50 ಸಾವಿರಕ್ಕೂ ಅಧಿಕ ಭಕ್ತರಿಂದ ಶ್ರೀಕಂಠೇಶ್ವರನ ದರ್ಶನ


Team Udayavani, Nov 13, 2019, 3:00 AM IST

50savirakku

ನಂಜನಗೂಡು: ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶ್ರೀಕಂಠೇಶ್ವರನ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಂಗಳವಾರ ಹುಣ್ಣಿಮೆ ವಿಶೇಷ ಜೊತೆಗೆ ಗುರು ನಾನಕರ ಜಯಂತಿ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

ಕಾರ್ತಿಕ ಮಾಸದ ಎರಡನೇ ಸೋಮವಾರವೇ ನಂಜನಗೂಡಿಗೆ ಆಗಮಿಸಿದ್ದ ಭಕ್ತರು ಮಂಗಳವಾರ ಹುಣ್ಣಿಮೆ ಸುರ್ಯೋದಯಕ್ಕೂ ಮುನ್ನ ಕಪಿಲಾ ನದಿಯಲ್ಲಿ ಮಿಂದೆದ್ದು, ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಶ್ರೀಕಂಠೇಶ್ವರನ ದರ್ಶನ ಪಡೆದು ಪುನೀತರಾದರು.

ಹುಣ್ಣಿಮೆಯಾದ್ದರಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಶ್ರೀಕಂಠೇಶ್ವರ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರ ನೇತೃತ್ವದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಪಂಚತೀರ್ಥ, ಬಿಲ್ವಪತ್ರೆ, ಪಂಚಾಮೃತ, ಶಾಲ್ಯಾನ್ನ, ಕರ್ಜೂರ, ಜೇನುತುಪ್ಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಹಸ್ರಾರು ಭಕ್ತರು ದೇವಾಲಯದ ಸುತ್ತ ಉರುಳುಸೇವೆ, ಸಲ್ಲಿಸಿ ತುಲಾಭಾರ ನೆರವೇರಿಸಿದರು. ಹರಕೆ ಹೊತ್ತ ಸಹಸ್ರಾರು ಭಕ್ತರು ಮುಡಿ ಕೊಟ್ಟು ಕಪಿಲೆ ನದಿಯಲ್ಲಿ ಪುಣ್ಯಸ್ನಾನ ಮಾಡಿ ಧನ್ಯತಾ ಭಾವ ಮೆರೆದರು.

ಶ್ರೀಕಂಠೇಶ್ವರಸ್ವಾಮಿಯ ಮುಂಭಾಗದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪಗಳನ್ನು ಹಚ್ಚಿದ ಭಕ್ತರು ಶ್ರದ್ಧಾಭಕ್ತಿಯಿಂದ ದೀಪೋತ್ಸವ ಸೇವೆ ಸಲ್ಲಿಸಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಹಾಗೂ ಗಂಗಯ್ಯ ನೇತೃತ್ವದಲ್ಲಿ ದೇವಾಲಯದ ಸಿಬ್ಬಂದಿಗಳು ಅರಕ್ಷಕರ ಸಹಕಾರದೊಂದಿಗೆ ಭಕ್ತರ ಸುಗಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ವಿಶೇಷ ಟಿಕೆಟ್‌ ದರ್ಶನದಿಂದ ದಾಖಲೆಯ ಹಣ ಸಂಗ್ರಹ: ಹುಣ್ಣಿಮೆ ಪ್ರಯುಕ್ತ ಮಂಗಳವಾರ 50 ಸಾವಿರಕ್ಕೂ ಅಧಿಕ ಮಂದಿ ಶ್ರೀಕಂಠೇಶ್ವರನ ದರ್ಶನ ಪಡೆದರು. ವಿಶೇಷ ದರ್ಶನ ವ್ಯವಸ್ಥೆಯಿಂದ ದಾಖಲೆಯ ಹಣ ಸಂಗ್ರವಾಗಿದೆ. 100 ರೂ. ವಿಶೇಷ ಟಿಕೆಟ್‌ ದರ ದರ್ಶನದಿಂದ 4.33 ಲಕ್ಷ ರೂ. ಹಾಗೂ 50 ರೂ. ವಿಶೇಷ ಟಿಕೆಟ್‌ ದರ ದರ್ಶನದಿಂದ 2.16 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟು 6.5 ಲಕ್ಷ ರೂ. ದಾಖಲೆಯ ಹಣ ದೇಗುಲಕ್ಕೆ ಸಂದಾಯವಾಗಿದೆ. ಇದು ಸಂಜೆಯ ಅಂಕಿ ಅಂಶವಾಗಿದೆ. ಇನ್ನೂ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

CM @ 2

ನಾಳೆ‌ ಬೊಮ್ಮಾಯಿ ಸರಕಾರಕ್ಕೆ 6 ತಿಂಗಳು : ಮುಂದೆ ಸಾಲು ಸಾಲು ಸವಾಲು

siddaramaiah

ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬಲಿಷ್ಠ ರಾಷ್ಟ್ರ ನಿರ್ಮಿಸಲು ಒಟ್ಟಾಗಿ ಶ್ರಮಿಸೋಣ: ತಹಶೀಲ್ದಾರ್ ಕೆ.ಚಂದ್ರಮೌಳಿ

ಬಲಿಷ್ಠ ರಾಷ್ಟ್ರ ನಿರ್ಮಿಸಲು ಒಟ್ಟಾಗಿ ಶ್ರಮಿಸೋಣ: ತಹಶೀಲ್ದಾರ್ ಕೆ.ಚಂದ್ರಮೌಳಿ

ಆರ್ಥಿಕ ಸಂಕಷ್ಟ : ಊಟಕ್ಕೆ ವಿಷ ಬೆರೆಸಿ ಆತ್ಮಹತ್ಯೆಗೆ ಶರಣಾದ ದಂಪತಿ

ಆರ್ಥಿಕ ಸಂಕಷ್ಟ : ಊಟಕ್ಕೆ ವಿಷ ಬೆರೆಸಿ ಆತ್ಮಹತ್ಯೆಗೆ ಶರಣಾದ ದಂಪತಿ

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

11edigas

ಗಂಗಾವತಿ: ಈಡಿಗ ಸಮಾಜದಿಂದ ಪ್ರತಿ ಊರಲ್ಲೂ ನಾರಾಯಣ ಗುರುಗಳ ಪೂಜೆ, ಗೌರವ

accident

ಬೀಚ್‌ನಲ್ಲಿ ಸ್ಟ್ರೀಟ್ ಫುಡ್ ಅಂಗಡಿಗೆ ನುಗ್ಗಿದ ಕಾರು: ಮಹಿಳೆ ಸಾವು, ಐವರು ಗಂಭೀರ

10center

ಗ್ರಾಮ ಒನ್‌ ಕೇಂದ್ರದ ಲಾಭ ಪಡೆಯಿರಿ: ಶಾಸಕ ಖಾಶೆಂಪುರ

9muncipal

ಪುರಸಭೆ ಆಡಳಿತ ವಿರುದ್ಧ ಶಾಸಕರ ಅಸಮಾಧಾನ

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.