ಸಾರ್ವಜನಿಕ ಆಸ್ಪತ್ರೆಗೆ ದುರಸ್ತಿ ಇಲ್ಲವೇ ಹೊಸ ಕಟ್ಟಡ ಬೇಕಾ?


Team Udayavani, Jan 23, 2020, 3:00 AM IST

sarvajaniuka

ಎಚ್‌.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದಲ್ಲಿ ಹೆಸರಿಗಷ್ಟೇ 100 ಹಾಸಿಗೆ ಸಾಮರ್ಥ್ಯದ‌ ಸಾರ್ವಜನಿಕ ಆಸ್ಪತ್ರೆ ಇದೆ. ಆದರೆ, 25ರಿಂದ 30 ಹಾಸಿಗೆಗಳು ಮಾತ್ರ ಲಭ್ಯವಿದೆ. ಅಲ್ಲದೇ ಆಸ್ಪತ್ರೆ ಕಟ್ಟಡ ಕೂಡ ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತದೆ. ಯಾವಾಗ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ಜನರು ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಒಟ್ಟಾರೆ ಈ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ.

ಶಿಥಿಲಗೊಂಡಿರುವ ಈ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಟ್ಟಡವೇ ಸುಭದ್ರವಾಗಿಲ್ಲದಿರುವಾಗ ದುರಸ್ತಿ ಮಾಡಬೇಕಾದ ಅಗತ್ಯ ಇರಲಿಲ್ಲ ಎಂದು ನಾಗರಿಕರು ದೂರಿದ್ದಾರೆ. ಆದರೂ ದುರಸ್ತಿ ನೆಪದಲ್ಲಿ ಮಧ್ಯವರ್ತಿಗಳ ಹಣ ಮಾಡುವ ಯೋಜನೆ ಇದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎಚ್‌.ಡಿ.ಕೋಟೆ ಪಟ್ಟಣಕ್ಕೆ ತಾಯಿ-ಮಗು ಆಸ್ಪತ್ರೆ ಉದ್ಘಾಟನೆಗೆ ಆಗಮಿಸುತ್ತಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಹಾಗೂ ಕ್ಷೇತ್ರದ‌ ಶಾಸಕ ಅನಿಲ್‌ ಚಿಕ್ಕಮಾದು ಹಾಗೂ ಅಧಿಕಾರಿಗಳು ಈ ಶಿಥಿಲಾವಸ್ಥೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ತಾಲೂಕು ಕೇಂದ್ರಕ್ಕೆ ಬೇಕಾಗಿರುವ ಆಸ್ಪತ್ರೆ ಹೇಗಿದೆ?, ದುರಸ್ತಿ ಮಾಡಬೇಕಾದ ಅನಿವಾರ್ಯತೆ ಇದೆಯಾ?, ಇಲ್ಲವೇ ಕಟ್ಟಡವನ್ನು ನೆಲಸಮಗೊಳಿಸಿ, ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸುವ ಅನಿವಾರ್ಯತೆ ಇದೆಯಾ ಎಂಬುದನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾರ್ಯನಿರ್ವಹಿಸದ ರಕ್ತ ಪರೀಕ್ಷಾ ಯಂತ್ರಗಳು: ಸಾರ್ವಜನಿಕ ಆಸ್ಪತ್ರೆಗೆ ಕಳೆದ 8-10 ವರ್ಷಗಳ ಹಿಂದೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಎರಡು ರಕ್ತ ಪರೀಕ್ಷಾ ಯಂತ್ರಗಳನ್ನು ಸರ್ಕಾರ ಕಲ್ಪಿಸಿತ್ತು. ಆದರೆ, ಈ ಯಂತ್ರಗಳು ಬಂದಾಗಿನಿಂದ ಒಂದು ದಿನವೂ ಕಾರ್ಯನಿರ್ವಹಿಸಿಲ್ಲ ಎಂದು ತಿಳಿದು ಬಂದಿದೆ. ಯಂತ್ರಗಳನ್ನು ಬಳಕೆ ಮಾಡದೇ ಹಾಗೇ ಇರಿಸಿರುವುದರಿಂದ ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ. ಇದ್ದೂ ಇಲ್ಲದಂತಾಗಿ ರಕ್ತ ಪರೀಕ್ಷೆಗೆ ರೋಗಿಗಳು ಖಾಸಗಿ ರಕ್ತ ಪರೀಕ್ಷಾ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಕೂಡಲೇ ಈ ಎರಡು ರಕ್ತ ಪರೀಕ್ಷಾ ಯಂತ್ರಗಳು ಕಾರ್ಯನಿರ್ವಹಿಸಲು ಆಸ್ಪತ್ರೆ ಆಡಳಿತ ಮಂಡಳಿ ಮುಂದಾಗಬೇಕಿದೆ.

ಆಸ್ಪತ್ರೆ ಕಟ್ಟಡದ ಅಡಿಪಾಯ ಭದ್ರವಾಗಿಲ್ಲ – ಆಡಳಿತಾಧಿಕಾರಿ: ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಅಡಿಪಾಯ ಗುಣಮಟ್ಟದಿಂದ ಕೂಡಿಲ್ಲ. 100 ಹಾಸಿಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಕೆಯಾಗುತ್ತಿದ್ದಂತೆಯೇ ಆಸ್ಪತ್ರೆ ಕಟ್ಟಡ ವಿಸ್ತರಿಸುವ ಸಲುವಾಗಿ ಆಗಮಿಸಿದ ತಜ್ಞರ ತಂಡ ಆಸ್ಪತ್ರೆ ಅಡಿಪಾಯ ಭದ್ರವಾಗಿಲ್ಲ. ಹೀಗಾಗಿ 2-3 ಅಂತಸ್ತು ನಿರ್ಮಾಣ ಮಾಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ. 30 ವರ್ಷ ಸೇವೆ ನೀಡಿರುವ ಈ ಕಟ್ಟಡವನ್ನು ನೆಲಸಮಗೊಳಿಸಿ, ಈಗ ನೂತನವಾಗಿ ನಿರ್ಮಾಣವಾಗಿರುವ ತಾಯಿ-ಮಗು ಆಸ್ಪತ್ರೆ ಪಕ್ಕದಲ್ಲಿ 2.20 ಎಕರೆ ಆಸ್ಪತ್ರೆ ಸೇರಿದ ಖಾಲಿ ಜಾಗದಲ್ಲಿ ಸುಸಜ್ಜಿತ 2-3 ಅಂತಸ್ತಿನ ನೂತನ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಿಸಿದರೆ ಜನಸೇವೆಗೆ ಅನುಕೂಲವಾಗುತ್ತದೆ ಎಂದು ಆಸ್ಪತ್ರೆ ಆಡಳಿತಾ ಧಿಕಾರಿ ಡಾ.ಭಾಸ್ಕರ್‌ ತಿಳಿಸಿದರು.

ಹೊಸದಾಗಿ ಆಸ್ಪತ್ರೆ ಕಟ್ಟಡ ನಿರ್ಮಿಸಿ: ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಅಗವಾಗಿದೆ. ಜನಸಂಖ್ಯೆ ಹೆಚ್ಚಿದಂತೆ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹೆಸರಿಗಷ್ಟೇ 100 ಹಾಸಿಗೆಳ ಆಸ್ಪತ್ರೆ, ಆಸ್ಪತ್ರೆಯಲ್ಲಿ ಲ್ಯಾಬ್‌ ಇಲ್ಲ, ಬ್ಲೆಡ್‌ ಬ್ಯಾಂಕ್‌ ಇಲ್ಲ, ತುರ್ತು ನಿಗಾ ಘಟಕ ಇಲ್ಲ, ಒಪಿಡಿ ಇಲ್ಲ, ಫಾರ್ಮಾಸಿಸ್ಟ್‌ ಇಲ್ಲ, ಸಿಬ್ಬಂದಿ ಕೊರತೆ ಇದೆ. ಶಿಥಿಲಗೊಂಡಿರುವ ಆಸ್ಪತ್ರೆ ನೆಲಸಮಗೊಳಿಸಿ ನೂತನ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಪುರಸಭೆ ಸದಸ್ಯ ಎಚ್‌.ಸಿ.ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

* ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಕ ಅಭಿವೃದ್ದಿ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಕನಕ ಅಭಿವೃದ್ದಿ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

Untitled-1

ವಾರಾಂತ್ಯ ಕರ್ಫ್ಯೂಗೆ ಮೈಸೂರು ಸಂಪೂರ್ಣ ಸ್ತಬ್ಧ 

7temple

ದೊಡ್ಡಹೆಜ್ಜೂರು ವೀರಾಂಜನೇಯ ಸ್ವಾಮಿ ಜಾತ್ರೆ ರದ್ದು

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.