ಭಕ್ತರಿಲ್ಲದ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆ

ಅರಣ್ಯದೊಳಗಿರುವ ಮಹದೇಶ್ವರಸ್ವಾಮಿ ದೇವರಿಗೆ ವಿಶೇಷ ಪೂಜೆ

Team Udayavani, Dec 15, 2020, 2:09 PM IST

ಭಕ್ತ ರಿಲ್ಲದ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆ

ಎಚ್‌.ಡಿ.ಕೋಟೆ: ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ತಾಲೂಕಿನ ಪ್ರಸಿದ್ಧ ಬೇಲದ ಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆ ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಜರುಗಿತು. ಶಾಸಕ ಅನಿಲ್‌ ಚಿಕ್ಕಮಾದು ಉಪಸ್ಥಿತಿಯಲ್ಲಿ ಬೆರಳೆಣಿಕೆ ಯಷ್ಟು ಮಂದಿ ದೇವಸ್ಥಾನ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಅಚರಿಸಲಾಯಿತು. ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು

ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಯಡಿಯಾಲ ವನ್ಯಜೀವಿ ಸಂರಕ್ಷಿತ ಪ್ರದೇಶದ ಅರಣ್ಯದೊಳಗಿರುವಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ತಾಲೂ ಕಿನಲ್ಲಿಯೇ ಹೆಸರುವಾಸಿ ಯಾಗಿದೆ. ಪ್ರತಿ ವರ್ಷ 3-4 ದಿನಗಳ ಕಾಲ ದೇವರಿಗೆ ಅಭಿಷೇಕ, ಹೋಮ, ಹಾಲರವಿ ಸೇವೆ, ಕೊಂಡೋತ್ಸವ, ರಾಸುಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಜಾತ್ರೆಗೆ ತಾಲೂಕಿನ ಭಕ್ತರಷ್ಟೇ ಅಲ್ಲದೆ ನೆರೆಹೊರೆಯ ತಾಲೂಕು, ಜಿಲ್ಲೆಗಳಿಂದ ಸಹಸ್ರಾರು ಮಂದಿ ಆಗಮಿಸುತ್ತಿದ್ದರು.

ಆದರೆ, ಈ ವರ್ಷ ಕೋವಿಡ್ ಭೀತಿ ಕಾರಣ ಸರ್ಕಾರದ ಆದೇಶದಂತೆ ಬೇಲದಕುಪ್ಪೆ ಜಾತ್ರೆಗೆ ಭಕ್ತರುಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಕಳೆದ 2 ದಿನಗಳ ಹಿಂದಿನಿಂದ ಸ್ಥಳ ದಲ್ಲಿಯೇಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿ ಅರಣ್ಯ ಇಲಾಖೆ ಮುಖ್ಯ ದ್ವಾರದ ಚೈನ್‌ಗೇಟ್‌ ಬಳಿಯಲ್ಲಿಯೇ ಪ್ರವೇಶ ನಿರ್ಬಂಧ ವಿಧಿಸಿದ್ದರು. ವಿಷಯ ತಿಳಿಯದೇಜಾತ್ರೆಗೆಂದುಆಗಮಿಸಿದ್ದಭಕ್ತಾದಿಗಳು ಅನ್ಯ ಮಾರ್ಗ ಕಾಣದೆ ನಿರಾಸೆಯಿಂದ ನಿರ್ಗಮಿಸಿದರು. ಈ ದಿನ ಅರಣ್ಯ ಇಲಾಖೆ ವಾಹನದಲ್ಲಿ ದೇವಸ್ಥಾನ ಸಮಿತಿಯ ಸುಮಾರು 40ರಿಂದ 50 ಮಂದಿ ಸದಸ್ಯರಿಗಷ್ಟೇ ಪ್ರವೇಶನೀಡಲಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಭಕ್ತರು ಶಾಸಕ ಸಿ.ಅನಿಲ್‌ ಚಿಕ್ಕಮಾದು ಉಪಸ್ಥಿತಿಯಲ್ಲಿ ಕೊಂಡೋತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಪ್ರತಿವರ್ಷ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಆಚರಣೆ ಕಾಣುತ್ತಿದ್ದ ಮಹದೇಶ್ವರ ಸ್ವಾಮಿ ಜಾತ್ರೆಯು ಈ ಬಾರಿ ಭಕ್ತರಿಲ್ಲದೇ ಸಂಭ್ರಮ ಕಳೆದುಕೊಂಡಿತ್ತು. ಈ ವೇಳೆಯಡಿಯಾಲ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಕುಮಾರ್‌,ವಲಯಅರಣ್ಯಾಧಿಕಾರಿ ಮಂಜುನಾಥ್‌ ಸೇರಿದಂತೆ ಇಲಾಖೆ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ವರ್ಷಕಕೊಮ್ಮೆ ಮಾತ್ರ ಭಕ್ತರಿಗೆ ದೇಗುಲ ಪ್ರವೇಶ : ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಜಾಗವನ್ನುಕಳೆದ2-3 ವರ್ಷಗಳ ಹಿಂದೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸುತ್ತಿದ್ದಂತೆಯೇ ದೇವರ ದರ್ಶನಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದರಿಂದಕುಪಿತರಾದ ವಿವಿಧ ಗ್ರಾಮಗಳ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡುವೆ ವೈಷಮ್ಯ ಭುಗಿ ಲೆದಿತ್ತು.ಆಗ ಅರಣ್ಯ ಇಲಾಖೆಯಲ್ಲಿರಿಸಿದ್ದ ಮರಗಳಿಗೆ ಬೆಂಕಿ ಇಟ್ಟು ಭಾರೀ ವಿವಾದ ಸೃಷ್ಟಿಸಲಾಗಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಂತಿ ಸಭೆ ನಡೆಸಿ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಪ್ರವೇಶ ನೀಡಲು ಮೌಖೀಕವಾಗಿ ಅನುಮತಿ ನೀಡಲಾಗಿತ್ತು. ಅದರಂತೆಕಳೆದ ವರ್ಷ ಜಾತ್ರೆ ನಡೆದಿತ್ತು. ಸಾಮಾನ್ಯ ದಿನಗಳಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ದೇಗುಲದ ಸನ್ನಿಧಿಯಲ್ಲೇ ಮೂವರು ಅರ್ಚಕರಕುಟುಂಬಗಳಿಗೆ ನೆಲೆಸಿದ್ದು, ಇವರು ಮಾತ್ರ ದೇಗುಲದಲ್ಲಿ ಪೂಜಾಕೈಂಕರ್ಯ ನಡೆಸುವರು.

 

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

Arrest of another youth who had links with suspected militants

ಶಂಕಿತ ಉಗ್ರರ ಸಂಪರ್ಕ ಹೊಂದಿದ್ದ ಮತ್ತೋರ್ವ ಯುವಕನ ಬಂಧನ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

4

ಶಿರಸಿ: ಪೋಕ್ಸೋ ಕಾಯ್ದೆ ಪ್ರಕರಣದಲ್ಲಿನ ಆರೋಪಿ ಬಂಧನ

2

ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

ಹುಣಸೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆ

1-asdad

ಹುಣಸೂರು ಪಿಎಲ್‌ಡಿ ಬ್ಯಾಂಕ್: 35.55 ಲಕ್ಷ ನಷ್ಟ; 5.29ಕೋಟಿ ರೂ ಸಾಲ ಬಾಕಿ

ರಾಹುಲ್ ಗಾಂಧಿ ಬಂದರೆ ಕಮಲ ಅರಳುತ್ತದೆ: ಸಿಎಂ‌ ಬೊಮ್ಮಾಯಿ ವ್ಯಂಗ್ಯ

ರಾಹುಲ್ ಗಾಂಧಿ ಬಂದರೆ ಕಮಲ ಅರಳುತ್ತದೆ: ಸಿಎಂ‌ ಬೊಮ್ಮಾಯಿ ವ್ಯಂಗ್ಯ

tdy-8

ಮರಗಳ ಕಳವು ಆರೋಪ: ಆದಿವಾಸಿ ಸೆರೆ

mysore chamundeshwari temple

ರಾಷ್ಟ್ರಪತಿಯವರಿಂದ ದಸರಾ ಉದ್ಘಾಟನೆ: ಸಾರ್ವಜನಿಕರಿಗೆ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

Arrest of another youth who had links with suspected militants

ಶಂಕಿತ ಉಗ್ರರ ಸಂಪರ್ಕ ಹೊಂದಿದ್ದ ಮತ್ತೋರ್ವ ಯುವಕನ ಬಂಧನ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

4

ಶಿರಸಿ: ಪೋಕ್ಸೋ ಕಾಯ್ದೆ ಪ್ರಕರಣದಲ್ಲಿನ ಆರೋಪಿ ಬಂಧನ

3

ಹುಣಸೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆ

2

ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.