650 ಕೆಜಿ ಭಾರ ಹೊತ್ತು ಸಾಗಿದ ಕ್ಯಾಪ್ಟನ್ ಅರ್ಜುನ


Team Udayavani, Sep 20, 2019, 5:04 PM IST

mysuru-tdy-1

ಮೈಸೂರು: ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಯಾದ ಜಂಬೂಸವಾರಿಯ ಪೂರ್ವಭಾವಿಯಾಗಿ ಗಜ ಪಡೆಗೆ ಭಾರ ಹೊರುವ ತಾಲೀಮು ಆರಂಭಿಸಲಾಯಿತು. ಅಕ್ಟೋಬರ್‌ 8ರಂದು ನಡೆಯಲಿರುವ ಜಂಬೂಸವಾರಿ ಯಂತೆಯೇ ತಾಲೀಮನ್ನೂ ನಡೆಸಲಾಯಿತು. ಮರಳು ಮೂಟೆ ತುಂಬಿದ ಮರದ ಅಂಬಾರಿಯನ್ನು ಅರ್ಜುನನ ಮೇಲೆ ಹೊರಿಸುವುದಕ್ಕಿಂತ ಮುಂಚಿತವಾಗಿ ಅರ್ಚಕ ಪ್ರಹ್ಲಾದರಾವ್‌ ಅರ್ಜುನನಿಗೆ ಪಂಚಫ‌ಲ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಅರ್ಜುನ ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಹಿಂದೆ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ, ವಿಕ್ರಮ, ಗೋಪಿ, ಈಶ್ವರ, ದುರ್ಗಾ ಪರಮೇಶ್ವರಿ, ಜಯಪ್ರಕಾಶ್‌, ಲಕ್ಷ್ಮೀ ಸೇರಿದಂತೆ ಒಟ್ಟು 11 ಆನೆಗಳು ಜಂಬೂಸವಾರಿ ಸಾಗುವ ದಾರಿಯಲ್ಲಿ ಸಾಗಿದವು. ಅರಮನೆಯಿಂದ ಅಭ್ಯಾಸ ಆರಂಭಿಸಿದ ಅರ್ಜುನ ಬನ್ನಿಮಂಟಪದವರೆಗೆ ಸಾಗಿ, ಅರಮನೆ ಆವರಣಕ್ಕೆ ಯಶಸ್ವಿಯಾಗಿ ವಾಪಸ್ಸಾದ.

ದಿನಕ್ಕೊಂದು ಆನೆಗೆ ತಾಲೀಮು: ಗುರುವಾರ ಬೆಳಗ್ಗೆ ನಡೆದ ಮರದ ಅಂಬಾರಿ ಹೊರುವ ತಾಲೀಮಿನಲ್ಲಿ ಅರ್ಜುನ ಭಾಗವಹಿಸಿದ್ದು, ಕ್ರೇನ್‌ ಬಳಸಿ ಆತನ ಬೆನ್ನಿಗೆ ಮರದ ಅಂಬಾರಿಯನ್ನು ಸೂಕ್ತರೀತಿಯಲ್ಲಿ ಕಟ್ಟಲಾಯಿತು. ಸುಮರು 380 ಕೆ.ಜಿ. ತೂಕದ ಮರದ ಅಂಬಾರಿ ಹಾಗೂ ಅದರೊಳಕ್ಕೆ ಸುಮಾರು 250 ಕೆ.ಜಿಯ ಮರಳಿನ ಮೂಟೆ ತುಂಬಿ ಒಟ್ಟು 600ರಿಂದ 650 ಕೆ.ಜಿ.ಯಷ್ಟು ಭಾರ ಹೊರುವ ತಾಲೀಮನ್ನು ರಾಜಮಾರ್ಗದಲ್ಲಿ ನಡೆಸಲಾಯಿತು. ಭಾರ ಹೊತ್ತಿದ್ದ ಅರ್ಜುನ ಬೆಳಗ್ಗೆ 8ಕ್ಕೆ ಅರಮನೆಯಿಂದ ಹೊರಟು 1.20 ಗಂಟೆ ಅವಧಿಯಲ್ಲಿ ಬನ್ನಿ ಮಂಟಪ ತಲುಪಿದ. ನಡುವೆ ಯಾವುದೇ ತೊಂದರೆ ಆಗ ಲಿಲ್ಲ ಎಂದು ವೈದ್ಯ ಡಾ. ನಾಗರಾಜ್‌ ಮಾಹಿತಿ ನೀಡಿದರು.

ಉಳಿದಂತೆ ಮೊದಲ ತಂಡದ ಆನೆಗಳಾದ ಅಭಿಮನ್ಯು, ಧನಂಜಯ, ಈಶ್ವರ ಆನೆಗಳಿಗೂ ಅಂಬಾರಿ ತಾಲೀಮು ನಡೆಯಲಿದೆ. ಪ್ರತಿ ದಿನ ಒಂದೊಂದು ಆನೆಗೆ ಈ ತಾಲೀಮು ನಡೆಸಲಾಗುವುದು. ಕ್ರಮೇಣವಾಗಿ ಭಾರದ ಪ್ರಮಾಣವನ್ನು ಒಟ್ಟು 750 ಕೆ.ಜಿ.ಗಳವರೆಗೆ (ಅಂಬಾರಿ 750 ಕೆ.ಜಿ. ಇರುವುದರಿಂದ) ಏರಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಆನೆ ಗಳಿಗೂ ತಾಲೀಮು ಕೈಗೊಳ್ಳಲಾಗುತ್ತದೆ. ಇದರಿಂದ ಎಲ್ಲವೂ ಸಿದ್ಧವಾದಂತೆ ಆಗುತ್ತದೆ ಹಾಗೂ ಪ್ರತಿ ಆನೆಗೂ ರೆಸ್ಟ್‌ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಡಿಸಿಎಫ್ ಅಲೆಕ್ಸಾಂಡರ್‌ ಮಾತನಾಡಿ, ದಸರಾ ಜಂಬೂ ಸವಾರಿಯು ಪ್ರಮುಖ ಆಕರ್ಷಣೆಯಾಗಿದ್ದು, ಈ ಸಂದರ್ಭ ಯಾವುದೇ ರೀತಿಯ ತೊಂದರೆಯಾಗದಂತೆ ಆನೆಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ. ಇಂದಿನಿಂದ ಮರದ ಅಂಬಾರಿ ಜೊತೆಗೆ ಮರಳಿನ ಮೂಟೆಯನ್ನು ಹೊರಿಸಿ ತಾಲೀಮು ಆರಂಭಿಸಿದ್ದು, 750 ಕೆ.ಜಿ.ಯ ಚಿನ್ನದ ಅಂಬಾರಿಯನ್ನು ಹೊರಲು ಸಕಲ ರೀತಿಯಲ್ಲಿ ಆನೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಸೆಲ್ಫಿಗೆ ಮುಗಿಬಿದ್ದ ಜನರು: ಬೆಳಗ್ಗೆ 8ರಿಂದ ಆರಂಭಗೊಂಡ ಆನೆಗಳ ಭಾರ ಹೊರುವ ತಾಲೀಮನ್ನು ನೂರಾರು ಮಂದಿ

ಕಣ್ತುಂಬಿಕೊಂಡರು. ಜೊತೆಗೆ ತಮ್ಮ ಮೊಬೈಲ್‌ಗ‌ಳಲ್ಲಿ ಮರದ ಅಂಬಾರಿಹೊತ್ತು ಸಾಗುತ್ತಿದ್ದ ಅರ್ಜುನ ಹಾಗೂ ಆತನ ಹಿಂದೆ ಸಾಗುತ್ತಿದ್ದ ಗಜಪಡೆಯ ಚಿತ್ರಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಉಳಿದಂತೆ ಅನೇಕರುಸೆಲ್ಫಿಗಳನ್ನು ತೆಗೆದುಕೊಂಡು ಸಂಭ್ರಮಿಸಿದರು

ಟಾಪ್ ನ್ಯೂಸ್

incident held at muddebihala

ಕಲುಷಿತ ನೀರು ಸೇವನೆ: ಇಬ್ಬರು ಸಾವು

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆಪ್ಪೋತ್ಸವ, ದೇವಿಗೆ ತೀರ್ಥ ಸ್ನಾನ, udayavanipaper, kannadanews,

ತೆಪ್ಪೋತ್ಸವ ಬದಲು ದೇವಿಗೆ ತೀರ್ಥ ಸ್ನಾನ

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನೆಗಳು ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷರು

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷಣೆ

ಪುಷ್ಕಳ ಆಹಾರ ಸೇವಿಸಿ ವಿಶ್ರಾಂತಿ ಪಡೆದ ಅಭಿಮನ್ಯು ತಂಡ „ ಮಾವುತರು, ಕಾವಾಡಿಗರ ಕುಟುಂಬಕ್ಕೆ ಭೋಜನ ಕೂಟ

ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ದಸರಾ ಗಜಪಡೆ

MUST WATCH

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

ಹೊಸ ಸೇರ್ಪಡೆ

17pipe

ಬೇಕಾಬಿಟ್ಟಿ ಪೈಪ್‌ಲೈನ್‌ ಕಾಮಗಾರಿಗೆ ವ್ಯಾಪಕ ಆಕ್ರೋಶ

incident held at muddebihala

ಕಲುಷಿತ ನೀರು ಸೇವನೆ: ಇಬ್ಬರು ಸಾವು

23smg7a

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಗೆ ಕುವೆಂಪು ವಿವಿ ಉಪನ್ಯಾಸಕರು

16vaccine

ಮೈಮೇಲೆ ದೇವ್ರು ಬಂದ್ರೂ ನಿಲ್ಲದ ಕೊರೊನಾ ಲಸಿಕೆ ನೀಡಿಕೆ!

Untitled-1

ಚಿಕ್ಕಮಗಳೂರು: ಅಕ್ರಮ ಗಾಂಜಾ ಸಾಗಾಟ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.