ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರ ಕೊಡುಗೆ ಕಾರಣ


Team Udayavani, Jun 27, 2018, 12:27 PM IST

m3-bangalorina.jpg

ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ವಂದೇ ಮಾತರಂ ಸಮಿತಿ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಿಗೆ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ನೀಡಲಾಯಿತು. 

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ರಮೇಶ್‌ ನಾಯಕ್‌(ವೈದ್ಯಕೀಯ ಕ್ಷೇತ್ರ), ಮಲ್ಲೇಶ್‌(ಪೊಲೀಸ್‌ ಇಲಾಖೆ), ಉಮಾಶಂಕರ್‌(ಸಹಕಾರಿ ಕ್ಷೇತ್ರ), ಮಾದೇಶ್‌, ಸೈಯದ್‌ ರಹಮತ್‌ ಉಲ್ಲಾ(ಸಾಮಾಜಿಕ ಕ್ಷೇತ್ರ), ಉಮೇಶ್‌(ನ್ಯಾಯಾಂಗ ಇಲಾಖೆ), ರಾಮ್‌ಪ್ರಸಾದ್‌(ಉನ್ನತ ಶಿಕ್ಷಣ), ತೇಜಸ್‌ ಶಂಕರ್‌(ಶಿಕ್ಷಣ ಕ್ಷೇತ್ರ), ಕಡಕೋಳ ಜಗದೀಶ್‌(ಸಾಂಸ್ಕೃತಿಕ ಕ್ಷೇತ್ರ) ಅವರಿಗೆ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಸಮಾಜ ಸೇವಕ ಡಾ.ಕೆ.ರಘುರಾಂ ಮಾತನಾಡಿ, ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ, ಪರಿಕಲ್ಪನೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾಡಪ್ರಭು ಕೆಂಪೇಗೌಡರ ರಾಜಾಳ್ವಿಕೆಯೇ ಮುಖ್ಯ ಕಾರಣವಾಗಿದೆ.

ಹೀಗಾಗಿ ಕತ್ತಿವರಸೆ, ಮಲ್ಲಕಾಳಗ, ರಾಜನೀತಿ, ಆರ್ಥಿಕತೆ ನಿರ್ವಹಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕೆಂಪೆಗೌಡರ ಜಯಂತಿಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸುವ ಮೂಲಕ ಅವರ ಕೊಡುಗೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯದ ಮಾರ್ಗ ಕಲ್ಪಿಸಬೇಕಿದೆ ಎಂದರು. 

ವಂದೇ ಮಾತರಂ ಸಮಿತಿ ಅಧ್ಯಕ್ಷ ಪ್ರದೀಪ್‌ ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜನಾಂಗ ಅಥವಾ ಪ್ರದೇಶಕ್ಕೆ ಸೀಮಿತವಾದವರಲ್ಲ. ಕರುನಾಡಿನ ಅಭಿವೃದ್ಧಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಮೂಲಕ ವಿಶ್ವಮಾನವರಾಗಿದ್ದಾರೆ. ಹೀಗಾಗಿ ಐದು ಶತಮಾತನದ ಹಿಂದೆ  ಬೆಂಗಳೂರು ನಗರವನ್ನು ಸ್ಥಾಪಿಸಿದ ಕೆಂಪೇಗೌಡರ ಜಯಂತಿಯನ್ನು ವಿಶ್ವದೆಲ್ಲಡೆ ಆಚರಿಸಬೇಕಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಂದೇ ಮಾತರಂ ಸಮಿತಿಯ ಅಜಯ್‌ ಶಾಸಿ, ಗುರುದತ್ತ, ಜೆಡಿಎಸ್‌ ಮುಖಂಡ ಪ್ರಕಾಶ್‌ ಪ್ರಿಯದರ್ಶನ್‌, ಗಿರೀಶ್‌ಗೌಡ, ರಾಮು, ಅಭಿಷೇಕ್‌, ಬಸವಣ್ಣ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ತಲಪಾಡಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿ ಪರಾರಿ

ತಲಪಾಡಿ :ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿಗಾಗಿ ಶೋಧಕಾರ್ಯ

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಚಿದ್ದ 5 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ದೋಚಿದ್ದ 5 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

girls hostel

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

s-t-somashekhar

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ತರಹ: ಎಸ್‌ಟಿ ಸೋಮಶೇಖರ್

9lake

23 ವರ್ಷದ ನಂತರ ತುಂಬಿದ ಹಳೇಬೀಡು ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನ

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಮಂಗಗಳ ಅನುಮಾನಾಸ್ಪದ ಸಾವು

ಕೋತಿಗಳ ಅನುಮಾನಾಸ್ಪದ ಸಾವು..!

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಸಿದ್ದು ವಿರುದ್ಧ ದೂರು

ಸಿದ್ದು, ಲಾಡ್‌ ವಿರುದ್ಧ ಪೊಲೀಸರಿಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.