ಶೀಘ್ರ ಸಾಲಮನ್ನಾ ಗೊಂದಲ ನಿವಾರಣೆ: ಈಶ್ವರಪ್ಪ

Team Udayavani, Jul 25, 2019, 3:00 AM IST

ಮೈಸೂರು: ರೈತರ ಸಾಲ ಮನ್ನಾ ವಿಷಯದಲ್ಲಿ ಇರುವ ಗೊಂದಲವನ್ನು ನಮ್ಮ ನೂತನ ಸರ್ಕಾರ ಶೀಘ್ರವೇ ಬಗೆಹರಿಸಲಿದೆ. ಯಡಿಯೂರಪ್ಪ ಶೀಘ್ರವೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಿಸಲಿದ್ದು, ದಿನಾಂಕ ನಿಗದಿ ಪಡಿಸಲಾಗುವುದು ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸ್ಥಿರ ಸರ್ಕಾರ ನೀಡಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಒಂದು ಹಂತಕ್ಕೆ ಬರಲಿದೆ. ನಮ್ಮ ಮೊದಲ ಅದ್ಯತೆ ರೈತರ ಸಾಲಮನ್ನಾ ಬಗ್ಗೆ ಚರ್ಚೆ ನಡೆಸಲಿದ್ದು, ಬಿ.ಎಸ್‌. ಯಡಿಯೂರಪ್ಪ ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ. ಅಲ್ಲದೇ ತಕ್ಷಣವೇ ಹೈಕಮಾಂಡ್‌ ಜೊತೆ ಚರ್ಚಿಸಿ ಸಂಪುಟ ರಚನೆ ಮಾಡಲಿದ್ದಾರೆ ಎಂದರು.

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಬಾಯಿಸಲು ಸಿದ್ಧ ಎಂದು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‌-ಜೆಡಿಎಸ್‌ನದ್ದು ದೋಸ್ತಿ ಸರ್ಕಾರ ಅಗಿರಲಿಲ್ಲ. ಬದಲಿಗೆ ಅದೊಂದು ದುಷ್ಟ ಸರ್ಕಾರವಾಗಿತ್ತು. ಜನರ ಭಾವನೆಗಳಿಗೆ ವಿರುದ್ಧವಾಗಿ ರಚನೆಗೊಂಡಿದ್ದ ಮೈತ್ರಿ ಸರ್ಕಾರ ಪತನಗೊಂಡಿದೆ ಎಂದರು.

ಆರ್‌ಎಸ್‌ಎಸ್‌ನಿಂದ ನಾವು ಸಲಹೆ ಮಾತ್ರ ಪಡೆಯುತ್ತೇವೆಯೇ ಹೊರತು, ಆರ್‌ಎಸ್‌ಎಸ್‌ ಏನು ಹೇಳುತ್ತದೆ. ಅದರಂತೆ ನಡೆಸಿಕೊಳ್ಳಲಾಗುತ್ತಿದೆ ಎನ್ನುವ‌ ಮಾಧ್ಯಮಗಳ ವರದಿಯನ್ನು ನಂಬಬೇಡಿ ಎಂದ ಅವರು, ಹಾಲಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಬದಲಿಸಿ ನೂತನ ಸ್ವೀಕರ್‌ ಆಯ್ಕೆ ಮಾಡಿಕೊಳ್ಳಬೇಕೆ ಅಥವಾ ಮುಂದುವರಿಸಬೇಕೆ ಎನ್ನುವುದನ್ನು ನಾಯಕರ ಜೊತೆ ಕುಳಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್‌ ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ಮಾತ್ರ ಟ್ರಬಲ್‌ ಶೂಟರ್‌. ಜನರೂ ಟ್ರಬಲ್‌ ಶೂಟರ್‌ ಎಂದು ಹೇಳಬೇಕು. ಆದರೆ ಇವರು ಸ್ವಯಂ ಘೋಷಿಸಿತ ಟ್ರಬಲ್‌ ಶೂಟರ್‌ ಅಗಿದ್ದಾರೆ. ಕಳೆದ ಲೋಕಸಭೆಯಲ್ಲಿ ಎರಡು ಪಕ್ಷಗಳು ಏನಾಗಿವೆ ಎನ್ನುವುದು ಇಡೀ ದೇಶದ ಜನರೇ ನೋಡಿದ್ದಾರೆ ಎಂದು ವ್ಯಂಗ್ಯವಾಡಿದರು. ಅತೃಪ್ತ ಶಾಸಕರು ಬಿಜೆಪಿಗೆ ಬರವುದಾದರೆ ಸ್ವಾಗತ ಕೋಡುತ್ತೇವೆ. ಆದರೆ ಯಾರನ್ನು ಬಲವಂತವಾಗಿ ಕರೆಯಲ್ಲ. ಉಳಿದ ಅವಧಿಗೆ ಬಿಜೆಪಿಗೆ ಸುಸ್ಥಿರ ಆಡಳಿತವನ್ನು ನೀಡಲು ಬದ್ಧವಿರುವುದಾಗಿ ಹೇಳಿದರು.

ದೇವೇಗೌಡ, ಎಚ್‌.ಡಿ.ರೇವಣ್ಣ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿದಂತೆ ಹಲವರು ಬಹಳ ಶ್ರಮಪಟ್ಟು ಲೋಕಸಭಾ ಚುನಾವಣೆ ಎದುರಿಸಿದರು. ಆದರೆ, ಎರಡು ಅಂಕಿ ದಾಟಲು ಸಾಧ್ಯವಿಲ್ಲದೇ ಕಚ್ಚಾಟದಲ್ಲಿಯೇ ಮುಳುಗಿದರು. ಹೀಗಾಗಿ ರಾಜಕಾರಣದಲ್ಲಿ ಒಂದು ಜಾತಿ, ಧರ್ಮ ನಮ್ಮ ಪರ ಇದೆ ಎಂದು ಅದಕ್ಕೆ ಜೋತು ಬಿದ್ದು, ಬೀಗಬಾರದು ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ