ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಮೂವರ ಸೆರೆ
Team Udayavani, Apr 15, 2021, 3:29 PM IST
ಹುಣಸೂರು: ಸಾರಿಗೆ ನೌಕರರ ಮುಷ್ಕರದ ನಡುವೆಕೆಲಸಕ್ಕೆ ಹಾಜರಾಗಿದ್ದ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಹಾಗೂ ಹಲ್ಲೆ ಪ್ರಕರಣದಲ್ಲಿ ಮೂವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ಡಿಪೋದ ಚಾಲಕ ತಿರುಮಲ್ಲೇಶ್ ಅವರನ್ನು ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದ್ದರೆ, ಹುಣಸೂರು ಡಿಪೋದಕಂಡಕ್ಟರ್‌ಗಳಾದ ತಾಂಡವಮೂರ್ತಿ, ಸೈಯದ್‌ಅವರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆತೆರಳುವ ನೌಕರರಿಗೆ ಅಡ್ಡಿಪಡಿಸುವುದು, ಒತ್ತಡಹೇರುವುದರ ವಿರುದ್ಧ ಸಾರಿಗೆ ಸಂಸ್ಥೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಎಸ್ಮಾಕಾಯ್ದೆಯಡಿ ಬಂಧಿಸಿ, ನ್ಯಾಯಾಧೀಶರ ಮುಂದೆಹಾಜರು ಪಡಿಸಲಾಗಿದ್ದು ಜಾಮೀನಿನ ಮೇಲೆಬಿಡುಗಡೆಯಾಗಿದ್ದಾರೆ.ಹುಣಸೂರು ಡಿಪೋದ ಚಾಲಕ ಬೋರೇಗೌಡಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಬಸ್ ತಡೆದಗುಂಡ್ಲುಪೇಟೆ ಡಿಪೋದ ಚಾಲಕ ತಿರುಮಲ್ಲೇಶ್‌ಹಲ್ಲೆ ನಡೆಸಿದ್ದು, ಬೋರೇಗೌಡ ನೀಡಿದ ದೂರಿನಅನ್ವಯ ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ತಿರುಮಲ್ಲೇಶನನ್ನು ಬಂಧಿಸಿನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.