ಕುರುಚಲು ಕಾಡಿಗೆ ಬೆಂಕಿ: ತೋಟಗಳು ಹಾನಿ
Team Udayavani, Feb 8, 2021, 1:29 PM IST
ನಂಜನಗೂಡು: ತಾಲೂಕಿನ ಕೊಣನೂರು ವ್ಯಾಪ್ತಿಯ ಕುರುಚಲು ಕಾಡಿಗೆ ಭಾನುವಾರ ಬೆಂಕಿ ಬಿದ್ದ ಪರಿಣಾಮ ಅಲ್ಲಿದ್ದ ವನ ಸಿರಿ ಸುಟ್ಟು ಕರುಕಲಾಗಿದೆ.
ಕೊಣನೂರು ಹನುಮನಪುರ ಬಳಿ ಇರುವ ಕುರುಚಲು ಪಲ್ಲಿಯಲ್ಲಿ ಕಿಚ್ಚು ಕಾಣಿಸಿಕೊಂಡಿದ್ದು, ಈ ಕಾಡಿಗೆ ಹೊಂದಿಕೊಂಡಿರುವ ರೈತರ ಹಣ್ಣಿನ ತೋಟ, ಗೋಮಾಳ ಸೇರಿದಂತೆ ನೂರಾರು ಎಕರೆ ಪ್ರದೇಶಕ್ಕೆ ಬೆಂಕಿ ತಗುಲಿದೆ. ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಇದನ್ನೂ ಓದಿ : ಡಾ|ರಾಜ್ ತವರು ತಾಲೂಕಿನ ಟ್ಯಾಕೀಸ್‌ಗಳ ಸ್ಥಿತಿಗತಿ
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪಕ್ಕದ ಕೃಷ್ಣ ಮೃಗದ ವಿಹಾರ ಧಾಮಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚದಂತೆ ನಂದಿಸುವಲ್ಲಿ ಯಶಸ್ವಿಯಾದರು. ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಒಟ್ಟಾರೆ ಕಿರು ಕಾಡಿನ ಪ್ರದೇಶಕ್ಕೆ ಹೊಂದಿಕೊಂಡಿದ್ದ ರೈತರ ನೆಲ್ಲಿ, ಮಾವು, ಹುಣಸೆ, ಗೊಂಡಂಬಿ ಮರಗಿಡಗಳು ಬೆಂಕಿಗೆ ಆಹುತಿಯಾಗಿವೆ.