- Friday 13 Dec 2019
ತಮ್ಮ ಬೆಂಬಲ ಜೆಡಿಎಸ್ ಗೆಲುವಿಗೆ ವರದಾನ: ನಿಖಿಲ್
Team Udayavani, Apr 11, 2019, 3:00 AM IST
ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ವರದಾನವಾಗಲಿದೆ ಎಂದು ಕ್ಷೇತ್ರದ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಚಂದಗಾಲು ಗ್ರಾಮದಲ್ಲಿ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಜನಪರ ಯೋಜನೆಗಳಿಗೆ ಜನರು ಆದ್ಯತೆ ನೀಡಲಿದ್ದಾರೆ ಎಂದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸಾ.ರಾ.ಮಹೇಶ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಚುನಾವಣೆಯಲ್ಲಿ ನನ್ನ ಕೈಡಿಯಲಿವೆ. ಇದರ ಜತೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಜೆಡಿಎಸ್ ಬೆಂಬಲಿಸಲು ನಿರ್ಧರಿಸಿದ್ದಾರೆ. ಹಾಗಾಗಿ ನಮಗೆ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಖಿಲ್ ಪರ ಅಲೆ: ಸಚಿವ ಸಾ.ರಾ.ಮಹೇಶ್ ಮಾತನಾಡಿ, ಜನಸೇವೆ ಮಾಡಲು ರಾಜಕೀಯ ಕ್ಷೇತ್ರಕ್ಕೆ ಬಂದಿರುವ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸುಪುತ್ರ ನಿಖಿಲ್‌ಕುಮಾರಸ್ವಾಮಿ ಅವರನ್ನು ಚುನಾಯಿಸುವ ಮೂಲಕ ಜನಸೇವೆಗೆ ಅವರಿಗೊಂದು ಅವಕಾಶ ಮಾಡಿಕೊಡಿ. ಮಂಡ್ಯ ಲೋಕಸಭಾ ಕ್ಷೇತ್ರದಾದ್ಯಂತ ನಿಖಿಲ್‌ಕುಮಾರಸ್ವಾಮಿ ಪರವಾಗಿ ಉತ್ತಮ ಅಲೆಯಿದ್ದು, ಅವರ ಗೆಲುವು ನಿಶ್ಚಿತ. ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈಬಲಪಡಿಸಬೇಕು ಎಂದು ಕೋರಿದರು.
ನಿಖಿಲ್‌ಗೆ ಮುಜಗರ: ಡಿ.ಬಾಸ್‌ಗೆ ಜೈಕಾರ-ನಿಖಿಲ್‌ಕುಮಾರಸ್ವಾಮಿ ಅವರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಯುವಕರ ಗುಂಪೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರೇಳಿ ಡಿ.ಬಾಸ್‌ಗೆ ಜೈಕಾರದ ಘೋಷಣೆ ಕೂಗಿದಾಗ ಕೆಲ ಕ್ಷಣ ನಿಖಿಲ್‌ಕುಮಾರಸ್ವಾಮಿ ಮತ್ತು ಸಚಿವ ಸಾ.ರಾ.ಮಹೇಶ್ ಮುಜುಗರಕ್ಕೊಳಗಾದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಘೋಷಣೆ ಕೂಗುತ್ತಿದ್ದ ಯುವಕರನ್ನು ಚದುರಿಸಿದರು.
ಬಳಿಕ ನಿಖಿಲ್‌ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ತಾಲೂಕಿನ ಕಾಟ್ನಾಳು, ಚೀರ್ನಹಳ್ಳಿ, ಹೆಬ್ಟಾಳು, ಹೆಬ್ಟಾಳುಕೊಪ್ಪಲು, ಬ್ಯಾಡರಹಳ್ಳಿ, ಸಿದ್ದನಕೊಪ್ಪಲು, ಸಿದ್ದಾಪುರ, ಕಂಚುಗಾರಕೊಪ್ಪಲು, ಡಿ.ಕೆ.ಕೊಪ್ಪಲು, ಕೆಸ್ತೂರು, ಕೆಸ್ತೂರುಕೊಪ್ಪಲು, ಮಳಲಿ, ಮಾವತ್ತೂರು, ಮಾರಗೌಡನಹಳ್ಳಿ, ಹೊಸಕೊಪ್ಪಲು, ಶ್ರೀರಾಂಪುರ, ಚುಂಚನಕಟ್ಟೆ, ಹೊಸೂರು, ಮಾುಗೌಡನಹಳ್ಳಿ, ಹಾಡ್ಯ, ಹನಸೋಗೆ, ಕರ್ತಾಳು ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು.
ಈ ವೇಳೆ ಮುಡಾ ಅಧ್ಯಕ್ಷ ಜಯಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಯುವ ಜೆಡಿಎಸ್ ಅಧ್ಯಕ್ಷ ಎಚ್.ಆರ್.ಮಧುಚಂದ್ರ, ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ಮೈಸೂರು: "ನಾನು ಜೆಡಿಎಸ್ ಶಾಸಕನಾಗಿಯೇ ಮುಂದುವರಿಯುತ್ತೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ವಿಚಾರವಿಲ್ಲ' ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ...
-
ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ...
-
ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಮತ್ತು ಜಮೀನು ಮಂಜೂರಾದರೂ ಅಭಿವೃದ್ಧಿಗೊಳ್ಳದ ಸ್ಮಶಾನಗಳ ಅಭಿವೃದ್ಧಿ ಮತ್ತು ಹದ್ದುಬಸ್ತುನಲ್ಲಿಡುವ...
-
ಪಿರಿಯಾಪಟ್ಟಣ: ಪುರಸಭೆ ಸಿಬ್ಬಂದಿ ಕೊರತೆ, ಆಡಳಿತ ಮಂಡಳಿ ರಚನೆಯಾಗದಿರುವುದು ಹಾಗೂ ಲಂಚದ ಹಾವಳಿಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಿ ಪ್ರತಿದಿನ...
-
ತಿ.ನರಸೀಪುರ: ಶಿಕ್ಷಣದಿಂದ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವಿರುವುದರಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ...
ಹೊಸ ಸೇರ್ಪಡೆ
-
ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ, ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಡೆಗೂ ಎಚ್ಚೆತ್ತುಕೊಂಡಿದ್ದು 4G ಸೇವೆ...
-
ಹೊಸದಿಲ್ಲಿ: ಬಹು ಚರ್ಚಿತ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದು, ಇನ್ನು ಕಾಯ್ದೆಯಾಗಿ ಜಾರಿಗೆ ಬರಲಿದೆ. ನರೇಂದ್ರ...
-
ಹರ್ಯಾಣ: ವಿಶೇಷ ಚೇತನ ಬಾಲೆಯ ಮೇಲೆ ಕಾಮಾಂಧನೊಬ್ಬ ಅತ್ಯಾಚಾರ ಎಸಗಿದ ಘಟನೆ ಫತೆಹಾಬಾದ್ ನ ಲುಥೇರಾ ಗ್ರಾಮದಲ್ಲಿ ನಡೆದಿದೆ. 13ರಿಂದ 14 ವಯಸ್ಸಿನ ವಿಶೇಷ ಚೇತನ ಬಾಲಕಿ...
-
ಹೊಸದಿಲ್ಲಿ: ಸತತ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿಗೆ ವರುಣದೇವ ಸ್ವಲ್ಪ ಸಮಾಧಾನ ತಂದಿದ್ದಾನೆ. ಗುರುವಾರ ರಾತ್ರಿ ಆಲಿಕಲ್ಲು ಸೇರಿದಂತೆ...
-
ರಾಂಚಿ: ಜಾರ್ಖಂಡ್ನಲ್ಲಿ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯು ಡಿಸೆಂಬರ್ 16 ರಂದು ನಡೆಯಲಿದ್ದು, ನಾಲ್ಕು ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ....