ಕೈ ಬೀಸಿ ಕರೆಯುತಿದೆ ರುಚಿಕರ ಆಹಾರ, ಕೇಕ್‌ ಉತ್ಸವ

Team Udayavani, Dec 28, 2017, 5:21 PM IST

ಮೈಸೂರು: ನಗರದಲ್ಲಿ ನಡೆಯುತ್ತಿರುವ ಮಾಗಿ ಉತ್ಸವದ ಅಂಗವಾಗಿ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿ
ಸಿರುವ 3 ದಿನಗಳ ಆಹಾರ ಮತ್ತು ಕೇಕ್‌ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೈಸೂರು ಜಿಲ್ಲಾ ಹೋಟೆಲ್ಸ್‌, ರೆಸ್ಟೋರೆಂಟ್ಸ್‌, ಬೇಕರಿ ಮಾಲಿಕರ ಸಂಘ, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಆಯೋಜಿಸಿರುವ ಮಾಗಿ ಆಹಾರ ಮತ್ತು ಕೇಕ್‌ ಉತ್ಸವವನ್ನು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಿ ಮಾತನಾಡಿದರು. 

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ವೇಳೆ ನಗರ ಕ್ಕಾಗಮಿಸುವ ಪ್ರವಾಸಿಗರನ್ನು ಆಕರ್ಷಿ ಸುವ ನಿಟ್ಟಿನಲ್ಲಿ ಆಯೋಜಿಸಿರುವ ಆಹಾರ ಮತ್ತು ಕೇಕ್‌ ಉತ್ಸವದಲ್ಲಿ ವಿಭಿನ್ನ ಶೈಲಿಯ ತಿನಿಸುಗಳು, ಆಕರ್ಷಕ ವಿನ್ಯಾಸದ ಕೇಕ್‌ಗಳು ಹಾಗೂ ಬಾಯಿಚಪ್ಪರಿಸುವಂತಹ ಸ್ವೀಟ್ಸ್‌ ಗಳು ಉತ್ಸವದ ಆಕರ್ಷಣೆ ಹೆಚ್ಚಿಸುವಂತಿವೆ.

ಕೇಕ್‌ಗಳ ಆಕರ್ಷಣೆ: ರುಚಿಕರ ಆಹಾರ ತಿನಿಸಿಗಳ ಜತೆಗೆ ನೋಡುಗರ ಗಮನ ಸೆಳೆಯುವ ಹಲವು ವಿನ್ಯಾಸದ ಕೇಕ್‌ಗಳು ನೋಡುಗರ ಗಮನ ಸೆಳೆಯುತ್ತಿವೆ. ಪ್ರಮುಖವಾಗಿ ಡಾಲ್ಫಿನ್‌ ಮಳಿಗೆಯಲ್ಲಿ 50 ಕೆ.ಜಿ.ಯಲ್ಲಿ ತಯಾರಿಸಿರುವ 5 ಅಡಿ ವೆಡ್ಡಿಂಗ್‌ ಕೇಕ್‌, 14 ಕೆ.ಜಿ.ಯ ಕಿಡ್ಸ್‌ ಕೇಕ್‌, ಬಾರ್‌ ಡೌಲ್‌, ಡಿಸೈನ್‌ ಐಸ್‌ ಕ್ರೀಂ ಕೇಕ್‌, ಕ್ಯಾಮೆರಾ ಕೇಕ್‌, ಕೋಕ್‌ ಕೇಕ್‌, ಬುಕ್ಸ್‌ಟೈಪ್‌ ಕೇಕ್‌ ಮಾದರಿ ಆಕರ್ಷಣೀಯವಾಗಿದೆ. ಇನ್ನೂ ಲಾಯಲ್‌ ವರ್ಲ್ಡ್ ಗ್ರೂಪ್‌ಗೆ ಸೇರಿದ ಅರೋಮ ಮಳಿಗೆಯಲ್ಲಿ ಕೇಕ್‌ಗಳ ಹೊಸದೊಂದು ಲೋಕವೇ ಅನಾವರಣಗೊಂಡಿದೆ. ಗೌನ್‌ ತೊಟ್ಟ ಯುವತಿ ಆಕಾರದ ಬೃಹತ್‌ ಕೇಕ್‌ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಜತೆಗೆ ಪ್ಯಾಲೇಸ್‌ ಸ್ವೀಟ್ಸ್‌ ಮಳಿಗೆಯಲ್ಲಿ ಒಂದರಿಂದ 25ಕೆ.ಜಿ. ತೂಕದ ಬಗೆ ಬಗೆಯ ಶೈಲಿಯ ಕೇಕ್‌ ತಯಾರಿಸಿ ಪ್ರದರ್ಶನ, ಮಾರಾಟಕ್ಕೆ ಇಡಲಾಗಿದೆ. ಅಲ್ಲದೆ ವಿವಿಧ ಬಗೆಯ ಕೇಕ್‌ಗಳು, ಬ್ರೆಡ್‌ಗಳು, ಬನ್‌ ಗಳು, ಚಾಕಲೇಟುಗಳು, ಸಿಹಿ ತಿನಿಸಿಗಳು ಬಾಯಿ ಚಪ್ಪರಿಸುವಂತೆ ಮಾಡಿದೆ. 

61 ಮಳಿಗೆಗಳು: 3 ದಿನಗಳ ಉತ್ಸವದಲ್ಲಿ 61 ಮಳಿಗೆಗಳಿದ್ದು ಗಿರಿದರ್ಶಿನಿ, ಕಾವೇರಿ, ಕಪಿಲ, ಸುವರ್ಣಾವತಿ ವಿಭಾಗಗಳನ್ನು ತೆರೆಯಲಾಗಿದೆ. ಉತ್ಸವದಲ್ಲಿ ನವನೀತ್‌ ಕೇಟರರ್, ಡಾಮಿನಸ್‌ ಪಿಜಾ, ಡೈರಿಡೇ, ಆರೋಮಾ ಬೇಕರಿ, ಕಣ್ಣನ್‌ ಬೇಕರಿ, ಮಾಸ್ಟರ್‌ ಬೇಕರಿ, ಮಹಾಲಕ್ಷಿ ಸ್ವೀಟ್ಸ್‌, ರೀಗಲ್‌ ಬೇಕರಿ, ಡಾಲ್ಫಿನ್‌ ಬೇಕರಿ, ಸ್ವೀಟ್‌ ಪ್ಯಾಲೇಸ್‌, ಪ್ರಿನ್ಸ್‌ಬೇಕರಿ ಸೇರಿ ಇನ್ನಿತರ ಮಳಿಗೆಗಳಿವೆ. ಜತೆಗೆ ಸಿಹಿ ತಿನಿಸು ಪ್ರಿಯರನ್ನು ಆಕರ್ಷಿಸುವ ಹಲವು ಬಗೆಯ ಸ್ವೀಟ್ಸ್‌ಗಳೂ ಪ್ರದರ್ಶನದಲ್ಲಿ ಸವಿಯಬಹುದಾಗಿದೆ.

ರುಚಿಕರ ಆಹಾರ: ಆಹಾರ ಮೇಳದಲ್ಲಿ ಬಾಗಲಕೋಟೆ ಜೋಳದ ರೊಟ್ಟಿ, ದೋಸಾ ಪಾಯಿಂಟ್‌, ಆದಿವಾಸಿ ಹಾಡಿ
ಮನೆ ಆರೋಗ್ಯದಾಯಕ ಊಟ, ವೆಜ್‌ಬೊಂಬು ಬಿರಿಯಾನಿ, ನವಣೆ ಪಾಯಸ, ಗೆಣಸು- ಜೇನುತುಪ್ಪ, ಮೊಗಳಿಬೇರು ಟೀ, ಬೇಯಿಸಿದ, ಉರಿದ ಅವರೆಕಾಯಿ ತಿಂಡಿ-ತಿನಿಸು ತಿಂದು ಸಂತಸಗೊಳ್ಳಬಹುದು. 

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ