ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು
Team Udayavani, Jan 28, 2022, 12:57 PM IST
ಮೈಸೂರು: ಮೈಸೂರು ಜಿಲ್ಲೆಯ ಸಂಸದರು ಮತ್ತು ಶಾಸಕರ ನಡುವಿನ ಕಲಹ ಮತ್ತೆ ಜಗಜ್ಜಾಹೀರಾಗಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ವಪಕ್ಷೀಯ ಶಾಸಕರೇ ಆರೋಪ ಮಾಡುತ್ತಿದ್ದಾರೆ.
ಶಾಸಕರಿಗಿಂತ ಹೆಚ್ಚಿನ ಅಂತರದಲ್ಲಿ ಮತಗಳಿಸಿದ್ದೇನೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಎಲ್.ನಾಗೇಂದ್ರ, “ನಾವು ನಮ್ಮ ಕಾರ್ಯಕರ್ತರು ಕಾರ್ಪೋರೇಟರ್‌ಗಳೆಲ್ಲಾ ಓಡಾಡಿ ವೋಟ್ ಹಾಕಿಸಿದ್ದೇವೆ. ಕಾರ್ಯಕರ್ತರು, ಕಾರ್ಪೋರೇಟರ್‌ಗಳಿಲ್ಲದಿದ್ರೆ ಗೆಲ್ಲಲಾಗದು. ಜೆಡಿಎಸ್ ನವರು ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಲೀಡ್ ನಲ್ಲಿ ಗೆದ್ದಿದ್ದಾರೆ ಎಂದು ಟಾಂಗ್ ನೀಡಿದರು.
ನಾನು ಕೂಡ ಈ ಬಾರಿ ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕೆ ಹೊರತು ಮಾತಿನಿಂದಲ್ಲ ಎಂದು ಎಲ್.ನಾಗೇಂದ್ರ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಆರೋಪದಿಂದ ನನ್ನ, ಪಕ್ಷದ ನಾಯಕರ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈಗಾಗಲೇ ನಾನು ಪಕ್ಷದ ನಾಯಕರ ಗಮನಕ್ಕೆ ವಿಚಾರವನ್ನು ತಂದಿದ್ದೇನೆ ಎಂದರು.
ಇದನ್ನೂ ಓದಿ:ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್
ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರವಾಗಿ ಮಾತನಾಡಿದ ಶಾಸಕರು, ಅಗೆದ ರಸ್ತೆಯನ್ನ ಪ್ರತಾಪ್ ಸಿಂಹ ಬಂದು ಮುಚ್ಚುತ್ತಾರಾ? ರಸ್ತೆ ಹಾಳಾಗುವ ಯೋಜನೆ ಮಾಡಲು ನಾವು ಬಿಡುವುದಿಲ್ಲ. ಈಗಷ್ಟೇ ರಸ್ತೆಗೆ ಡಾಂಬರು ಹಾಕಿಸಿದ್ದೇವೆ. 500 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುತ್ತಾರೆ. 300 ಕೋಟಿ ರೂಪಾಯಿ ಡ್ಯಾಮೇಜ್‌ಗೆ 99 ಕೋಟಿ ರೂ ಕೊಟ್ಟರೆ ಸಾಕಾಗುತ್ತಾ ಎಂದು ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆಯಿಂದ ಸಿಎಫ್ ಟಿಆರ್ಐನಲ್ಲಿ ಟೆಕ್ ಭಾರತ್
ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ
ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK
ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ
ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ