ಪಿರಿಯಾಪಟ್ಟಣ ಹಾಲಿ ಮಾಜಿ, ಶಾಸಕರು, ಕಾರ್ಯಕರ್ತರ ಪ್ರಚಾರ


Team Udayavani, Nov 26, 2019, 3:00 AM IST

piriyapa

ಪಿರಿಯಾಪಟ್ಟಣ: ನೆರೆ ಹುಣಸೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಪ್ರಚಾರದಲ್ಲಿ ತಾಲೂಕಿನ ಹಾಲಿ ಮಾಜಿ ಶಾಸಕರು ಹಾಗೂ ಕಾರ್ಯಕರ್ತರ ಅಬ್ಬರ ಜೋರಾಗಿದೆ. ರಾಜ್ಯ ರಾಜಕಾರಣದ ಅಳಿವು ಉಳಿವು, ರಾಜಕಾರಣದ ದಿಕ್ಸೂಚಿಯ ಚುನಾವಣೆ ಎಂದು ಬಿಂಬಿತವಾಗಿರುವ ರಾಜ್ಯದ 17 ಕ್ಷೇತ್ರಗಳ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಚುನಾವಣೆಯೂ ಗಮನ ಸೆಳೆದಿದೆ.

ಪ್ರಥಮ ಚುನಾವಣೆ: ಮೊದಲನೆಯದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ, ಇವರು ವಿರೋಧ ಪಕ್ಷದ ನಾಯಕರಾಗಿ ಆಧಿಕಾರ ವಹಿಸಿಕೊಂಡ ನಂತರ ಪ್ರಥಮವಾಗಿ ನಡೆಯುತ್ತಿರುವ ಚುನಾವಣೆ ಇದಾಗಿದೆ. ತಮ್ಮ ರಾಜಕೀಯ ವೈರಿ ಎಚ್‌.ವಿಶ್ವನಾಥ್‌ ಅವರನ್ನು ಸೋಲಿಸಿ ತಮ್ಮ ಆಪ್ತ ಎಚ್‌.ಪಿ.ಮಂಜುನಾಥ್‌ ಅವರನ್ನು ಗೆಲ್ಲಿಸುವ ಪಣ ಹಾಗೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಯುತ್ತಿರುವ ಎಂಬಿತ್ಯಾದಿ ಕಾರಣಗಳಿಂದ ಹುಣಸೂರು ಉಪಚುನಾವಣೆ ರೋಚಕತೆ ಪಡೆದಿದೆ.

ಪಿರಿಯಾಪಟ್ಟಣ-ಹುಣಸೂರು ನಂಟು: ನೆರೆಯ ತಾಲೂಕಾದ ಹುಣಸೂರಿಗೂ ಪಿರಿಯಾಪಟ್ಟಣಕ್ಕೂ ಅವಿನಾಭಾವ ಸಂಬಂಧ ಇದೆ. ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್‌ ಹಾಗೂ ಮಾಜಿ ಸಚಿವ ಕೆ.ವೆಂಕಟೇಶ್‌ ಹುಣಸೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮಾಜಿ ಸಚಿವ ಕೆ.ವೆಂಕಟೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಪರ ಹಬ್ಬನಕುಪ್ಪೆ, ಚಿಲ್ಕುಂದ, ನಾಗಮಂಗಲ, ಅತ್ತಿಕುಪ್ಪೆ, ಹನಗೋಡು, ಹೊನ್ನೇನಹಳ್ಳಿ, ವಡ್ಡಂಬಾಳು, ತಟ್ಟೆಕೆರೆ ಮತ್ತಿತರ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದರೆ, ಶಾಸಕ ಕೆ.ಮಹದೇವ್‌ ಅವರು ಜೆಡಿಎಸ್‌ ಅಭ್ಯರ್ಥಿ ಸೋಮಶೇಖರ್‌ ಪರ ಹುಣಸೂರು ಟೌನ್‌, ಬನ್ನಿಕುಪ್ಪೆ, ಹನಗೋಡು, ಬಿಳಿಕೆರೆ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನಳಿದಂತೆ ತಾಲೂಕಿನ ಗಡಿ ಭಾಗದ ಆಯಾಯ ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಬಂಧಿಕರ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ.

ಅದೇ ರೀತಿ ತಾಲೂಕು ಬಿಜೆಪಿ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ ಪರ ಅಲ್ಲಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪಿರಿಯಾಪಟ್ಟಣಕ್ಕೆ ಗಡಿಗೆ ಹೊಂದಿಕೊಂಡಂತಿರುವ ಹುಣಸೂರಿನ ಗ್ರಾಮಗಳಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಅಪಾರ ಅಭಿಮಾನಿಗಳಿದ್ದು, ಮತದಾರರು ಯಾರ ಪರವಾಗಿ ಮತ ನೀಡಿ ಯಾವ ಪಕ್ಷದ ಉತ್ತಮ ಅಭ್ಯರ್ಥಿಯನು ಗೆಲ್ಲಿಸುತ್ತಾರೆ ಚುನಾವಣಾ ನಂತರದ ಫ‌ಲಿತಾಂಶವನ್ನು ಕಾದು ನೋಡಬೇಕಾಗಿದೆ.

ಹಣ, ಹೆಂಡಕ್ಕಾಗಿ ದುಂಬಾಲು: ಪಿರಿಯಾಪಟ್ಟಣದಿಂದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಯುವಕರು ಗುಂಪು ಗುಂಪುಗಳನ್ನು ಮಾಡಿಕೊಂಡು ಮತಯಾಚಿಸುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ದಿನಕ್ಕಿಷ್ಟು ಹಣ, ಹೆಂಡ, ಪಾರ್ಟಿಗಳು ಕೂಡ ಸಿಗುತ್ತಿರುವುದು ಕಂಡು ಬರುತ್ತಿದೆ.

ಇದನ್ನು ಮನಗಂಡ ಕೆಲವು ಯುವಕರ ಗುಂಪು ಆಯಾಯ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿ ತಮ್ಮ ಕಡೆಯವರು ಆ ಊರಿನಲ್ಲಿದ್ದಾರೆ, ಈ ಊರಿನಲ್ಲಿದ್ದಾರೆ, ನಮಗೆ ಹಣ ನೀಡಿದರೆ ಅವರಿಂದ ಓಟು ಹಾಕಿಸುತ್ತೇವೆ ಎಂದು ದುಂಬಾಲು ಬೀಳುತ್ತಿರುವುದು ಕಂಡು ಬರುತ್ತಿದೆ.

* ಪಿ.ಎನ್‌.ದೇವೇಗೌಡ

ಟಾಪ್ ನ್ಯೂಸ್

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

goa

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

netaji subhash chandra bose

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ

1-chir

ಹುಣಸೂರು: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

ಅಲೆಮಾರಿ ಸಮುದಾಯಗಳಿಗೆ  ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

ಅಲೆಮಾರಿ ಸಮುದಾಯಗಳಿಗೆ ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

22power

ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್‌ ಪೂರೈಕೆಗೆ ಮನವಿ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

21plastic

ಪ್ಲಾಸ್ಟಿಕ್‌ ಧ್ವಜ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ

20life

ನಿತ್ಯ ಜೀವನಕ್ಕೆ ಸಾಹಿತ್ಯ ಪೂರಕವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.