ಸಾಂಸ್ಕೃತಿಕ ನಗರಿಯಲ್ಲಿ ಶ್ವಾನ ಲೋಕ ಅನಾವರಣ


Team Udayavani, Oct 3, 2022, 3:41 PM IST

ಸಾಂಸ್ಕೃತಿಕ ನಗರಿಯಲ್ಲಿ ಶ್ವಾನ ಲೋಕ ಅನಾವರಣ

ಮೈಸೂರು: ನಾನಾ ಬಣ್ಣದ, ಸಣ್ಣ ಗಾತ್ರದಿಂದ ಆಳೆತ್ತರದವರೆಗಿನ ವಿಭಿನ್ನ ತಳಿಯ ಶ್ವಾನಗಳ ಲೋಕ ನಗರದ ಮೈಸೂರು ವಿಶ್ವವಿದ್ಯಾ ಲಯದ ನ್ಪೋರ್ಟ್ಸ್ ಅಂಡ್‌ ಫೆವಿಲಿಯನ್‌ ಮೈದಾನದಲ್ಲಿ ಅನಾವರಣಗೊಂಡಿತ್ತು.

ತರಹೇವಾರಿ ತಳಿಯ ನಾಯಿಗಳು ತಮ್ಮ ಒಡೆಯನೊಂದಿಗೆ ಇಡೀ ಮೈದಾನದಲ್ಲಿ ಅತ್ತಿಂದಿತ್ತ ಬಿಂಕು ಬಿನ್ನಾಣದಿಂದ ಓಡಾಡುತ್ತಾ ಶ್ವಾನ ಪ್ರಿಯರ ಮನಸೂರೆಗೊಳಿಸುವ ದೃಶ್ಯ ಒಂದೆಡೆಯಾದರೆ, ಮೈದಾನಕ್ಕೆ ಆಗಮಿಸಿದ್ದ ನೂರಾರು ಯುವತಿಯರು ಮುದ್ದಾದ ಶ್ವಾನಗಳ ವಯ್ನಾರ, ನಜೂಕಿಗೆ ಮನಸೋತು ತಬ್ಬಿ, ಮುದ್ದಾಡುವ ದೃಶ್ಯ ನೋಡುಗರಿಗೆ ಶ್ವಾನ ಪ್ರೇಮವನ್ನು ಇಮ್ಮಡಿಯಾಗಿಸುವಂತಿತ್ತು. ನಾಡಹಬ್ಬ ಮೈಸೂರು ದಸರಾ ಉತ್ಸವ ಅಂಗವಾಗಿ ರೈತ ದಸರಾ ಉಪಸಮಿತಿಯಿಂದ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಅಂಡ್‌ ಫೆವಿಲಿಯನ್‌ ಮೈದಾನದಲ್ಲಿ ಆಯೋಜಿಸಿದ್ದ ಸಾಕು ಪ್ರಾಣಿ ಗಳ ಪ್ರದರ್ಶನದಲ್ಲಿ ಮೈಸೂರು ನಗರ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ 23 ತಳಿಯ, ಸಾವಿರಕ್ಕೂ ಹೆಚ್ಚು ಶ್ವಾನಗಳು ಹಾಗೂ 50ಕ್ಕೂ ಹೆಚ್ಚು ಬಗೆ ಬಗೆಯ ತಳಿಯ ಬೆಕ್ಕುಗಳು ಗಮನ ಸೆಳೆದವು.

ಗಮನ ಸೆಳೆದ ಚಾರ್ಲಿ: ಇತ್ತೀಚೆಗೆ ತೆರೆಕಂಡ ಚಾರ್ಲಿ 777 ಚಲನ ಚಿತ್ರದ ಶ್ವಾನ ಚಾರ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಿತ್ರನಟ, ನಟಿ ಯರು ಹಾಗೂ ಸೆಲಿಬ್ರೆಟಿಗಳಿನ್ನು ನೋಡಲು ಜನ ಮುಗಿಬೀಳುವ ದೃಶ್ಯ ಸಾಮಾನ್ಯ. ಚಾರ್ಲಿ ಕಂಡೊಂಡನೆ ನೂರಾರು ಮಂದಿ ಅದ ರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರೆ, ಇನ್ನೂ ಕೆಲವರು ಚಾರ್ಲಿಯನ್ನು ಸ್ಪರ್ಶಿಸಿ, ಮೈದಡವಿ ಸಂಭ್ರಮಿಸಿದರು.

ಅಪರೂಪದ ತಳಿಗಳ ದರ್ಶನ: ಮೈದಾನದಲ್ಲಿ ಜರ್ಮನ್‌ ಶಫ‌ರ್ಡ್‌, ಡಾಬರ್‌ ಮೆನ್‌, ಗೋಲ್ಡನ್‌ ರಿಟ್ರವರ್‌, ಲ್ಯಾಬ್‌, ಸೈಬೀರಿ ಯನ್‌ ಹಸ್ಕಿ, ರ್ಯಾಟ್‌ವ್ಹೀಲರ್‌ ತಳಿಯ ನೂರಾರು ಶ್ವಾನ ಗಳು ಕಂಡು ಬಂದವು. ಇವುಗಳ ಜೊತೆಗೆ ಚೈನೀಸ್‌ ತಳಿಯ ಪೀಕಿಂಗೀಸ್‌ ನಾಯಿ ಪ್ರಮುಖ ಆಕರ್ಷಣೆ ಯಾಗಿತ್ತು. ಮೈತುಂಬ ಉದ್ದದ ರೋಮಗ ಳೊಂದಿಗೆ ಆಕರ್ಷ ಮುಖ ಚಹರೆ ಹೊಂದಿದ್ದ ಈ ಶ್ವಾನ ಇಡೀ ಮೈಸೂರಿನಲ್ಲಿ ಇರುವುದು ಒದೊಂದೆ ಎಂಬುದು ಗಮನಾರ್ಹ.

ಗ್ರೇಟ್‌ ಡೆನ್‌, ಸೆಂಟ್‌ ಬರ್ನಾಡ್‌, ಅಮೆರಿಕನ್‌ ಬುಲ್ಲಿ, ಮಿನ್‌ಪಿನ್‌, ಬೀಗಲ್‌, ಫ್ರೆಂಚ್‌ ಬುಲ್‌, ಡೂಡಲ್‌ ರೆಡ್‌ ರಿಟನ್‌, ಮೆಲ್ಜಿಯನ್‌ ಮೆಲಿಯೋಸ್‌, ಡ್ಯಾಶೂಂಡ್‌, ಪೂಡಲ್‌, ಚೌ ಚೋ, ಶಿಟ್ಝೂ, ಲ್ಯಾಶೋಪ್ಸ್‌, ಪಿಟ್‌ ಬುಲ್‌, ಬೆಲ್ಜಿಯಂ ಶಫ‌ರ್ಡ್‌ ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಜತೆಗೆ ದೇಶಿ ತಳಿಯಾದ ಮುಧೋಳ್‌ ಮತ್ತು ರಾಜುಪಲ್ಲಿ ನಾಯಿಗಳು ಗಮನ ಸೆಳದವು.

ಮಾರ್ಜಾಲಗಳ ವಯ್ನಾರ : ಸಾಕುಪ್ರಾಣಿಗಳ ಪ್ರದರ್ಶನದಲ್ಲಿ ಶ್ವಾನಗಳಷ್ಟೇ ಅಲ್ಲದೆ ಮನೆಯ ಮುದ್ದಿನ ಪ್ರಾಣಿ ಎಂದೇ ಹೆಸರಾದ ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು. ಬೆಂಗಾಲ್‌ ಕ್ಯಾಟ್‌, ಬಾಂಬೆ ಕ್ಯಾಟ್‌, ಹಿಮಾಲಯನ್‌ ಕ್ಯಾಟ್‌, ಮೈನ್‌ ಕೂನ್‌, ಬ್ರಿಟೀಷ್‌ ಶಾರ್ಥಾçರ್‌, ಪಶಿಧಯನ್‌ ಕ್ಯಾಟ್‌ ಸೇರಿದಂತೆ ನಾಲ್ಕೈದು ತಳಿಯ 50ಕ್ಕೂ ಹೆಚ್ಚು ಬೆಕ್ಕುಗಳು ಬಿಂಕು, ಬಿನ್ನಾಣದಿಂದ ಓಡಾಡುತ್ತ ತಮ್ಮ ವಯ್ನಾರ ಪ್ರದರ್ಶಿಸಿದವು.

 

-ಸತೀಶ್‌ ದೇಪುರ

ಟಾಪ್ ನ್ಯೂಸ್

13

ವ್ಯಾಪಾರದ ಹೆಸರಿನಲ್ಲಿ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಸಂಘಟನೆಗಳ ವಿರುದ್ದ ಕ್ರಮಕ್ಕೆ ಆಗ್ರಹ

TDY-2

ಅರ್ಜಿತ್‌ ಸಿಂಗ್‌ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ 1 ಟಿಕೆಟ್‌ ಗೆ 16 ಲಕ್ಷ ರೂ.ಬೆಲೆ: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

ಕೈಗೆ ಕಚ್ಚಿ, ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

siddaramaih

ಬಿಜೆಪಿಯವರು ನೀತಿ ಹೇಳುವುದು ಬದ್ನೆಕಾಯಿ ತಿನ್ನೋಕಾ..?: ಸಿದ್ದರಾಮಯ್ಯ ಟೀಕೆ

12

ಗಂಗಾವತಿ: ಬೃಹತ್ ಮರ ತೆರವಿಗೆ ಮೀನಾಮೇಷ; ಅಧಿಕಾರಿಗಳ ನಿರ್ಲಕ್ಷ್ಯ

US woman reunited with family after 51 years

ಮಗುವಾಗಿದ್ದಾಗ ಕಿಡ್ನಾಪ್ ಆಗಿದ್ದಾಕೆ 51 ವರ್ಷಗಳ ಬಳಿಕ ಕುಟುಂಬ ಸೇರಿದರು..

TDY-1

ರಿಷಬ್‌ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-13

ಕಬ್ಬು ಬೆಳೆಗಾರರ ಬಂಧನ ಖಂಡಿಸಿ ರಸ್ತೆ ತಡೆದು ಪ್ರತಿಭಟನಾ ಧರಣಿ

b-bommai

ರಾಜಕೀಯ ಒತ್ತಡ ಇರುವುದು ಸತ್ಯ.. ಎಲ್ಲಾ ಪಕ್ಷಗಳ ಹಿತಕಾಯಬೇಕಿದೆ: ಸಿಎಂ ಬೊಮ್ಮಾಯಿ

1-qwewqewqe

ಹುಣಸೂರು: ಗೊಮ್ಮಟಗಿರಿಯಲ್ಲಿ 73 ನೇ ವರ್ಷದ ಮಸ್ತಕಾಭಿಷೇಕದ ವೈಭವ

1-sdsdsad

ಕೊನೆಗೂ ಮೈಸೂರು ಬಸ್ ನಿಲ್ದಾಣದ ಮೇಲಿದ್ದ ಎರಡು ಗುಂಬಜ್ ಗಳ ತೆರವು

1——-fdsfdf

ಕಾನೂನು ಮೀರದಂತೆ ಮುಖಂಡರು ಎಚ್ಚರವಹಿಸಬೇಕು: ಎಸ್ ಪಿ ಆರ್.ಚೇತನ್

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು: ದೂರು

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು: ದೂರು

tdy-3

ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಬಲಿ

13

ವ್ಯಾಪಾರದ ಹೆಸರಿನಲ್ಲಿ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಸಂಘಟನೆಗಳ ವಿರುದ್ದ ಕ್ರಮಕ್ಕೆ ಆಗ್ರಹ

TDY-2

ಅರ್ಜಿತ್‌ ಸಿಂಗ್‌ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ 1 ಟಿಕೆಟ್‌ ಗೆ 16 ಲಕ್ಷ ರೂ.ಬೆಲೆ: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

ಕೈಗೆ ಕಚ್ಚಿ, ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.