ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಆಕ್ರೋಶ, ¬ಶಾಸಕರಿಗೆ ಡಿಸಿ ಪತ್ರ ಬರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ : ಮಂಜುನಾಥ್‌

Team Udayavani, Nov 28, 2020, 12:29 PM IST

ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

ಮೈಸೂರು: ಕಳೆದ ನಾಲ್ಕು ದಿನಗಳಿಂದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ನಡುವೆ ನಡೆಯುತ್ತಿರುವ ಜಟಾಪಟಿ ತಾರಕಕೇರಿದ್ದು, ಶುಕ್ರವಾರ ಕಾಂಗ್ರೆಸ್‌ ಶಾಸಕರು ಸುದ್ದಿಗೋಷ್ಠಿ ನಡೆಸುವ ಮೂಲಕ ಜಿಲ್ಲಾಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದರು.

ನಗರ ಕಾಂಗ್ರೆಸ್‌ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್‌.ಪಿಮಂಜುನಾಥ್‌, ಕಳೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಗಳ ಮುಂದೆ ಜಿಲ್ಲಾಧಿಕಾರಿ ಕಾರ್ಯವೈಖರಿ ಪ್ರಶ್ನಿಸಿ ಹಾಗೂ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದೆ. ಆದರೆ ಅದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಂಡಿರುವ ರೋಹಿಣಿ ಸಿಂಧೂರಿ ಅವರುಕಾನೂನಿನ ಚೌಕಟ್ಟು ಮೀರಿ, ಸಭೆಯಲ್ಲಿ ನಡೆದ ಮಾತುಕತೆಗೆ ವೈಯಕ್ತಿಕವಾಗಿ ಪತ್ರ ಬರೆದು ಉತ್ತರಿಸುವ ದಾರ್ಷ್ಟ್ಯ ತೋರಿದ್ದಾರೆ. ಈ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಾಧಿಕಾರಿ: ಕೆಡಿಪಿಯಲ್ಲಿ ಸಭೆಯಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳು ಪ್ರಶ್ನೆ ಮಾಡೋದು ಸಹಜ.ಅದಕ್ಕೆ ಮುಂದಿನ ಸಭೆಯಲ್ಲಿ ಅಧಿಕಾರಿಗಳು ಉತ್ತರಿಸುವುದು ಶಿಷ್ಟಾಚಾರ. ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ನಾನು ಪ್ರಶ್ನೆ  ಮಾಡಿ, ಅವರ ಕಾರ್ಯವೈಖರಿಯನ್ನು ಅಚ್ಚಕನ್ನಡ ಪದಗಳಲ್ಲಿ ಗ್ರಾಮೀಣಸೊಗುಡಿನಲ್ಲಿ ಖಂಡಿಸಿದ್ದೆ. ಆದರೆ, ಅದನ್ನು ಜಿಲ್ಲಾಧಿಕಾರಿಗಳು ವೈಯಕ್ತಿಕವಾಗಿ ತೆಗೆದುಕೊಂಡು, ಮರುದಿನವೇ ಪತ್ರ ಬರೆದಿದ್ದಾರೆ. ಆದರೆ, ಎರಡು ದಿನವಾದರೂ ನನಗೆ ಪತ್ರ ತಲುಪಿಲ್ಲ. ಬದಲಾಗಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮೂಲಕ ಅವರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಲ್ಲದೇ ಕಾನೂನು ಮೀರಿ ವರ್ತಿಸಿದ್ದಾರೆ. ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿಗಳ ಜೊತೆ ಹೀಗೆ ನಡೆದುಕೊಳ್ಳುವುದು ತರವಲ್ಲ ಎಂದು ಕಿಡಿಕಾರಿದರು.

ನೋಟಿಸ್‌ ರೀತಿ ಪತ್ರ: ಜಿಲ್ಲಾಧಿಕಾರಿಗಳು ನೇರವಾಗಿ ಶಾಸಕರಿಗೆ ಪತ್ರ ಬರೆಯಲುಕಾನೂನಿನಲ್ಲಿ ಅವಕಾಶ ಇಲ್ಲ. ಪತ್ರ ಎಲ್ಲಿಗೆ ತಲುಪಿಸಿದ್ದಾರೆ ಗೊತ್ತಿಲ್ಲ. ನನಗೆ ಬರೆದ ಪತ್ರವನ್ನು ಮಾಧ್ಯಮ, ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಜನಪ್ರತಿನಿಧಿಗೆ ನೋಟಿಸ್‌ ರೀತಿ ಪತ್ರ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅವಮಾನಿಸಿದ್ದೀರಿ: ದಸರಾ ಮುನ್ನ ನಡೆಯುವ ಗಜ ಪಯಣ ಕಾರ್ಯಕ್ರಮಕ್ಕೆ ಸ್ಥಳೀ‌ಯ ಶಾಸಕರನ್ನು ಆಹ್ವಾನಿಸದೆ ಅವಮಾನಿಸಿದ್ದೀರಿ. ಪ್ರಶ್ನೆ ಮಾಡಿದರೆ, ಮುಖ್ಯಮಂತ್ರಿಗಳು ಜನಪ್ರತಿನಿಧಿಗಳನ್ನು ಕರೆಯ ಬಾರದು ಅಂತ ಸೂಚನೆ ನೀಡಿದ್ದರು ಎನ್ನುತ್ತೀರಿ. ಹಾಗಾದ ಮೇಲೆ ಅರಮನೆ ಆವರಣದಲ್ಲಿ ಗಜಪಡೆಗೆ ಸ್ವಾಗತ ಮಾಡುವಾಗ ಏಕೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೀರಿ ಎಂದು ಪ್ರಶ್ನಿಸಿದ ಅವರು, ನನ್ನನ್ನ ಕರೆಯಬಾರದು ಅಂತ ನಿಮಗೆ ಯಾರಾದರೂ ಹೇಳಿದ್ದರೆ ಅಥವಾ ಬಿಜೆಪಿಯವರು ಇದನ್ನು ಹೇಳಿದ್ದರು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಯತೀಂದ್ರ, ವಿಧಾನ ಪರಿಷತ್‌ ಸದಸ್ಯರಾದ ಧರ್ಮಸೇನಾ, ರಘು ಆಚಾರ್‌, ಕಾಂಗ್ರೆಸ್‌ ನಗರಾಧ್ಯಕ್ಷಆರ್‌. ಮೂರ್ತಿ, ಗ್ರಾಮಾಂತರ ಅಧ್ಯಕ್ಷಬಿ.ಜೆ.ವಿಜಯ್‌ ಕುಮಾರ್‌, ಶಿವಣ್ಣ ಇತರರಿದ್ದರು.

2 ದಿನದಲ್ಲಿ ಉತ್ತರಿಸದಿದ್ದರೆ ಡೀಸಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ :  ಶಾಸಕ ಎಚ್‌.ಪಿ ಮಂಜುನಾಥ್‌ ಅವರಿಗೆ ಬರೆದ ಪತ್ರ ವೈರಲ್‌ ಆದಕುರಿತು ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌, ನಿಮ್ಮಕಚೇರಿಯಿಂದ ಶಾಸಕರಿಗೆ ಬರೆದ ಪತ್ರ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಯಾರು ಈ ಕೆಲಸ ಮಾಡಿದ್ದು, ಒಂದು ವೇಳೆ ನೀವೆ ಮಾಡಿದ್ದರೆ ರಾಜೀನಾಮೆ ನೀಡಿ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ನೀವು ನಿಮ್ಮಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು. ಜಿಲ್ಲಾಧಿಕಾರಿಗಳ ಈ ಕ್ರಮವನ್ನು ಬಿಡುವ ಪ್ರಶ್ನೆಯೇ ಇಲ್ಲ. ಇದನ್ನು ಪರಿಷತ್‌ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಇನ್ನು ಎರಡು ದಿನದಲ್ಲಿ ಅವರುಕ್ಷಮೆಕೇಳಬೇಕು. ಅಥವಾ ಆ ಪತ್ರ ಹೇಗೆ ಹೊರಗೆ ಬಂತು? ಇದನ್ನು ಬಹಿರಂಗಪಡಿಸಬೇಕು.7ನೇ ತಾರೀಖು ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ. ಪರಿಷತ್‌ ವಿಧಾನಸಭೆಗೆ ಬಂದು ಉತ್ತರಕೊಡಲಿ ಎಂದು ತಿಳಿಸಿದರು.

ನನ್ನ ಎದುರಿಸುವೆ ಎಂಬ ಭ್ರಮೆ ಬಿಟ್ಟು ಬಿಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನನಗೆ ಪತ್ರ ಬರೆಯುವ ಮೂಲಕ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಜಮೀನಿಗೆ ಸಂಬಂಧಿಸಿದ ಖಡತಗಳು ನನ್ನ ಬಳಿ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ನನಗೆ ಪತ್ರ ಬರೆದು ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಳ್ಳುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಇದು ನನ್ನೊಬ್ಬನಿಗೆ ಬರೆದ ಪತ್ರವಲ್ಲ.ಕೆಡಿಪಿ ಸಭೆಯಲ್ಲಿ ಆದ ಚರ್ಚೆಗೆ ನನ್ನ ಜಮೀನು ವಿಚಾರ ಬರೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ನಮ್ಮ ಅಪ್ಪನ ಆಸ್ತಿ ತಗೋಳ್ಳೋದು ನಮಗೆ ಗೊತ್ತಿದೆ. ಈ ಬೆದರಿಕೆ ತಂತ್ರಕ್ಕೆ ನಾನು ಹೆದರುವುದಿಲ್ಲ. ನನ್ನನ್ನ ಎದುರಿಸುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಶಾಸಕ ಮಂಜುನಾಥ್‌ ಹೇಳಿದರು.

ಇಬ್ಬರು ಸಿಎಂ ಬೆನ್ನಿಗಿದ್ದಾರೆ ಎಂದು ತಲೆ ತಿರುಗಿಸಬೇಡಿ :  ಎರಡು ರಾಜ್ಯದ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗೆ ಇದ್ದಾರೋ ಅಥವಾ ಕಾಲ ಕೆಳಗೆ ಇದ್ದಾರೋ ಗೊತ್ತಿಲ್ಲ. ಹಾಗೇನಾದರೂ ಇದ್ದರೆ ತಲೆ ತಿರುಗಿಸುವುದನ್ನು ಬಿಡಿ.ಕಾಲ ಹೀಗೆ ಇರುವುದಿಲ್ಲ ಮಂಜುನಾಥ್‌ ಎಚ್ಚರಿಕೆ ನೀಡಿದರು. ರೋಹಿಣಿ ಸಿಂಧೂರಿಯವರು ಒಂದಲ್ಲ ಒಂದು ದಿನ ಕಾನೂನಿನ ಪ್ರಕ್ರಿಯೆಯಲ್ಲಿ ಸಿಲುಕುತ್ತೀರ. ಆಗ ನಿಮಗೆ ಕಾನೂನಿನ ಅರಿವಾಗುತ್ತದೆ. ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನ ಪ್ರಶ್ನೆ ಮಾಡೋಕು ನಿಮ್ಮ ಮೇಲೆ ಅಧಿಕಾರಿಗಳಿದ್ದಾರೆ. ಅವರಿಗೂ ನೀವು ಉತ್ತರಕೊಡಬೇಕು. ನಾನು ಹಿರಿಯ ಸಲಹೆ ಪಡೆದುಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಶಿಷ್ಟಾಚಾರ ಉಲ್ಲಂಘನೆ, ಪತ್ರ ಬರೆದಿರುವುದು ಎಲ್ಲದರಕುರಿತುಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಮಹಾರಾಣಿ ಅಂದಿದ್ದರಲ್ಲಿತಪ್ಪೇನು?: ಮಂಜುನಾಥ್‌ ಸಭೆಯಲ್ಲಿ ಮೂರನೇ ಮಹಾರಾಣಿ ಆಗಬೇಡಿ, ಮಹಾರಾಣಿರೀತಿ ವರ್ತಿಸಬೇಡಿ ಎಂದಿದ್ದೆ. ಅದರಲ್ಲಿ ತಪ್ಪೇನು. ಆದರೆ ನೀವು ಪತ್ರದಲ್ಲಿ ಈ ಹೇಳಿಕೆ ಒಬ್ಬ ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದೀರಿ. ನಮಗೆ ಪಾಠ ಮಾಡಲು ಬರಬೇಡಿ. ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ತಾವೆ ಪ್ರತ್ಯೇಕವಾಗಿ ಏಕೆ ತಾಲೂಕು ಮಟ್ಟದಲ್ಲಿ ಜನ ಸ್ಪಂದನ ಸಭೆ ಮಾಡಬೇಕು ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್‌, ರೋಹಿಣಿ ಸಿಂಧೂರಿಯವರು ಎಲ್ಲ ಕಡೆ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಮಂಡ್ಯ, ಹಾಸನದಲ್ಲೂ ನಡೆದಿದೆ. ಮೈಸೂರಿನಲ್ಲಿ ಇದೀಗ ಆ ಸಂಸ್ಕೃತಿ ಸೃಷ್ಟಿಯಾಗಿದೆ. ರೋಹಿಣಿ ಸಿಂಧೂರಿಯವರು ಜನಪ್ರತಿನಿಧಿಗಳ ಹಕ್ಕನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.