Udayavni Special

ಕೋವಿಡ್ ಭೀತಿ ಜತೆ ಹಕ್ಕಿ ಜ್ವರ: ಜಿಲ್ಲೆಯಲ್ಲಿ ಕಟ್ಟೆಚ್ಚರ


Team Udayavani, Jan 6, 2021, 1:01 PM IST

ಕೋವಿಡ್ ಭೀತಿ ಜತೆ ಹಕ್ಕಿ ಜ್ವರ:  ಜಿಲ್ಲೆಯಲ್ಲಿ ಕಟ್ಟೆಚ್ಚರ

ಹಕ್ಕಿಜ್ವರ ಭೀತಿ ಹಿನ್ನೆಲೆ ನಗರದ ಖಾಲಿ ನಿವೇಶನ ದಲ್ಲಿ ಕೋಳಿ ಮರಿಗಳನ್ನು ಸುರಿದಿರುವುದು.

ಮೈಸೂರು: ಕೋವಿಡ್ ದಿಂದ ಇಡೀ ವ್ಯವಸ್ಥೆ ತತ್ತರಿಸಿದ್ದು, ಅದು ಚೇತರಿಸಿಕೊಳ್ಳುವ ಮುನ್ನವೇ ಮತ್ತೂಂದು ಭೀತಿ ಎದುರಾಗಿದೆ.ಪಕ್ಕದ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಪ್ರಕರಣ ದೃಢವಾಗಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ದೇಶದ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿಹಕ್ಕಿಜ್ವರ ಪ್ರಕರಣಗಳು ದೃಢವಾಗಿರುವಬೆನ್ನಲ್ಲೆ, ಜಿಲ್ಲೆಯ ಗಡಿ ಭಾಗದಲ್ಲಿಅರಣ್ಯ ಇಲಾಖೆಯ ಅಧಿಕಾರಿಗಳಕಟ್ಟೆಚ್ಚರ ವಹಿಸುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಲಸೆಹಕ್ಕಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಮೈಸೂರು ಹಾಗೂಸುತ್ತಮುತ್ತ ಇರುವ ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಲಿಂಗಾಂಬುಧಿ ಕೆರೆ ಸೇರಿದಂತೆ ವಲಸೆ ಹಕ್ಕಿಗಳುಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಅವುಗಳ ಚಲನವಲನಗಳ ಮೇಲೆ ಗಮನ ಇಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ಹಕ್ಕಿಗಳು ಮೃತಪಟ್ಟರೆ,ಅಸ್ತವ್ಯಸ್ತವಾದ ಹಕ್ಕಿಗಳುಕಂಡುಬಂದರೆ ಕೂಡಲೆ ಇಲಾಖೆಯಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸ್ಥಳದಲ್ಲಿ ಕೆಲಸ ಮಾಡುವಸಿಬ್ಬಂದಿಗೆ ತಿಳಿಸಲಾಗಿದೆ.

2 ಹಕ್ಕಿಗಳ ವರದಿ ನೆಗೆಟಿವ್‌: ಪೆಲಿಕನ್‌ ಹಕ್ಕಿಗಳು ಚಳಿಗಾಲದ ವೇಳೆಗೆ ಉತ್ತರ ಭಾರತದ ಮೂಲಕ ದಕ್ಷಿಣ ಭಾರತಕ್ಕೆ ವಲಸೆ ಬಂದುಕೆಲಕಾಲ ನೆಲೆಸುತ್ತವೆ. ಹೀಗೆ ಈ ಬಾರಿಅಕ್ಟೋಬರ್‌ ವೇಳೆ ವಲಸೆ ಬಂದಿದ್ದಪೆಲಿಕನ್‌ ಹಕ್ಕಿಗಳ ಪೈಕಿಕೊಕ್ಕರೆಬೆಳ್ಳೂರಿನಲ್ಲಿ 2 ಪೆಲಿಕನ್‌ಹಕ್ಕಿಗಳು ಅನುಮಾನಾಸ್ಪದವಾಗಿಸಾವನ್ನಪ್ಪಿದ್ದವು. “ಸಾವನ್ನಪ್ಪಿದ್ದಹಕ್ಕಿಗಳಿಗೆ ಹಕ್ಕಿ ಜ್ವರ ಇತ್ತೇ ಎಂದುಮಾಡಿಸಿದ ಪರೀಕ್ಷೆಯಲ್ಲಿ ನೆಗೆಟಿವ್‌ಫ‌ಲಿತಾಂಶ ಬಂದಿದ್ದು, ಸದ್ಯಕ್ಕೆಗಾಬರಿಯಾಗುವ ಅವಶ್ಯಕತೆ ಇಲ್ಲ’ಎಂದು ಡಿಸಿಎಫ್ ಕೆ.ಸಿ.ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಮೈಸೂರಿನಲ್ಲಿ ಇದೇ ರೀತಿ ಹಕ್ಕಿಜ್ವರ ಪ್ರಕರಣ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡು ಮುಂಜಾಗ್ರತಾಕ್ರಮವಾಗಿ ಸಾವಿರಾರು ಕೋಳಿಗಳನ್ನು ಸಾಯಿಸಲಾಗಿತ್ತು.

ಮೃಗಾಲಯದಲ್ಲಿ ನಿಗಾ :

ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿ ಜ್ವರದ ಆತಂಕವಿಲ್ಲ ಎಂದು ಮೃಗಾಲಯ ನಿರ್ದೇಶಕ ಅಜಿತ್‌ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ನೆರೆರಾಜ್ಯ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು ಪಕ್ಷಿಗಳು ಸಾವನ್ನಪ್ಪುತ್ತಿವೆ. ನಮ್ಮ ಮೃಗಾಲಯದಲ್ಲಿ ಸಾವಿರಾರುಪಕ್ಷಿಗಳಿದ್ದು, ಹಕ್ಕಿ ಜ್ವರ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರುಮೃಗಾಲಯಕ್ಕೆ ಆಗಮಿಸುವ ಮುನ್ನ ಔಷಧಿ ಸಿಂಪಡಿಸಿರುವ ಫ‌ೂಟ್‌ ಮ್ಯಾಟ್‌ಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಮೃಗಾಲಯ ಪ್ರವೇಶಿಸಿದ್ದಾರೆ. ಪ್ರವಾಸಿಗರಿಂದ ಹಕ್ಕಿಗಳಿಗೆಹಾಗೂ ಹಕ್ಕಿಗಳಿಂದ ಪ್ರವಾಸಿಗರಿಗೆ ಹಕ್ಕಿ ಜ್ವರ ಹರಡದಂತೆಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಈಗಾಗಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ನೀಡಿರುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಮೃಗಾಲಯದ ವೈದ್ಯರು ಎಲ್ಲ ಪಕ್ಷಿಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಕ್ಕಿಜ್ವರ ತಡೆಗಟ್ಟುವಿಕೆ ಸಂಬಂಧ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವಲಸೆ ಹಕ್ಕಿಗಳು ಕಾಣಿಸಿಕೊಳ್ಳುವ ಕಡೆಏನೆಲ್ಲಾ ಮಾಡಬೇಕೆಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿದೆ. ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ನಮ್ಮನ್ನು ಸಂಪರ್ಕಿಸು ವಂತೆ ಹೇಳಿದ್ದೇವೆ. ಕೆ.ಸಿ.ಪ್ರಶಾಂತ್‌ ಕುಮಾರ್‌, ಡಿಸಿಎಫ್ ಮೈಸೂರು.

24 ಗಂಟೆಗಳ ಕಾಲ ನಮ್ಮ ವೈದ್ಯರು ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತೆವಹಿಸುತ್ತಿದ್ದಾರೆ. ಎಲ್ಲ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಹರಡದಂತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವಾಸಿಗರು ಆತಂಕಪಡಬೇಕಿಲ್ಲ. ಎಲ್‌.ಆರ್‌ ಮಹಾದೇವಸ್ವಾಮಿ, ಅಧ್ಯಕ್ಷರು ಮೃಗಾಲಯ ಪ್ರಾಧಿಕಾರ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಂಡಕ್ಕೆ ಮರಳಿದ ಶಕಿಬ್‌

ತಂಡಕ್ಕೆ ಮರಳಿದ ಶಕಿಬ್‌

ಬೆಳಗಾವಿ ಕುರಿತಾದ  ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

whatsapp posts status reassuring privacy commitment after new privacy update

ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್

Phone numbers of WhatsApp Web users reportedly found on Google Search

ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !

gulam

ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ

siddu

ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ ;ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ

siddaramaiah

ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ: ಸಿದ್ದರಾಮಯ್ಯ

‘Sahebru Bandave’ Drama Show

‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ

Fund raising for Ram Mandir

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಆರ್.ಶಂಕರ್

ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಆರ್.ಶಂಕರ್

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ತಂಡಕ್ಕೆ ಮರಳಿದ ಶಕಿಬ್‌

ತಂಡಕ್ಕೆ ಮರಳಿದ ಶಕಿಬ್‌

ಬೆಳಗಾವಿ ಕುರಿತಾದ  ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

whatsapp posts status reassuring privacy commitment after new privacy update

ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್

Phone numbers of WhatsApp Web users reportedly found on Google Search

ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.