ಟಿಕೆಟ್‌ ರಹಿತ ಪ್ರವೇಶ ತಡೆಯಲು ಬಾರ್‌ಕೋಡಿಂಗ್‌


Team Udayavani, Aug 20, 2017, 11:50 AM IST

mys5.jpg

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆಗೆ ಅಕ್ರಮವಾಗಿ ನುಸುಳುವವರು ಹಾಗೂ ಟಿಕೆಟ್‌ ಇಲ್ಲದೇ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಈ ಬಾರಿ ಬಾರ್‌ಕೋಡಿಂಗ್‌ ಟಿಕೆಟ್‌ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಂಜೆ ಮಾಧ್ಯಮ ಸಮನ್ವಯತೆ ಕುರಿತಂತೆ ಮಾಧ್ಯಮದವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ದಸರಾ ಸಂದರ್ಭದಲ್ಲಿ ಆಗುತ್ತಿದ್ದ ಅನಗತ್ಯ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಲೆಕ್ಕ ಮತ್ತು ಆಡಿಟ್‌ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳು ಈ ಲೆಕ್ಕಪತ್ರಗಳ ನಿರ್ವಹಣೆ ಮಾಡಲಿದ್ದಾರೆ.

ಅಲ್ಲದೇ, 2017ರ ದಸರಾ ಮಹೋತ್ಸವದ ಖರ್ಚಿನ ಕುರಿತು ಅಂದಾಜು ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ನೇತೃತ್ವದ ಎಸ್ಟಿಮೇಟ್‌ ಕಮಿಟಿ ಮುಂದೆ ಮಂಡಿಸಿ ಅನುಮೋದನೆ ಪಡೆಯುವಂತೆ ಎಲ್ಲಾ ಉಪ ಸಮಿತಿಗಳಿಗೆ ಸೂಚಿಸಲಾಗಿದೆ. ಉಪ ಸಮಿತಿಗಳು ಖರ್ಚು ಮಾಡಿದ ಅನುದಾನಕ್ಕೆ ಜಿಪಂ ಲೆಕ್ಕಾಧಿಕಾರಿಗಳು ಲೆಕ್ಕಪತ್ರ ಬಿಡುಗಡೆ ಮಾಡಲಿದೆ. ಖರ್ಚು ವೆಚ್ಚದ ಬಗ್ಗೆ ಸಮಿತಿ ನಿಗಾ ವಹಿಸಲಿದೆ ಎಂದರು.

ಉಪ ಸಮಿತಿಗೆ ಸೂಚನೆ: ಈ ಬಾರಿಯ ದಸರಾ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಪಟ್ಟಿ ನೀಡುವಂತೆ ಉಪ ಸಮಿತಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ದಸರಾ ಕಾರ್ಯಕ್ರಮಗಳ ಬಗ್ಗೆ ಸಿದ್ಧತೆ ಮಾಡುತ್ತಿದ್ದು, ಈ ವಾರದಲ್ಲಿ ಅಧಿಕಾರೇತರ ಸಮಿತಿ ರಚಿಸಿ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಇನ್ನೊಂದು ಸಭೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ದಸರಾ ಮಹೋತ್ಸವಕ್ಕೆ ಸರ್ಕಾರ 15 ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದು, ಮುಂಗಡವಾಗಿ 10 ಕೋಟಿ ರೂ. ನೀಡುವಂತೆ ಆರ್ಥಿಕ ಇಲಾಖೆಗೆ ಕೇಳಲಾಗಿದೆ. ಶೀಘ್ರ ಬಿಡುಗಡೆಯಾಗಲಿದೆ ಎಂದರು.

ಆನೆಗೆ ವಿಮೆ: ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮೂರು ಹಂತದಲ್ಲಿ ಪ್ರೀಮಿಯಂ ಪಾವತಿಸಿ ವಿಮೆ ಮಾಡಿಸಲಾಗಿದೆ. ಅರ್ಜುನ ಸೇರಿದಂತೆ 15 ಆನೆಗಳಿಗೆ ಒಟ್ಟು 42 ಲಕ್ಷ ರೂ., ಮಾವುತರು ಮತ್ತು ಕಾವಾಡಿಗಳು ಸೇರಿ 30 ಮಂದಿಗೆ ತಲಾ ಒಂದು ಲಕ್ಷದಂತೆ 30 ಲಕ್ಷ ರೂ. ವಿಮೆ ಮಾಡಲಾಗಿದ್ದು, ನ್ಯೂ ಇಂಡಿಯಾ ಇನ್ಶೂರೆನ್‌Ò, ಮತ್ತು ಯುನೈಟೆಡ್‌ ಇಂಡಿಯಾ ವಿಮಾ ಕಂಪನಿಗಳಿಗೆ ಪ್ರೀಮಿಯಂ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ನಿರ್ಮಲಾ ಇದ್ದರು.

ಟಾಪ್ ನ್ಯೂಸ್

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

71aaa

ಅಲ್ಪಸಂಖ್ಯಾತ ಬಾಂಧವರೇ ಕಾಂಗ್ರೆಸ್ ಗೆ ಒಮ್ಮೆ ಪಾಠ ಕಲಿಸಿ:ಹಾನಗಲ್ ನಲ್ಲಿ ಸಿಎಂ

1-wqq

ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

1-rrr

ಸೋಲಿಸಿದವನ ಬಳಿಯೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

19election

ಉಪ ಚುನಾವಣೆ: ಸುಗಮ ಮತದಾನಕ್ಕೆ ಸಕಲ ವ್ಯವಸ್ಥೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

18anganavadi

ಅಂಗನವಾಡಿ ಆವರಣದಲ್ಲಿ ಕಂಗೊಳಿಸುತ್ತಿದೆ ಕೈತೋಟ

KRS

ಜೀವನಾಡಿ ಕೆಆರ್‌ಎಸ್‌ ಡ್ಯಾಂ ಅಂತೂ ಭರ್ತಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.