ಎಲ್ಲೆಡೆ ಮಳೆ: ಸಾಂಕ್ರಾಮಿಕ ರೋಗ ಭೀತಿ

ಮಲೇರಿಯಾ, ಡೆಂಘೀ, ಇಲಿಜ್ವರ, ಟೈಫಾಯ್ಡ, ವೈರಾಣುವಿನ ಜ್ವರ, ಕಾಲರ ಬಗ್ಗೆ ಎಚ್ಚರವಹಿಸಿ • ಎಲ್ಲರೂ ಸ್ವಚ್ಛತೆ ಕಾಪಾಡಿ

Team Udayavani, Jun 6, 2019, 3:59 PM IST

ಮೈಸೂರು: ಮುಂಗಾರು ಆರಂಭವಾಗುವುದಕ್ಕೂ ಮೊದಲೇ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುವ ಭೀತಿ ಜನರಲ್ಲಿ ಆವರಿಸಿದೆ.

ಮಳೆಗಾಲದ ಆರಂಭದ ದಿನಗಳಲ್ಲಿ ಕಾಯಿಲೆ ಬೀಳುವ ಸಂದರ್ಭಗಳೇ ಹೆಚ್ಚು. ಈ ಬಗ್ಗೆ ಸಾರ್ವ ಜನಿಕರು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕಿದೆ. ಮಳೆ ಶುರುವಾಗುತ್ತಿರು ವಂತೆಯೇ ಆರೋಗ್ಯ ಸಮಸ್ಯೆಗಳಾದ ಕೆಮ್ಮು, ಶೀತ, ನೆಗಡಿ ಮುಂತಾದ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳಲಿದೆ.

ಮುನ್ನೆಚ್ಚರಿಕೆ ಅಗತ್ಯ: ಸೋಂಕಿನ ಕಾಯಿಲೆಗಳ ಮುಖ್ಯ ಲಕ್ಷಣವೇ ಜ್ವರವಾಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಮಲೇರಿಯಾ, ಡೆಂಘೀ, ಇಲಿಜ್ವರ, ಟೇಫಾಯ್ಡ, ವೈರಾಣುವಿನ ಜ್ವರ, ಕಾಲರ ಮುಂತಾದವುಗಳ ಜನರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.

ಎಚ್ಚರ ವಹಿಸಿ: ಈಗಾಗಲೇ ನಾನಾ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದ್ದು, ಮನೆ ಸುತ್ತ ಮುತ್ತ ಮಳೆಯ ನೀರು ನಿಲ್ಲದಂತೆ, ಸೊಳ್ಳೆಯ ಸಂತತಿ ಹೆಚ್ಚದಂತೆ ನೋಡಿಕೊಳ್ಳಬೇಕು. ನೀರು ಮತ್ತು ಆಹಾರದ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳೂ ಇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು.

ಹಲವರಿಗೆ ಚಳಿ ಜ್ವರ: ಚಿಕೂನ್‌ ಗುನ್ಯಾ ಕಾಯಿಲೆ ಯಲ್ಲಿ ರೋಗಿಯು ಜ್ವರದೊಂದಿಗೆ ಕಾಲು ಅಥವಾ ಕೈಗಳ ಕೀಲುಗಳಲ್ಲಿ ಊತ ಹಾಗೂ ತೀವ್ರತರವಾದ ನೋವು, ವೈರಾಣುವಿನ ಜ್ವರದಲ್ಲಿ ರೋಗಿಯು ಇಡೀ ದೇಹದಲ್ಲಿ ನೋವು ಮತ್ತು ಒಂದು ಬಗೆಯ ಆಯಾಸವಿದ್ದರೆ, ಒಮ್ಮೊಮ್ಮೆ ಗಂಟಲುನೋವು, ಶೀತ ಮತ್ತು ಕೆಮ್ಮ ಕೂಡ ಕಂಡುಬರುತ್ತದೆ. ಮಲೇರಿಯಾ ಕಾಯಿಲೆ ಕಾಣಿಸಿಕೊಂಡರೆ ಚಳಿಜ್ವರ. ಜ್ವರದ ಜೊತೆಯಲ್ಲಿ ವಿಪರೀತ ಚಳಿ ಇರುತ್ತದೆ. ಜೊತೆಗೆ ತಲೆನೋವು, ದೇಹದಲ್ಲಿ ಆಯಾಸ, ವಾಂತಿ ಮುಂತಾದ ಸಮಸ್ಯೆಗಳು ರೋಗಿಯನ್ನು ಬಾಧಿಸುತ್ತ ವೆ.

ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ: ಡೆಂಘೀ ಜ್ವರದಲ್ಲಿ ರೋಗಿಯ ದೇಹದ ಉಷ್ಣತೆ ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದರ ಜೊತೆಗೆ ಕೀಲು ಹಾಗೂ ದೇಹದ ಮಾಂಸಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲಿದೆ. ಚರ್ಮದ ಮೇಲೆ ಕೆಂಪು – ಕಪ್ಪು ಮಚ್ಚೆಗಳು ಮತ್ತು ಒಮ್ಮೊಮ್ಮೆ ಮೂಗು – ಬಾಯಿಯಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಕೈಫಾಯ್ಡ ಜ್ವರದಲ್ಲಿ ರೋಗಿಯು ಜ್ವರದ ಜೊತೆಯಲ್ಲಿಯೇ ತಲೆನೋವು, ಹೊಟ್ಟೆ ನೋವು, ವಾಂತಿ, ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇಲಿ ಜ್ವರದಲ್ಲಿ ರೋಗಿ ನಿತ್ರಾಣ ನಾಗಿ, ಆತನ ರಕ್ತದೊತ್ತಡವು ಕಡಿಮೆಯಾಗಲಿದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡರೂ, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿ ಕೊಳ್ಳಬೇಕು ಎಂಬುದು ವೈದ್ಯಾಧಿಕಾರಿಗಳ ಸಲಹೆ.

ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ: ಮಳೆ ಗಾಲದಲ್ಲಿ ಸೊಳ್ಳೆಗಳಿಂದ ಜ್ವರ, ಮಲೇರಿಯಾ, ಡೆಂಘೀ ಸೇರಿದಂತೆ ಬಹುತೇಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಆದ್ದರಿಂದ ಸಾರ್ವ ಜನಿಕರು, ಗ್ರಾಮ ಪಂಚಾಯಿತಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾ ನಗರಪಾಲಿಕೆ ಅಧಿಕಾರಿಗಳು ಸೊಳ್ಳೆ ಉತ್ಪತ್ತಿ ಯಾಗದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಸಾರ್ವಜನಿಕರು ಸಿಕ್ಕಲ್ಲೆಲ್ಲಾ ತ್ಯಾಜ್ಯ ಸುರಿಯುವುದನ್ನು ಕಡಿಮೆ ಮಾಡಬೇಕು. ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿ, ಸಾಂಕ್ರಾಮಿಕ ರೋಗ ತಡೆಗಟ್ಟಬಹುದು.

ಪರಿಸರ ಸ್ವಚ್ಛವಾಗಿಡಿ: ಉತ್ತಮ ಆರೋಗ್ಯಕ್ಕಾಗಿ ಹಾಗೂ ಯಾವುದೇ ರೋಗಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುದಿಸಿ ಆರಿಸಿದ ನೀರು, ಬಿಸಿಯಾದ ಊಟ, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಬಯಲು ಶೌಚಾವನ್ನು ಬಿಟ್ಟು, ಶೌಚಗೃಹ ಬಳಸಬೇಕು. ತ್ಯಾಜ್ಯ ವಸ್ತುಗಳನ್ನು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಮೂಲಕ ಗ್ರಾಮ, ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

● ಸತೀಶ್‌ ದೇಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ