ಕಾಲೇಜಿಗೆ ಬಂದ ಬೆರಳೆಣಿಕೆ ವಿದ್ಯಾರ್ಥಿಗಳು

ಕೋವಿಡ್‌ ಟೆಸ್ಟ್‌ಗೆ ಹಿಂದೇಟು , ಶೇ.20ರಷ್ಟು,ಮಕ್ಕಳು,ಕಾಲೇಜಿಗೆ ಹಾಜರು

Team Udayavani, Nov 18, 2020, 3:07 PM IST

ಕಾಲೇಜಿಗೆ ಬಂದ ಬೆರಳೆಣಿಕೆ ವಿದ್ಯಾರ್ಥಿಗಳು

ಮೈಸೂರು: ಕೋವಿಡ್‌-19 ಹಿನ್ನೆಲೆ ಕಳೆದ 8 ತಿಂಗಳಿಂದ ಬಂದ್‌ ಆಗಿದ್ದ ಕಾಲೇಜುಗಳು ಶನಿವಾರ ದಿಂದ ಪುನಾರಂಭವಾಗಿವೆಯಾದರೂ, ಬೆರಳೆಣಿಕೆ ಮಂದಿ ಮಾತ್ರ ಹಾಜರಾಗಿದ್ದು ಕಂಡುಬಂದಿತು.

ಕೋವಿಡ್ ಕಾರಣದಿಂದ ಹಲವು ತಿಂಗಳ ಕಾಲ ಮುಚ್ಚಲ್ಪಟ್ಟಿದ್ದ ಕಾಲೇಜುಗಳು ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾಕಾಲೇಜುಗಳಲ್ಲಿ ಮುಂಜಾಗ್ರತೆಕ್ರಮಗಳೊಂದಿಗೆ ಹಲವುಹಲವು ಸಿದ್ಧತೆ ಮಾಡಿಕೊಂಡು ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರು ಮತ್ತು ಅಧ್ಯಾಪಕ ವರ್ಗದವರಿಗೆ ನಿರಾಸೆಕಾದಿತ್ತು. ನಗರ ಪ್ರದೇಶದ ಕಾಲೇಜುಗಳಿಗೆ ಶೇ.20ವಿದ್ಯಾರ್ಥಿಗಳು ಹಾಜರಾದರೆ, ಗ್ರಾಮೀಣ ಪ್ರದೇಶದಕಾಲೇಜುಗಳಲ್ಲಿ ಬೆರಳೆಣಿಕೆ ಮಕ್ಕಳು ಮಾತ್ರ ಹಾಜರಾದರು.

ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಮೊದಲ ದಿನ ತರಗತಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಮುಂಜಾನೆಯೇ ಸಿಬ್ಬಂದಿ ಕಾಲೇಜನ್ನು ಶುಚಿಗೊಳಿಸಿ, ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿ ಅಣಿ ಮಾಡಿದ್ದರು. ಜತೆಗೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಅನುಸರಿಸಬೇಕಾದ ಮಾರ್ಗಸೂಚಿನಿರ್ವಹಣೆ ಸಲುವಾಗಿ ಎಲ್ಲಾ ಕಾಲೇಜುಗಳಲ್ಲೂ ಉಪನ್ಯಾಸಕರನ್ನೊಳಗೊಂಡ ಟಾಸ್ಕ್ಫೋರ್ಸ್‌ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ವಿದ್ಯಾರ್ಥಿಗಳು ಕೋವಿಡ್‌ ಟೆಸ್ಟ್‌ ಮಾಡಿಸಿರುವ ಬಗ್ಗೆ ಪರಿಶೀಲಿಸುವುದು, ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸ್‌ ಮಾಡುವುದು, ತರಗತಿಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ನೋಡಿಕೊಳ್ಳುವಕೆಲಸ ನಿರ್ವಹಿಸುತ್ತಿದೆ.

ಕೋವಿಡ್ ಹರಡುವ ಭೀತಿ ಮನೆ ಮಾಡಿತ್ತು: ಬಹಳ ದಿನಗಳ ನಂತರ ಕಾಲೇಜು ಪ್ರವೇಶಿಸು ತ್ತಿರುವ ವಿದ್ಯಾರ್ಥಿಗಳಲ್ಲಿ ಉತ್ಸುಕತೆ ಕಂಡು ಬಂತಾದರೂ ಕೋವಿಡ್ ದಿಂದಾಗಿ ಬಹಳ ದಿನಗಳ ನಂತರ ಭೇಟಿಯಾದ ಸ್ನೇಹಿತರನ್ನು ಕೈ ಕುಲುಕಿ, ಪ್ರೀತಿಯಿಂದ ಆಲಂಗಿಸಿ ಮಾತನಾಡಿಸುವಂತಿಲ್ಲವೆಂಬ ಬೇಸರ ಒಂದೆಡೆಯಾದರೆ, ಕೊರೊನಾ ಹರಡುವ ಭೀತಿಯೂ ಮನೆಮಾಡಿತ್ತು. ಕಾಲೇಜು ಆವರಣ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ರೀನಿಂಗ್‌ ನಡೆಸುತ್ತಿರುವುದು, ಕೋವಿಡ್‌ ನೆಗೆಟಿವ್‌ ವರದಿ ಪರಿಶೀಲಿಸುವುದು, ಪಾಲಕರ ಒಪ್ಪಿಗೆ ಪತ್ರ ಪರಿಶೀಲಿಸುವುದು ಸಾಮಾನ್ಯವಾಗಿತ್ತು. ಜಾಗೃತಿ ಅಗತ್ಯ: ನಗರ ಸೇರಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲುಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.

ಗ್ರಾಮೀಣ ಪ್ರದೇಶ ದಲ್ಲಿರುವ ಕಾಲೇಜುಗಳಿಗೆ2,3, 5, 7, 12 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕ ಬೇಸರ ತರಿಸಿತು. ಗ್ರಾಮಾಂತರಪ್ರದೇಶದ ಮಕ್ಕಳಲ್ಲಿ ಕೋವಿಡ್‌ ಟೆಸ್ಟ್‌ ಮೇಲೆ ಭಯ ಮೂಡಿದ್ದು, ಕೋವಿಡ್ ಟೆಸ್ಟ್‌ ಮಾಡಿಸಿಕೊಂಡರೆಸೋಂಕು ಹರಡಲಿದೆ. ಕ್ವಾರಂಟೈನ್‌ಆಗಬೇಕು, ತರಗತಿಗೆ ಹೋದರೂ ಸೋಂಕು ಹರಡುತ್ತದೆ ಎಂಬೆಲ್ಲ ಭಯ ಆವರಿಸಿದೆ. ಇದುಕಾಲೇಜಿಗೆ ತೆರಳಲೂ ಹಿಂದೇಟು ಹಾಕುವಂತಾಗಿದೆ. ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರಲ್ಲಿಯೂ ಇದೇ ಭಾವನೆ ಇದ್ದು, ತಮ್ಮ ಮಕ್ಕಳನ್ನು ಕಾಲೇಜಿಗೆ ಹೋಗದಂತೆ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಆನ್‌ಲೈನ್‌ ತರಗತಿಯಲ್ಲೇ ಭಾಗವಹಿಸುವಂತೆ ತಾಕೀತು ಮಾಡಿರುವುದು ಸಾಮಾನ್ಯವಾಗಿತ್ತು.

ಒಟ್ಟಾರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕಾಲೇಜು ಪುನಾ ರಂಭವಾಗುತ್ತಿರುವ ಬಗ್ಗೆ ಹಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ ಎಂಬ ಬಗ್ಗೆ ಜಾಗೃತಿ ಕೊರತೆ ಎದ್ದು ಕಾಣುತಿತ್ತು.

ಕಾಲೇಜುಗಳಲ್ಲಿ ಆರೋಗ್ಯ ಇಲಾಖೆಯಿಂದ ಟೆಸ್ಟ್‌  :  ನಗರದ ಮಾನಸ ಗಂಗೋತ್ರಿ, ಮಹಾರಾಣಿ,ಮಹಾರಾಜ, ಯುವರಾಜ ಕಾಲೇಜು ಸೇರಿ ಹಲವುಕಾಲೇಜು ಆವರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನೇತೃತ್ವದ ತಂಡಕೋವಿಡ್‌ ಟೆಸ್ಟ್‌ ನಡೆಸಿತು. ಮುಂಜಾನೆಯಿಂದಲೆ ಕಾಲೇಜಿನ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಆಗಮಿಸಿ ಕೋವಿಡ್‌ ಟೆಸ್ಟ್‌ಗೆ ಒಳಗಾದರು. ಬಳಿಕ ವರದಿ ನೆಗೆಟಿವ್‌ ಬಂದ ವಿದ್ಯಾರ್ಥಿಗಳು ತರಗತಿಗೆ ತೆರಳಿದರು.

ಪರೀಕ್ಷಾ ವರದಿ ಇಲ್ಲದ್ದರಿಂದ ವಾಪಸ್‌ ಕಳುಹಿಸಿದರು. :  ಇನ್ನೂಕೆಲ ಕಾಲೇಜುಗಳಲ್ಲಿ ಹಲವು ವಿದ್ಯಾರ್ಥಿಗಳುಕೋವಿಡ್‌ ಟೆಸ್ಟ್‌ ಮಾಡಿಸದೆಯೇ ಹಾಗೆಯೇ ಕಾಲೇಜಿಗೆ ತೆರಳಿದ ಹಿನ್ನೆಲೆ,ಅವರನ್ನು ವಾಪಸ್‌ಕಳುಹಿಸಿದ ಪ್ರಸಂಗವೂನಡೆಯಿತು. ತರಗತಿಗೆ ಹಾಜರಾಗಲುಕೋವಿಡ್‌ ಟೆಸ್ಟ್‌ಕಡ್ಡಾಯವಾಗಿದ್ದು, ವರದಿ ನೆಗೆಟಿವ್‌ ಬಂದರಷ್ಟೇ ಪ್ರವೇಶ ಎಂದು ತಿಳಿವಳಿಕೆ ಹೇಳಿ ಟೆಸ್ಟ್‌ ವರದಿ ತರುವಂತೆ ವಿದಾರ್ಥಿಗಳಿಗೆ ಸೂಚನೆ ನೀಡಿ ವಾಪಸ್‌ ಕಳುಹಿಸಲಾಯಿತು.

ಮನೆಯತ್ತ ಸಾಗಿದರು :  ತಾಲೂಕು ಮತ್ತು ಹೋಬಳಿ ಕೇಂದ್ರದ ಕಾಲೇಜು ವಿದ್ಯಾರ್ಥಿಗಳು ಸಮೀಪದ ಆರೋಗ್ಯಕೇಂದ್ರಗಳಿಗೆ ತೆರಳಿ ಕೋವಿಡ್‌ಟೆಸ್ಟ್‌ ಮಾಡಿಸಿಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂದಿತು. ಜತೆಗೆ ಗಂಟೆಗಟ್ಟಲೆ ನಿಂತು ವರದಿ ಪಡೆದು ಮನೆಯತ್ತ ಸಾಗಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.