ಪೂರ್ವ ಮುಂಗಾರು: ಕೃಷಿ ಚಟುವಟಿಕೆ ಚುರುಕು

ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆ • ಹತ್ತಿ, ಹೊಗೆಸೊಪ್ಪು ನಾಟಿಗೆ ಮುಂದಾದ ತಾಲೂಕಿನ ರೈತರು

Team Udayavani, May 21, 2019, 9:43 AM IST

MAYSORE-TDY-1..

ಎಚ್.ಡಿ.ಕೋಟೆ: ಕಳೆದ 4-5 ದಿನಗಳಿಂದ ಎಚ್.ಡಿ. ಕೋಟೆ ಮತ್ತು ಸರಗೂರು ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು ರೈತರು ಹರ್ಷಗೊಂಡಿದ್ದಾರೆ.

ಮಾರ್ಚ್‌ ಮತ್ತು ಏಪ್ರಿಲ್ನಲ್ಲಿ ನಿರೀಕ್ಷಿತ ಪ್ರಮಾಣ ದಲ್ಲಿ ಪೂರ್ವ ಮುಂಗಾರು ಆಗಮನವಾಗದ ಕಾರಣ ವಾಡಿಕೆ ಮಳೆ ಆಗಿರಲಿಲ್ಲ. ಹೀಗಾಗಿ ರೈತರಲ್ಲಿ ಆತಂಕ ಮೂಡಿಸಿತ್ತು.

ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ನೀರಾ ವರಿಗಿಂತ ಖುಷ್ಕಿ ಪ್ರದೇಶವನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. ಇಲ್ಲಿನ ರೈತರು ಹತ್ತಿ, ಹೊಗೆ ಸೊಪ್ಪನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ಕೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ ಆಗದ ಪರಿಣಾಮ ರೈತರು ಕಂಗಾಲಾಗಿದ್ದರು.

ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯೊಂದಿಗೆ ಮಾರ್ಚ್‌ ಕೊನೇ ವಾರದಲ್ಲಿ ಬಿದ್ದ ಒಂದೆರಡು ಮಳೆಗೆ ತಮ್ಮ ಜಮೀನುಗಳನ್ನು ಹದಗೊಳಿಸಿದರೂ, ಪೂರ್ವ ಮುಂಗಾರು ಕೈಕೊಟ್ಟಿತ್ತು.

ಕಳೆದ 4-5 ದಿನದಿಂದ ತಾಲೂಕಿನ ಎಲ್ಲೆಡೆ ದಿನಲೂ ಭರ್ಜರಿ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಮಂದ ಹಾಸ ಮೂಡಿದ್ದು, ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ತಾಲೂಕಿನೆಲ್ಲೆಡೆ ರೈತ ಕುಟುಂಬ ಬಿತ್ತನೆ ಕಾರ್ಯದಲ್ಲಿ ತೊಡಗಿದೆ.

ತಾಲೂಕುವಾರು ಮಳೆ ಪ್ರಮಾಣ: ತಾಲೂಕಿನಲ್ಲಿ ಇಲ್ಲಿಯವರೆಗೆ 170.04 ಮಿ.ಮೀ ವಾಡಿಕೆ ಮಳೆ ಯಾಗಬೇಕಿತ್ತು. ಆದರೆ, ಮೇ 17ರ ಶುಕ್ರವಾರದವರಗೆ 162.02 ಮಿ.ಮೀ ಮಳೆಯಾಗಿದೆ. ಶೇ.5 ರಷ್ಟು ಮಳೆ ಪ್ರಮಾಣ ಕೊರತೆ ಕಂಡು ಬಂದಿದ್ದರೂ, ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಹೊರತುಪಡಿಸಿ ಎಚ್.ಡಿ. ಕೋಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

ಹೋಬಳಿವಾರು ಪ್ರಮಾಣ: ಕಸಬಾ 174.04 ವಾಡಿಕೆ ಮಳೆಗೆ, 151.06 ಮಿ.ಮೀ ಆಗಿ ಶೇ.12 ಕೊರತೆಯಾಗಿದೆ. ಅಂತರಸಂತೆ 172 ಮಿ.ಮೀ ವಾಡಿಕೆ ಮಳೆಗೆ 180.01 ಮಿ.ಮೀ ಮಳೆಯಾಗಿದ್ದು ಶೇ.5 ಹೆಚ್ಚು ಮಳೆಯಾಗಿದೆ. ಕಂದಲಿಕೆ 172.03 ವಾಡಿಕೆ ಮಳೆಗೆ 177 ಮಿ.ಮೀ ಮಳೆಯಾಗಿದ್ದು ಶೇ.3 ಹೆಚ್ಚಾಗಿದೆ. ಸರಗೂರು 169.50 ಮಿ.ಮೀ ವಾಡಿಕೆ ಮಳೆಗೆ 125.06 ಮಿ.ಮೀ ಆಗಿದ್ದು ಶೇ.26 ಕೊರತೆ ಕಂಡು ಬಂದಿದೆ. ಹಂಪಾಪುರ ಹೋಬಳಿ 162.50 ವಾಡಿಕೆ ಮಳೆಗೆ 139.01 ಮಿ.ಮೀ ಮಳೆ ಬಿದ್ದಿದ್ದು ಶೇ.14 ಕಡಿಮೆ ಮಳೆಯಾಗಿದೆ.

ಅಂತರಸಂತೆ ಹೋಬಳಿಯಲ್ಲಿ ಶೇ.5 ಹೆಚ್ಚು ಮಳೆಯಾದರೆ, ಸರಗೂರು ಹೋಬಳಿಯಲ್ಲಿ ಶೇ.26 ಕಡಿಮೆ ಮಳೆಯಾಗಿದೆ.

ಚುರುಕುಗೊಂಡ ಬಿತ್ತನೆ ಕಾರ್ಯ: ತಾಲೂಕಿನಲ್ಲಿ 67715 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿವರೆಗೆ 25790 ಹೆಕ್ಟೇರ್‌ (ಶೇ.38) ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಪ್ರಮುಖವಾಗಿ ಹತ್ತಿ 20280 ಹೆಕ್ಟೇರ್‌, ಹೊಗೆ ಸೊಪ್ಪು 1035 ಹೆಕ್ಟೇರ್‌, ಮುಸುಕಿನ ಜೋಳ 2400 ಹೆಕ್ಟೇರ್‌, ದ್ವಿ-ಧಾನ್ಯಗಳಲ್ಲಿ ಹೆಸರು 246 ಹೆಕ್ಟೇರ್‌, ಅಲಸಂದೆ 1250 ಹೆಕ್ಟೇರ್‌, ಉದ್ದು 175 ಹೆಕ್ಟೇರ್‌, ಎಳ್ಳು 175 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮುಗಿದಿದೆ.

ಒಟ್ಟಾರೆ ಪ್ರಾರಂಭದಲ್ಲಿ ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರೂ ತಡವಾಗದರೂ ಆಗಮಿಸಿ ತಾಲೂಕಿನಾದ್ಯಂತ ಮಳೆಯಾಗುತ್ತಿರು ವುದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ. ಉತ್ತಮ ಬೆಳೆ ನಿರೀಕ್ಷೆ ಹೊತ್ತು ದಿನಪೂರ್ತಿ ಕೃಷಿ ಚಟುವಟಿಕೆಯಲ್ಲಿ ಕುಟುಂಬ ಸಮೇತ ತೊಡಗಿಕೊಂಡಿದ್ದಾರೆ.

● ಬಿ.ನಿಂಗಣ್ಣ ಕೋಟೆ

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.