ಆನೆಗಳ ಆಶ್ರಯ ತಾಣ: ದೇಶದಲ್ಲೇ ಕರ್ನಾಟಕ ನಂ.1

Team Udayavani, Aug 13, 2019, 3:00 AM IST

anegala

ಮೈಸೂರು: ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸೋಮವಾರ ಮೃಗಾಲಯದ ಆನೆ ಮನೆ ಬಳಿ, ಗಜಗಳ ಬಗೆಗಿನ ಮಾಹಿತಿ ಫ‌‌ಲಕ ಹಾಗೂ ಭಿತ್ತಿಪತ್ರ ಪ್ರದರ್ಶಿಸಿ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅವುಗಳ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶದಿಂದ ಅವುಗಳ ವಾಸಸ್ಥಾನಕ್ಕೆ ಕುತ್ತು ಬರುತ್ತಿರುವುದರಿಂದ ಹಾಗೂ ಆನೆ ಮಾನವ ಸಂಘರ್ಷದಿಂದ ಅವುಗಳಿಗೆ ಉಂಟಾಗಿರುವ ಆಪತ್ತಿನ ಕುರಿತು ಮೃಗಾಲಯ ಅಧಿಕಾರಿಗಳು ಅರಿವು ಮೂಡಿಸಿದರು. ಮೃಗಾಲಯದ ಶಿಕ್ಷಣಾಧಿಕಾರಿ ಗುರುಪ್ರಸಾದ್‌ ಅವರು ಆನೆಗಳ ಜೀವನ ಶೈಲಿ, ಆಹಾರ ಸೇವನೆ, ಸಂತೋನ್ಪತಿ ಹಾಗೂ ಅದರ ನಡವಳಿಕೆ ಬಗ್ಗೆ ಮಾಹಿತಿ ಒದಗಿಸಿದರು.

ಆನೆಗಳಲ್ಲಿ ಆಫ್ರಿಕ ಮತ್ತು ಏಷ್ಯಾ ಆನೆಗಳೆಂಬ ಎರಡು ಪ್ರಭೇದಗಳಿವೆ. ಜಗತ್ತಿನಲ್ಲಿ ಸರಿ ಸುಮಾರು 4,50,000-7,00,000 ಆಫ್ರಿಕ ಆನೆಗಳು ಹಾಗೂ 35,000-40,000 ಏಷ್ಯಾ ಆನೆಗಳಿವೆ. ಭಾರತ ದೇಶದಲ್ಲಿ ಸುಮಾರು 27,312 ಆನೆಗಳಿದ್ದು, ಕರ್ನಾಟಕ ಸುಮಾರು 6,049 ಆನೆಗಳಿಗೆ ಆಶ್ರಯತಾಣವಾಗಿದೆ.

ಬೇಟೆಯಾಡುವುದು, ದಂತ ಮತ್ತು ಮಾಂಸಕ್ಕಾಗಿ ಹತ್ಯೆ ಮಾಡುವುದು, ಜನಸಂಖ್ಯೆ ವೃದ್ಧಿಯಿಂದ ಆಹಾರ ಕೊರತೆ, ಆವಾಸಸ್ಥಾನ ನಾಶ ಹಾಗೂ ಮಾನವ ಪ್ರಾಣಿಗಳ ಸಂಘರ್ಷ ಮುಂತಾದವುಗಳಿಂದಾಗಿ ಆನೆಗಳ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ಆನೆಗಳ ಉಳಿವಿಗೆ ಹಾಗೂ ಆನೆಗಳ ಪೋಷಣೆ ಬಗ್ಗೆ ಅರಿವು ಅಗತ್ಯವಿದೆ ಎಂದು ತಿಳಿಸಿದರು.

ಆನೆ ಕರ್ನಾಟಕ, ಕೇರಳ, ಒಡಿಶಾ ಮತ್ತು ಜಾರ್ಖಂಡ್‌ ರಾಜ್ಯದ ರಾಜ್ಯ ಪ್ರಾಣಿಯಾಗಿದ್ದು, ಈ ರಾಜ್ಯದಲ್ಲಿ ಹೆಚ್ಚು ಆನೆಗಳಿವೆ. ಆಫ್ರಿಕಾದ ಸವನ್ನಹ್‌ ಆನೆ, ಆಫ್ರಿಕಾದ ಕಾಡು ಆನೆ ಮತ್ತು ಏಷ್ಯಾದ ಆನೆ ಎಂದು ಮೂರು ಪ್ರಬೇಧದ ಆನೆಗಳಿದ್ದು, ಇವುಗಳನ್ನು ದೊಡ್ಡ ಕಿವಿ ಮತ್ತು ದಂತದಿಂದ ಗುರುತಿಸಲಾಗುತ್ತದೆ ಎಂದರು.

ಪ್ರಾಜೆಕ್ಟ್ ಎಲಿಫೆಂಟ್‌: ಆನೆ ಪಥದಲ್ಲಿ ಮನುಷ್ಯನ ಪ್ರವೇಶ ಹೆಚ್ಚಾಗುತ್ತಿರುವ ಕಾರಣ ಆನೆ ತಮ್ಮ ಅವಾಸಸ್ಥಾನ ಕಳೆದುಕೊಂಡು ಜನ ವಸತಿ ಪ್ರದೇಶಕ್ಕೆ ಮೇವು ಅರಸಿ ಬರುತ್ತಿವೆ. ಅವುಗಳ ಸಂರಕ್ಷಣೆಗಾಗಿಯೇ “ಪ್ರಾಜೆಕ್ಟ್ ಎಲಿಫೆಂಟ್‌’ ಆರಂಭವಾಗಿದ್ದರೂ ಆನೆಗಳನ್ನು ಉಳಿಸಿಕೊಳ್ಳುವಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆಯಾಗಬೇಕು ಎಂದು ತಿಳಿಸಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ವೀಕ್ಷಕರು ಹಾಗೂ ಮೃಗಾಲಯದ ಯೂತ್‌ ಕ್ಲಬ್‌ ಸದಸ್ಯರು ಮೃಗಾಲಯಕ್ಕೆ ಭೇಟಿ ನೀಡಿ ಆನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಟಾಪ್ ನ್ಯೂಸ್

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.