ಅಂತರ್ಜಲ ವೃದ್ಧಿಗೆ ಜನಜಾಗೃತಿ ಅಗತ್ಯ
Team Udayavani, Feb 19, 2020, 3:00 AM IST
ಮೈಸೂರು: ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನೀರಿಲ್ಲದೇ ಕಷ್ಟಕರ ಜೀವನ ಎದುರಿಸಬೇಕಾಗುತ್ತದೆ ಎಂದು ಜಿಪಂ ಸಿಇಒ ಕೆ.ಜ್ಯೋತಿ ಹೇಳಿದರು.
ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಅಂತರ್ಜಲ ನಿರ್ದೇಶನಾಲಯ, ಹಿರಿಯ ಭೂವಿಜ್ಞಾನಿ ಹಾಗೂ ಜಿಲ್ಲಾ ಅಂತರ್ಜಲ ಕಚೇರಿಯ ಸಹಯೋಗದಲ್ಲಿ, ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ನಿರ್ವಹಣೆ ಹಾಗೂ ಗುಣಮಟ್ಟ ಮತ್ತು ವಿಫಲ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಮ್ಮಿಕೊಳ್ಳಲಾದ ಅಂತರ್ಜಲ ಜನ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕುಸಿಯುತ್ತಿರುವ ಅಂತರ್ಜಲ: ಅಂತರ್ಜಲ ಮಟ್ಟ ಇತ್ತೀಚೆಗೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಒಂದು ವೇಳೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನೀರಿಲ್ಲದೇ ಕಷ್ಟಕರ ಜೀವನ ಎದುರಿಸಬೇಕಾಗುತ್ತದೆ. ನೀರಿನ ಬಳಕೆ ಅತಿಯಾಗಿದ್ದು, ಗುಣಮಟ್ಟ ಕಡಿಮೆಯಾಗಿದೆ. ಜೊತೆಗೆ ಅಂತರ್ಜಲ ಕಲುಷಿತ ಗೊಂಡಿದೆ ಎಂಬ ವರದಿ ಬರುತ್ತಿದೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾಯಾಗಿದ್ದು, ಈ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು.
ನೀರು ಇಂದು ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಅಗತ್ಯವಾಗಿದೆ. ಅಂತರ್ಜಲ ಬರೀದಾದರೆ ಆಗುವ ಗಂಭೀರತೆ ಜನತೆಗೆ ಅರ್ಥವಾಗಿಲ್ಲ. ಅಂತರ್ಜಲ ಹೆಚ್ಚು ಮಾಡುವುದು, ಸಂರಕ್ಷಣೆ ಮಾಡುವುದು ಹೇಗೆ ಎನ್ನುವುದು ತಿಳಿದಿರುವುದಿಲ್ಲ. ಈ ಕುರಿತು ಅವರಿಗೆ ಮಾಹಿತಿ ನೀಡಬೇಕು ಎಂದರು.
ಮಳೆ ಕೊಯ್ಲಿನಿಂದ ಅಂತರ್ಜಲ ಹೆಚ್ಚು: ಮಳೆ ಬಂದಾಗ ಮಳೆ ಕೊಯ್ಲು ಮೂಲಕ ನೀರು ಸಂಗ್ರಹಣೆ ಮಾಡುವುದರಿಂದಲೂ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಜನತೆಯಲ್ಲಿ ವಿಷಯದ ಗಂಭೀರತೆಯನ್ನು ಹೆಚ್ಚಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಕೊಳವೆ ಬಾವಿ ಹೆಚ್ಚು ಕೊರೆಯಬಾರದು. ಕಟ್ಟು ನಿಟ್ಟಾಗಿ ಈ ಕ್ರಮವನ್ನು ಪಾಲಿಸಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಕೊಳವೆ ಬಾವಿ ಕೊರೆಯಬೇಕು.
ಎನ್‌ಜಿಒ, ಸಂಘ-ಸಂಸ್ಥೆಗಳು ಕೂಡ ಈ ಕುರಿತು ಜನರಲ್ಲಿ ಅರಿವು ಮೂಡಿಸಲುವ ಕೆಲಸ ಮಾಡಬೇಕು. ನೀರು ಜೀವದಾಯಿನಿಯಾಗಿದ್ದು, ಅದನ್ನು ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯೀಕರಣ, ಅಂತರ್ಜಲ ಪುನಶ್ಚೇತನ, ಮಳೆ ನೀರು ಸಂಗ್ರಹ ಕುರಿತು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ಜಲ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅವುಗಳನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಹೊಂಡ ನಿರ್ಮಿಸುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಂತರ್ಜಲ ನಿರ್ದೇಶನಾಲಯದ ಬಿ.ಟಿ.ಕಾಂತರಾಜು ಅಂತರ್ಜಲ ಕೈಪಿಡಿ ಬಿಡುಗಡೆ ಮಾಡಿದರು. ಎಸ್‌ಐಯುಡಿ ನಿರ್ದೇಶಕ ಜಿ.ವೆಂಕಟೇಶ್ ಕಡಗದ ಕೈ, ಗಣಿ ಭೂವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶ್, ಇಸ್ರೋ ನಿವೃತ್ತ ಹಿರಿಯ ವಿಜ್ಞಾನಿ ಪ್ರೊ. ಜಗನ್ನಾತ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಯಾವ ರಂಗ ಅಸ್ತಿತ್ವಕ್ಕೆ ಬಂದರೂ ಬಿಜೆಪಿ ಅಲ್ಲಾಡಿಸಲಾಗದು: ಶೆಟ್ಟರ್
ಮುಂಬೈ: “ವಿಧವಾ ಶಾಸ್ತ್ರ’ಕ್ಕೆ 34 ಗ್ರಾಪಂಗಳಿಂದ ಗುಡ್ಬೈ!
ಶೀಘ್ರ ಹಳೆ ಕೈಗಾರಿಕಾ ವಲಯಗಳ ಅಭಿವೃದ್ಧಿ: ಸಚಿವ ಮುರುಗೇಶ್ ನಿರಾಣಿ
ರಾಜ್ಯದಲ್ಲಿ 65 ಸಾವಿರ ಕೋಟಿ ರೂ. ಹೂಡಿಕೆ; ದಾವೋಸ್ನ 25 ಕಂಪೆನಿ ಜತೆ ಸಿಎಂ ಮಾತುಕತೆ
ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕರರಿಗೆ ವಂಚನೆ : ಇಬ್ಬರ ಬಂಧನ