಯುತ್‌ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆ ಮಾದರಿ ದೀಪಾಲಂಕಾರ ಮಾಡ ಲಾಗುವುದು. ಕಳೆದ ವರ್ಷ 54 ಕಿ.ಮೀ. ಹಾಗೂ 49 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ದೀಪಾಲಂಕಾರದಲ್ಲಿ ಕೆಲ ಬದಲಾವಣೆ ಮಾಡಿದ್ದು, ನಗರದ ಹೊರ ವರ್ತುಲ ರಸ್ತೆಯ 42 ಕಿ.ಮೀ. ರಸ್ತೆಗೂ ದೀಪಾಲಂಕಾರ ಮಾಡ ಲಾಗುವುದು. ಜೊತೆಗೆ ಸದ್ಯ ಆಯ್ಕೆ ಮಾಡಿ ರುವ 91 ವೃತ್ತಗಳಲ್ಲದೇ ಇನ್ನೂ ಜನನಿಬಿಡ ವೃತ್ತಗಳಿದ್ದರೆ ಅವುಗಳನ್ನೂ ಸೇರ್ಪಡೆ ಮಾಡಲಾಗು ವುದು ಎಂದರು.

ಇದೇ ಮೊದಲ ಬಾರಿಗೆ ಚಾಮರಾಜನಗರ ದಸರೆಗೆ 15 ಲಕ್ಷ ರೂ. ಹಾಗೂ ಶ್ರೀರಂಗಪಟ್ಟಣ ದಸರೆಗೆ 10 ಲಕ್ಷ ರೂ. ವೆಚ್ಚದಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಿಂದ ದೀಪಾ ಲಂಕಾರ ಮಾಡಿಸಲಾಗುತ್ತಿದೆ.

ಗಡುವು: ಸೆ.25ರೊಳಗೆ ವಿದ್ಯುತ್‌ ದೀಪಾಲಂಕಾರ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜಂಬೂಸವಾರಿ ಮುಗಿದ ಮರು ದಿನ ದೀಪಾಲಂಕಾರವು ಸ್ಥಗಿತಗೊಳ್ಳಲಿದೆ ಎಂಬ ದೂರುಗಳಿರುವುದರಿಂದ, ದಸರಾ ನಂತರ ಮೈಸೂರಿಗೆ ಬರುವ ಪ್ರವಾಸಿಗರಿಗೆ ಉಲ್ಲಾಸ ತರಲು ದಸರೆ ಉದ್ಘಾಟನೆ ದಿನದಿಂದ ಚಾಮುಂಡೇಶ್ವರಿಯ ತೆಪ್ಪೋತ್ಸವದವರೆಗೂ ಈ ಬಾರಿ ನಗರದಲ್ಲಿ ದೀಪಾಲಂಕಾರ ಇರಲಿದೆ. ವಿದ್ಯುತ್‌ ದೀಪಾಲಂಕಾರಕ್ಕೆ ಸುಮಾರು 3.5 ಕೋಟಿ ವೆಚ್ಚ ತಗುಲಲಿದ್ದು, ಈ ಹಣವನ್ನು ಸೆಸ್ಕ್ ಭರಿಸಲಿದೆ ಎಂದರು.

ನಿಯೋಜನೆ: ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿ, ವಿದ್ಯುತ್‌ ದೀಪಾಲಂ ಕಾರ ಸುಮಾರು 15 ದಿನಗಳ ಕಾಲ ಇರಲಿದ್ದು, ಪ್ರತಿ ವೃತ್ತಕ್ಕೆ ಒಬ್ಬ ಇಂಜಿನಿಯರ್‌ ಮತ್ತು ಲೈನ್‌ಮನ್‌ನ್ನು ನಿಯೋಜಿಸಲಾಗುವುದು. ಜೊತೆಗೆ ದಿನದ 24 ಗಂಟೆ ಕಾಲ ಸರ್ವೀಸ್‌ ವಾಹನ ಕೂಡ ಕಾರ್ಯಾ ಚರಣೆಯಲ್ಲಿರಲಿದೆ. ಪ್ರವಾಸಿಗರು ಮತ್ತು ಸಾರ್ವ ಜನಿಕರು ವಿದ್ಯುತ್‌ ದೀಪಾಲಂಕಾರವನ್ನು ನೋಡಿ ಆನಂದಿಸಿ, ಆದರೆ, ವಿದ್ಯುತ್‌ ದೀಪಾಲಂ ಕಾರವನ್ನು ಮುಟ್ಟುವುದು, ಸೆಲ್ಫಿ ತೆಗೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಮೊದಲಾದವರು ಸಭೆಯಲ್ಲಿದ್ದರು.

ಟಾಪ್ ನ್ಯೂಸ್

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನೆಗಳು ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷರು

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷಣೆ

ಪುಷ್ಕಳ ಆಹಾರ ಸೇವಿಸಿ ವಿಶ್ರಾಂತಿ ಪಡೆದ ಅಭಿಮನ್ಯು ತಂಡ „ ಮಾವುತರು, ಕಾವಾಡಿಗರ ಕುಟುಂಬಕ್ಕೆ ಭೋಜನ ಕೂಟ

ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ದಸರಾ ಗಜಪಡೆ

ದಸರಾ copy

ಅರಮನೆಯಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.