ಹಸ್ತಪ್ರತಿಗಳ ಸಂರಕ್ಷಣೆಗಾಗಿ ಡಿಜಿಟಿಲೀಕರಣ

Team Udayavani, Aug 26, 2020, 1:32 PM IST

ಹಸ್ತಪ್ರತಿಗಳ ಸಂರಕ್ಷಣೆಗಾಗಿ ಡಿಜಿಟಿಲೀಕರಣ

ಮೈಸೂರು: ಮೈಸೂರು ವಿವಿಗೆ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿನ ಹಸ್ತಪ್ರತಿಗಳು ಜ್ಞಾನ ಭಂಡಾರವಾಗಿದ್ದು, ಇವುಗಳನ್ನು ಸಂರಕ್ಷಿಸುವ ಸಲುವಾಗಿ ಹಂತ ಹಂತವಾಗಿ ಡಿಜಿಟಿಲೀಕರಣಗೊಳಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್‌ ತಿಳಿಸಿದರು.

ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಮಂಗಳವಾರ ಪ್ರಾಚ್ಯವಿದ್ಯಾ ಸಂಶೋಧನಾಲಯ, ಪ್ರಾಚೀನ ಇತಿಹಾಸ ಹಾಗೂ ಪ್ರಾಚ್ಯವಿಜ್ಞಾನ ಮತ್ತು ಸಂಗ್ರಹಾಲಯ ವಿಜ್ಞಾನ ಹಾಗೂ ಮಹಾರಾಜ ಕಾಲೇಜಿನ ಸಂಸ್ಕೃತ ವಿಭಾಗದಿಂದ ಆಯೋಜಿಸಿದ್ದ ವಿಶ್ವಪರಿಸರ ದಿನದ ಅಂಗವಾಗಿ ಅವರು ಗಿಡ ನೆಟ್ಟು ನೀರೆರೆದರು. ಜತೆಗೆ ಫ್ಯೂಮಿಂಗ್‌ ಚೇಂಬರ್‌ ಉದ್ಘಾಟಸಿ ಮಾತನಾಡಿದರು.

ದೊಡ್ಡ ಜ್ಞಾನ ನಿಧಿ: ಭಾರತೀಯ ಪರಂಪರೆಯ ವೈವಿಧ್ಯಮಯ ಜ್ಞಾನ ಸಂಪತ್ತಾಗಿರುವ ತಾಳೆಗರಿ, ಹಸ್ತಪ್ರತಿಗಳ ಸಂರಕ್ಷಣೆಗೆ ಅನುಕೂಲವಾಗುವಂತಹ ಫ್ಯೂಮಿಂಗ್‌ ಚೇಂಬರ್‌ ಉದ್ಘಾಟಿಸಲಾಗಿದೆ. ಓಆರ್‌ಐ ವಿವಿಗೆ ಒಂದು ದೊಡ್ಡ ಜ್ಞಾನ ನಿಧಿಯಾಗಿದೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡ ಬೇಕಾಗಿದೆ. ಅದಕ್ಕಾಗಿ ಹಂತ ಹಂತವಾಗಿ ಡಿಜಿಟಿಲೀಕರಣಗೊಳಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಲ್ಯಾಬ್‌ ಮಾದರಿಯಲ್ಲಿ ಸಂರಕ್ಷಣೆ: ಓಆರ್‌ಐ ನಿರ್ದೇಶಕ ಪ್ರೊ.ಎಸ್‌.ಶಿವರಾಜಪ್ಪ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ ಡಾ.ಸುಬ್ಬರಾವ್‌ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ತಾಳೆಗರಿ, ಹಸ್ತಪ್ರತಿ, ಕಾಗದ ಹಸ್ತಪ್ರತಿಗಳನ್ನು ಅಡಗಿರುವ ವಿಷಯವನ್ನು ಸ್ವಷ್ಟವಾಗಿ ಗೋಚರಿಸುವಂತೆ ಫ್ಯೂಮಿಂಗ್‌ ಚೇಂಬರ್‌ ಮೂಲಕ ಡಿಜಿಟಲೀಕರಣ ಮಾಡಲು ಇದು ಸುಗಮ ಹಾದಿಯಾಗಿದೆ. ಫ್ಯೂಮಿಂಗ್‌ ಚೇಂಬರ್‌ ಒಂದು ಕೆಮಿಕಲ್‌ ಲ್ಯಾಬ್‌ ಮಾದರಿಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಈ ವಿಧಾನದಿಂದ ಮುಂದಿನ ಗಣಕೀಕರಣ(ಡಿಜಿಟಿಲೀಕರಣ)ಇದು ಅನುಕೂಲವಾಗಲಿದೆ. ಎರಡು ವಿಧದ ಕೆಮಿಕಲ್‌ನ ಉಪಚಾರ ಈ ಲ್ಯಾಬ್‌ ನೀಡಲಾಗುತ್ತದೆ. ಇದೊಂದು ಸರಳ ವಿಧಾನವಾಗಿದ್ದು, ಹೊಸದಾಗಿ ಈ ವ್ಯವಸ್ಥೆಗೆ ನಾವು ಮುಂದಾಗಿದ್ದೇವೆ. ಸಾವಿರಾರು ಹಸ್ತಪ್ರತಿಗಳನ್ನು ಸಂರಕ್ಷಣೆಗೆ ಅಗತ್ಯ ಉಪಚಾರ ನೀಡಲು ವ್ಯವಸ್ಥೆಯಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಅತ್ಯ ಅಮೂಲ್ಯವಾದ ರಾಜನೀತಿ, ಅರ್ಥಶಾಸ್ತ್ರ, ಯುದ್ಧವಿಜ್ಞಾನ, ವ್ಯಾಪಾರ ನಿರ್ವಹಣೆ, ಆಡಳಿತ ನಾಗರಿಕ ಕಾನೂನು ಕುರಿತ ಪ್ರಮುಖ ಕೃತಿಯಾದ ಕೌಟಿಲ್ಯನ ಅರ್ಥಶಾಸ್ತ್ರ ಗ್ರಂಥದ ಮೂಲ ತಾಳಗರಿ ಹಸ್ತಪ್ರತಿ ಇಲ್ಲಿ ಇರುವುದು ವಿಶೇಷವಾಗಿದೆ. ಈ ಡಿಜಿಟಲೀಕರಣದಿಂದ ಈ ಮಹಾಗ್ರಂಥಕ್ಕೂ ಆಧುನಿಕ ಸ್ವರ್ಶ ನೀಡಿ ಶಾಶ್ವತ ಸಂರಕ್ಷಣೆ ಸಹಕಾರಿಯಾಗಲಿದೆ ಎಂದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌.ಶಿವಪ್ಪ, ಮಹಾರಾಜ ಕಾಲೇಜಿ ಪ್ರಾಂಶುಪಾಲರಾದ ಅನಿಟಾ ಬ್ರಾಗ್ಸ್‌, ಪ್ರಾಚ್ಯವಿಜ್ಞಾನ ಮತ್ತು ಸಂಗ್ರಹಾಲಯ ಮುಖ್ಯ ಸಮನ್ವಯ ಅಧಿಕಾರಿ ಡಾ.ರೋಹಿತ್‌ ಈಶ್ವರ್‌ ಇದ್ದರು.

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.