ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ನಾಲ್ವರಿಂದ ನಾಮಪತ್ರ

Team Udayavani, Jun 4, 2019, 3:00 AM IST

ಕೆ.ಆರ್‌.ನಗರ: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಶಿಕ್ಷಕರ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಸಾಮರಸ್ಯ ತಾಲೂಕು ಪ್ರಾಥುಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಬೆಂಬಲಿತರಾದ ಡಿ.ಎಸ್‌.ಗೋವಿಂದ, ಮಹೇಶ್‌, ಬೇಲೂರಯ್ಯ ಮತ್ತು ಕಾಂತಾಚಾರ್‌ ಮಿನಿ ವಿಧಾನಸೌಧದ ತಹಶೀಲ್ದಾರ್‌ ಕಚೇರಿಯಲ್ಲಿ ಚುನಾವಣಾಧಿಕಾರಿ ಕುಮಾರ್‌ರಿಗೆ ತಮ್ಮ ಉಮೇದುವಾರಿಕೆ ನೀಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಾತನಾಡಿ, ಮೇ 13ರಂದು ಚುನಾವಣೆ ನಡೆಯಲಿದ್ದು, ತಾಲೂಕಿನಲ್ಲಿ ಒಟ್ಟು 725 ಮಂದಿ ಶಿಕ್ಷಕ ಮತದಾರರು ನಮ್ಮ ಸಂಘಟನೆ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕೆಂದರು.

ಕಳೆದ ಚುನಾವಣೆಯಲ್ಲಿ ನಮ್ಮ ಸಂಘಟನೆ ವತಿಯಿಂದ ಸೂಕ್ತ ಮತ್ತು ಸಮರ್ಥರಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಆಡಳಿತ ನಡೆಸಲಾಯಿತು. ಅದೇ ರೀತಿಯಲ್ಲಿ ಈ ಬಾರಿಯೂ ಶಿಕ್ಷಕ ಮಿತ್ರರು ನಮ್ಮ ಗುಂಪಿನ ಅಭ್ಯರ್ಥಿಗಳಿಗೆ ಮತ ನೀಡಲು ಉತ್ಸುಕರಾಗಿದ್ದು, ನಮ್ಮ ಸಂಘಟನೆ ಮತ್ತೂಮ್ಮೆ ಹೆಚ್ಚು ಸ್ಥಾನ ಪಡೆಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ ಅಧ್ಯಕ್ಷ ನಾಗರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪ್ರಸನ್ನಕುಮಾರ್‌, ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿವಾಕರ, ಮಾಜಿ ಅಧ್ಯಕ್ಷ ನಾಗರಾಜ್‌,

ಕಾರ್ಯದರ್ಶಿ ಗಂಗಾಧರ, ನಿರ್ದೇಶಕರಾದ ರಾಮಪ್ರಸಾದ್‌, ಪಿ.ಆರ್‌.ಲೋಕೇಶ್‌, ಮಹದೇವ, ಬಿ.ಎಲ್‌.ದಿನೇಶ್‌, ಮಹದೇವಪ್ಪ, ಪುಟ್ಟಣ್ಣಯ್ಯ, ಶಿಕ್ಷಕರಾದ ರವಿ, ಪ್ರಮೀಳಾ, ಉಮೇಶ್‌, ಚಿಕ್ಕೇಗೌಡ, ರಂಗಯ್ಯ, ಗೋವಿಂದರಾಜು, ಮಹದೇವಸ್ವಾಮಿ, ಕೃಷ್ಣೇಗೌಡ, ಮೋಹನ್‌ಕುಮಾರ್‌, ವಿಷ್ಣುಶೆಟ್ಟಿ ಮತ್ತಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ