ಜಿಲ್ಲಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ


Team Udayavani, Jan 27, 2020, 3:00 AM IST

jilla-repo

ಮೈಸೂರು: ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯಿತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸೂಯೇಜ್‌ ಫಾರಂ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಾಗಪುರ ತ್ಯಾಜ್ಯ ನಿರ್ವಹಣೆ ಘಟಕದ ಮಾದರಿಯಲ್ಲಿ ಬಯೋಮೈನಿಂಗ್‌ ತಂತ್ರಾಂಶವನ್ನು ನಗರದಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಚಾಮುಂಡಿ ಬೆಟ್ಟದಲ್ಲಿ ಅನಧಿಕೃತ ಮಳಿಗೆ ತೆರವುಗೊಳಿಸಿ, ಅಲ್ಲಿನ ವ್ಯಾಪಾರಿಗಳಿಗೆ ಸುಸಜ್ಜಿತ ನೂತನ ಮಳಿಗೆ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ. ಇದರೊಂದಿಗೆ ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಂವಿಧಾನದ ಅಡಿಯಲ್ಲಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ರಾಜ್ಯದ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಹಲವಾರು ಜನಪರ ಕಾರ್ಯಕ್ರಮ ಕೈಗೊಂಡಿದೆ. ಜಿಲ್ಲೆಯ ಹಲವು ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿದ್ದವು. ಈ ಸಂದರ್ಭ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಪರಿಹಾರದ ನೆರವಿಗೆ ಜಿಲ್ಲೆಗೆ 60ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ನೆರೆಯಿಂದ ಜಿಲ್ಲೆಯ 4562.8 ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬೆಳೆ ನಷ್ಟದ ಪ್ರಮಾಣದ ಸಮೀಕ್ಷೆ ಪ್ರಗತಿಯಲ್ಲಿದ್ದು, ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಅತಿವೃಷ್ಟಿ ಹಾನಿಯ ಪ್ರದೇಶಗಳಲ್ಲಿ ಮೂಲ ಸೌಕರ್ಯ ಪುನರ್‌ ನಿರ್ಮಾಣಕ್ಕಾಗಿ 1.68 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 23 ಕಾಮಾಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಹಾನಿಯ ಪುನರ್‌ ನಿರ್ಮಾಣಕ್ಕಾಗಿ 12.66 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 21 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೈಸೂರು-ಬೆಂಗಳೂರು ನಡುವೆ 8 ಪಥದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮೈಸೂರಿನಿಂದ ವಿವಿಧೆಡೆಗಳಿಗೆ ವಿಮಾನ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.

ಮೈಸೂರು ಸ್ವತ್ಛತೆಯಲ್ಲಿ ಹಲವು ಬಾರಿ ನಂ.1 ಸ್ವತ್ಛನಗರ ಗರಿ ತನ್ನದಾಗಿಸಿಕೊಂಡಿದೆ. ಈ ಬಾರಿಯು ಅರಮನೆ ನಗರಿ ಮೈಸೂರಿಗೆ ಒಲಿಯಲಿ. ನಾಡು, ನುಡಿ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಎಲ್ಲರ ಕರ್ತವ್ಯವಾಗಿದೆ. ಒಳ್ಳೆಯತನ ಅಳವಡಿಸಿಕೊಂಡು ಉತ್ತಮ ಬದುಕು ನಡೆಸಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು. ಸುಬಾಹು ಇ-ಬೀಟ್‌ ಮಾಹಿತಿಯ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಶಾಸಕ ಎಲ್‌. ನಾಗೇಂದ್ರ, ಮೇಯರ್‌ ತಸ್ನಿಂ, ಉಪಮೇಯರ್‌ ಶ್ರೀಧರ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಇತರರು ಉಪಸ್ಥಿತರಿದ್ದರು.

ಗಮನ ಸೆಳೆದ ಪಥಸಂಚಲನ, ಮಕ್ಕಳ ನೃತ್ಯ
ಮೈಸೂರು: ಜಿಲ್ಲಾಡಳಿತದಿಂದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಕರ್ಷಕ ಪಥಸಂಚಲನ, ಶಾಲಾ ಮಕ್ಕಳ ನೃತ್ಯ ವೈಭವ, ಪೊಲೀಸ್‌ ಡಾಗ್‌ ಸ್ಕ್ವಾಡ್‌ ತಂಡದ ಚಮತ್ಕಾರ ಪ್ರದರ್ಶನ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರದ ವಾಹನದಲ್ಲಿ ಸಾಗಿದ ಅವರು, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ತದನಂತರ ನಡೆದ 24 ತುಕಡಿಗಳ ಪಥಸಂಚಲನ ಕಣ್ಮನ ಸೆಳೆಯಿತು.

ಅಶ್ವಾರೋಹಿದಳ, ಕೆಎಸ್‌ಆರ್‌ಪಿ, ಸಿಎಆರ್‌, ಡಿಎಆರ್‌, ಕೃಷ್ಣರಾಜ, ದೇವರಾಜ, ನರಸಿಂಹರಾಜ ವಿಭಾಗ, ನಗರ ಸಂಚಾರ ವಿಭಾಗ, ಮಹಿಳಾ ಪೊಲೀಸ್‌ ಪಡೆ, ಗೃಹರಕ್ಷಕ ದಳ, ಕೆಎಸ್‌ಆರ್‌ಪಿ, ಅಬಕಾರಿ, ಅರಣ್ಯ ಇಲಾಖೆಯ ಮಹಿಳಾ ಮತ್ತು ಪುರುಷರ ಪಡೆ, ಅಗ್ನಿಶಾಮಕ ದಳ, ಎನ್‌ಸಿಸಿ(ಭೂ ದಳ), ಎನ್‌ಸಿಸಿ(ನೌಕಾದಳ), ಎನ್‌ಸಿಸಿ(ವಾಯು ದಳ), ಪೊಲೀಸ್‌ ಪಬ್ಲಿಕ್‌ ಶಾಲೆ, ಮವೋದಯ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ, ಭಾರತ ಸೇವಾದಳ ಬಾಲಕ ಮತ್ತು ಬಾಲಕಿಯರ ತಂಡಗಳು ಪರೇಡ್‌ನ‌ಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದವು. ಕೊನೆಯಲ್ಲಿ ಪೊಲೀಸ್‌ ಬ್ಯಾಂಡ್‌ನ‌ ನಿನಾದದೊಂದಿಗೆ ಪಥಸಂಚಲನಕ್ಕೆ ತೆರೆ ಬಿದ್ದಿತು.

ಈ ಬಾರಿ ವಿಶೇಷವಾಗಿ ಆಯೋಜಿಸಿದ್ದ ಪೊಲೀಸ್‌ ಡಾಗ್‌ ಸ್ಕ್ವಾಡ್‌ ತಂಡದ ಚಮತ್ಕಾರ ಪ್ರದರ್ಶನ ಬೆರಗು ಮೂಡಿಸಿತು. ಎಆರ್‌ಎಸ್‌ಐ ಎಚ್‌.ಸಿ.ಹರೀಶ್‌ ನೇತೃತ್ವದಲ್ಲಿ ಸಿದ್ದೇಶ್‌, ಮಂಜುನಾಥ್‌, ಸತೀಶ್‌ ಇತರರು ಶ್ವಾನಗಳಿಂದ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡಿದರು. ಲೈಕಾ, ಲಕ್ಕಿ, ಬ್ರೂನೋ, ಹಿಂದು ಎಂಬ ಶ್ವಾನಗಳು ಮೊದಲಿಗೆ ನಮಸ್ಕರಿಸಿ, ಪರೇಡ್‌ ಮಾಡಿ, ನಂತರ ಕಳ್ಳರನ್ನ ಪತ್ತೆ ಹಚ್ಚುವುದು, ಬಾಂಬ್‌ ಪತ್ತೆ ಹಚ್ಚಿದ್ದು, ಜಿಗ್‌ ಜಾಗ್‌ ವಾಕ್‌ ಹೀಗೆ ಹತ್ತು ಹಲವು ಬಗೆಯ ಪ್ರದರ್ಶಗಳನ್ನು ನೀಡಿದವು. ಶ್ವಾನಗಳ ಕಾರ್ಯವೈಖರಿಯನ್ನು ನೋಡಿದ ಸಾರ್ವಜನಿಕರು ವಿಶೇಷವಾಗಿ ಶಾಲಾ ಮಕ್ಕಳು ಖುಷಿಪಟ್ಟರು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುವೆಂಪುನಗರದ ಪ್ರಮತಿ ಹಿಲ್‌ ವ್ಯೂವ್‌ ಅಕಾಡೆಮಿಯ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು “ಕದಂ ಸೆ ಕದಂ ಮಿಲಾಕೆ ಚಲೊ’ ಎಂಬ ಹಾಡಿಗೆ ನಾನಾ ಆಕೃತಿಯ ಪಿರಿಮಿಡ್‌ ಪ್ರದರ್ಶಿಸುವ ಜತೆಗೆ ನೃತ್ಯ ಮಾಡಿದರು. ಮರಿಮಲ್ಲಪ್ಪ ಪ್ರೌಢಶಾಲೆಯ 400 ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳಿಗೆ ಸೊಗಸಾಗಿ ನೃತ್ಯ ಮಾಡುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾರಿದರು. ಆರ್‌ಸಿಐಎಸ್‌ 350 ವಿದ್ಯಾರ್ಥಿಗಳು ನೃತ್ಯ ಗಮನ ಸೆಳೆಯಿತು.

“ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ: ಪ್ರತಿ ವರ್ಷ ಜಿಲ್ಲಾ ಸರ್ಕಾರಿ ನೌಕರರಿಗೆ ನೀಡುವ “ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ಇದೇ ವೇಳೆ ಕೆ.ಆರ್‌.ಆಸ್ಪತ್ರೆಯ ಸರ್ಜನ್‌ ಡಾ.ಬಿ.ಎಂ.ಶಶಿ, ತಾಪಂ ಇಒ ಸಿ.ಆರ್‌.ಕೃಷ್ಣಕುಮಾರ್‌, ಮೈಸೂರು ಮಹಾನಗರ ಪಾಲಿಕೆ ಗ್ರೂಪ್‌ ಬಿ ನೌಕರ ರಮೇಶ್‌ ಕುರಹಟ್ಟಿ, ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕ ಕೆ.ಅಶ್ವತ್ಥ್, ಜಿಲ್ಲಾಧಿಕಾರಿಗಳ ಎಫ್ಡಿಎಎಸ್‌ ಶ್ರೀನಿವಾಸ್‌, ನಂಜನಗೂಡು ಹುಳಿಮಾವು ಗ್ರಾಪಂ ಪಿಡಿಒ ಬಿ.ಎನ್‌. ನಳಿನಾ, ಎಚ್‌.ಡಿ.ಕೋಟೆ ಡಿ.ಬಿ.ಕುಪ್ಪೆ ವೃತ್ತ ಗ್ರಾಮ ಲೆಕ್ಕಿಗ ಗೌಸ್‌ ಮೋಹಿದಿನ್‌, ಎಚ್‌.ಡಿ.ಕೋಟೆಯ ಪಿಆರ್‌ಇಡಿ ಉಪವಿಭಾಗದ ಕಿರಿಯ ಅಭಿಯಂತರ ಎಸ್‌.ಲಿಂಗರಾಜು, ಎಚ್‌.ಡಿ.ಕೋಟೆಯ ಪಿಡಬ್ಲೂಡಿ ಕಿರಿಯ ಅಭಿಯಂತರ ಧ್ರುವರಾಜ್‌ ಅವರಿಗೆ ಪ್ರದಾನ ಮಾಡಲಾಯಿತು.

ಪಥಸಂಚಲನದ ವಿಜೇತರು: ಆಕರ್ಷಕ ಪಥ ಸಂಚಲನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಶಸ್ತ್ರ ವಿಭಾಗದಲ್ಲಿ ವಿಭಾಗದಲ್ಲಿ ಕೆಪಿಎಯ ಸೋಮಪ್ಪ ಗೌಡ(ಪ್ರಥಮ), ಡಿಎಆರ್‌ನ ಎಂ.ವೀರಭದ್ರಪ್ಪ(ದ್ವಿತೀಯ), ಸಿಎಆರ್‌ನ ಜೆ.ಧನಪ್ರಕಾಶ್‌(ತೃತೀಯ), ಶಸ್ತ್ರರಹಿತ ವಿಭಾಗದಲ್ಲಿ ಎನ್‌ಸಿಸಿ(ಆರ್ಮಿ)ಯ ಎಂ.ಭುವನ್‌ ಲೋಕೇಶ್‌(ಪ್ರ.), ಎನ್‌ಸಿಸಿ ನೌಕದಳದ ಜೆ.ಯಶವಂತ್‌ ಗೌಡ(ದ್ವಿ.), ಅಬಕಾರಿಯ ವಸಂತ(ತೃ.), ಶಾಲಾ ವಿಭಾಗದಲ್ಲಿ ಪೊಲೀಸ್‌ ಪಬ್ಲಿಕ್‌ ಶಾಲೆಯ ನವನೀತ(ಪ್ರ.), ನವೋದಯ ಬಾಲಕರ ತಂಡದ ಗೌತಮ್‌(ದ್ವಿ.), ಭಾರತ ಸೇವಾದಳ ಬಾಲಕಿಯರ ತಂಡದ ಜೆ.ಪ್ರಿಯ(ತೃ.), ಪೊಲೀಸ್‌ ಬ್ಯಾಂಡ್‌ ವಿಭಾಗದಲ್ಲಿ ಡಿಎಆರ್‌ನ ಸೋಮಶೇಖರ್‌, ಕೆಎಸ್‌ಆರ್‌ಪಿಯ ನಾಗೇಂದ್ರ, ಸಿಎಆರ್‌ನ ಅಂಥೋನಿ ಪ್ರಕಾಶ್‌ ಬಹುಮಾನ ಪಡೆದರು.

ಮೈದಾನಕ್ಕೆ ಪೊಲೀಸ್‌ ಭದ್ರತೆ: ಬನ್ನಿಮಂಟಪದಲ್ಲಿ ಆಯೋಜಿಸಿದ್ದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮೈದಾನದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಮೈದಾನದ ಪ್ರವೇಶ ದ್ವಾರಗಳಲ್ಲಿ ಲೋಹ ಶೋಧಕ ಯಂತ್ರಗಳನ್ನು ಇರಿಸಲಾಗಿತ್ತು. ಮೈದಾನದ ಸುತ್ತಲೂ ಆಯಕಟ್ಟಿನ ಸ್ಥಳದಲ್ಲಿ ಪೊಲೀಸರ ಕಣ್ಗಾವಲು ಇರಿಸಲಾಗಿತ್ತು.

ಟಾಪ್ ನ್ಯೂಸ್

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ

ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffsfsfd-dsff

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ಜನ್ಮದಿನೋತ್ಸವ

1-fdsfsdf

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

1-d-fsfsf

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ

14

ಹುಣಸೂರು: ಶ್ರೀ ಆಧಿಶಕ್ತಿ ಮಹಾಕಾಳಮ್ಮನವರ ಜಾತ್ರಾ ಮಹೋತ್ಸವ

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.