ಅನ್ನ, ನೀರಿಲ್ಲದೆ ದಿಕ್ಕೆಟ್ಟ ನಿರಾಶ್ರಿತರು, ಬುದ್ಧಿ ಮಾಂದ್ಯರು

Team Udayavani, Apr 26, 2021, 4:55 PM IST

covid problem at mysore

ಮೈಸೂರು: ಎಲ್ಲೆಡೆ ವೀಕೆಂಡ್‌ ಕರ್ಫ್ಯೂ, ನೈಟ್‌ಕರ್ಫ್ಯೂ ಜಾರಿಯಲ್ಲಿದ್ದು, ಇಡೀ ನಗರವೇಸ್ತಬ್ಧವಾಗಿದ್ದರೆ, ಇತ್ತ ಅನ್ನ, ನೀರಿಲ್ಲದೇ ನಿರಾಶ್ರಿತರು,ಬುದ್ಧಿ ಮಾಂದ್ಯರು ದಿಕ್ಕೆಟ್ಟು ರಸ್ತೆ, ಅಂಗಡಿಮುಂಗಟ್ಟಿನಲ್ಲಿ ಬಿದ್ದಿರುವ ದೃಶ್ಯಗಳು ಸಾಂಸ್ಕೃತಿಕನಗರಿ ಮೈಸೂರಿನ ಮತ್ತೂಂದು ಮುಖವನ್ನುಅನಾವರಣಗೊಳಿಸಿದೆ.

ಮೈಸೂರಿನಲ್ಲಿ ಕಳೆದೆರೆಡು ವರ್ಷಗಳಿಂದೀಚೆಗೆಮಾನಸಿಕ ಅಸ್ವಸ್ಥರು, ನಿರ್ಗತಿಕರು ಹಾಗೂನಿರಾಶ್ರಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು,ನಗರದ ವಿವಿಧ ಬಡಾವಣೆ, ಅಂಗಡಿ ಮುಂಗಟ್ಟು,ಮಾರುಕಟ್ಟೆ, ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ಬದುಕುನಡೆಸುತ್ತಿದ್ದಾರೆ. ನಿತ್ಯ ವ್ಯಾಪಾರಿಗಳು, ಜನರುನೀಡುತ್ತಿದ್ದ ಆಹಾರ, ನೀರನ್ನೇ ಅವಲಂಬಿಸಿದ್ದಇವರಿಗೆ ಈಗ ವೀಕೆಂಡ್‌ ಕರ್ಫ್ಯೂನಿಂದ ಅನ್ನ,ನೀರಿಲ್ಲದೆ ಪರದಾಡುವಂತಾಗಿದೆ.

ಕಳೆದ ಬಾರಿ ಲಾಕ್‌ಡೌನ್‌ ಸಮಯದಲ್ಲಿಸಾರ್ವಜನಿಕರು ಸಂಘ ಸಂಸ್ಥೆಗಳುಬೀದಿಬದಿಯಲ್ಲಿದ್ದ ನಿರಾಶ್ರಿತರು, ಬುದ್ಧಿಮಾಂದ್ಯರಿಗೆಹಾಗೂ ಪ್ರಾಣಿಗಳಿಗೆ ನಿರಂತರವಾಗಿ ಆಹಾರ,ನೀರು ನೀಡುವ ಮೂಲಕ ಆಸರೆಯಾದ್ದರು. ಆದರೆಈ ಬಾರಿ ಆಹಾರ ನೀಡುವವರು ಇಲ್ಲದ್ದರಿಂದನೂರಾರು ಮಂದಿ ನಿತ್ರಾಣಗೊಂಡು ರಸ್ತೆ ಬದಿಯಮರದ ಬುಡುದಲ್ಲಿ, ಅಂಗಡಿ ಮುಂಗಟ್ಟಿನಲ್ಲಿ ಬಿದ್ದಿದ್ದರೆ, ಇನ್ನೂ ಹಲವರು ಆಹಾರಕ್ಕಾಗಿ ಬೀದಿಬೀದಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್‌, ವೀಕೆಂಡ್‌ ಕರ್ಫ್ಯೂ, ನೈಟ್‌ಕರ್ಫ್ಯೂನಿಂದ ಮಾನಸಿಕ ಅಸ್ವಸ್ಥರು, ನಿರ್ಗತಿಕರುಹಾಗೂ ನಿರಾಶ್ರಿತರ ಹಸಿವು, ನರಳಾಟ ಅರಣ್ಯರೋದನದಂತಾಗಿದ್ದು, ಇವರ ಅಭ್ಯುದಯಕ್ಕಾಗಿಸ್ಥಾಪನೆಯಾದ ಪುನರ್ವಸತಿ ಕೇಂದ್ರ ಇವರ ಪಾಲಿಗೆಇದ್ದು ಇಲ್ಲದಂತಾಗಿರುವುದು ಇಡೀ ವ್ಯವಸ್ಥೆಯನ್ನೇಅಣಕಿಸುವಂತಿದೆ.ಮೈಸೂರಿನ ಜ್ಯೋತಿನಗರದಲ್ಲಿ ಮಾನಸಿಕ ಅಸ್ವಸ್ಥರು, ನಿರ್ಗತಿಕರು ಹಾಗೂ ನಿರಾಶ್ರಿತರಪುನರ್ವಸತಿಗಾಗಿ ನಿರಾಶ್ರಿತರ ಪರಿಹಾರ ಕೇಂದ್ರಸ್ಥಾಪನೆಯಾಗಿದೆ. ಹೀಗಿದ್ದರೂ, ನಗರದಲ್ಲಿ 600ಕ್ಕುಹೆಚ್ಚು ಮಂದಿ ನಿರಾಶ್ರಿತರು, ಬುದ್ಧಿ ಮಾಂದ್ಯರುಬೀದಿಯಲ್ಲಿ ಬಿದ್ದಿರುವುದು ಅಧಿಕಾರಿಗಳಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಜವಾಬ್ದಾರಿ ಮರೆತ ಅಧಿಕಾರಿಗಳು: ಬುದ್ಧಿಮಾಂದ್ಯರು, ನಿರಾಶ್ರಿತರು ಇತರರಂತೆ ಘನತೆಯಜೀವನ ನಡೆಸುವ ಎಲ್ಲ ಹಕ್ಕುಗಳಿದ್ದರೂ, ಅದನ್ನುಕಾರ್ಯರೂಪಕ್ಕೆ ತರಬೇಕಿರುವ ಜಿಲ್ಲಾಡಳಿತ, ನಗರಪಾಲಿಕೆ ತಮ್ಮ ಕರ್ತವ್ಯವನ್ನು ಮರೆತಿವೆ. ನಗರವ್ಯಾಪ್ತಿಯಲ್ಲಿರುವ ನಿರ್ಗತಿಕರು, ನಿರಾಶ್ರಿತರಿಗೆಗಂಜಿ ಕೇಂದ್ರ ತೆರೆದು ಅವರನ್ನು ಪೋಷಣೆಮಾಡುವ ಜವಾಬ್ದಾರಿ ಪಾಲಿಕೆಗೆ ಸೇರಿದೆ. ಆದರೆಈವರಗೆಗೂ ನಿರಾಶ್ರಿತರ ಪುನರ್ವಸತಿ ಕೇಂದ್ರ,ಗಂಜಿ ಕೇಂದ್ರ ತೆರೆದ ಉದಾಹರಣೆಗಳಿಲ್ಲ ಎಂದುನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸತೀಶ್ದೇಪುರ

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.