ಗುಂಡ್ಲುಪೇಟೆ: ಗೀತಾ, ನಿರಂಜನಕುಮಾರ್‌ ಆಸ್ತಿ ವಿವರ

Team Udayavani, Mar 21, 2017, 1:17 PM IST

ಗುಂಡ್ಲುಪೇಟೆ: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್‌) ಅವರ ಚರಾಸ್ತಿ 1.53 ಕೋಟಿ ರೂ. ಅವರ ಪತಿ ಮಹದೇವಪ್ರಸಾದ್‌ ಅವರ ಚರಾಸ್ತಿ 2.75 ಕೋಟಿ ರೂ. ಹಾಗೂ ಸ್ಥಿರಾಸ್ತಿ ಸೇರಿ 5 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಗೀತಾ ಅವರಿಗೆ 83.56 ಲಕ್ಷ ರೂ. ಸಾಲವಿದ್ದರೆ, ಮಹದೇವಪ್ರಸಾದ್‌ ಅವರಿಗೆ 1.18 ಕೋಟಿ ರೂ. ಸಾಲವಿದೆ ಎಂದು ಮಾಹಿತಿ ನೀಡಿದ್ದಾರೆ. ಗೀತಾ ಅವರ ಬಳಿ 2.50 ಲಕ್ಷ ರೂ. ನಗದು ಹಣವಿದೆ. 8 ಲಕ್ಷ ಮೌಲ್ಯದ ವೋಕ್ಸ್‌ವ್ಯಾಗನ್‌ ಕಾರು, 750 ಗ್ರಾಂ ಚಿನ್ನ, ಮಹಾನ್‌ ಸಾಫ್ಟ್ವೇರ್‌ನ 1.8 ಕೋಟಿ ರೂ. ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. ಪತಿಯ ಹೆಸರಿನಲ್ಲಿ ಪ್ರಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಕೊಳ್ಳಲು 1.06 ಕೋಟಿ ರೂ. ಅಡ್ವಾನ್ಸ್‌ ನೀಡಲಾಗಿದೆ.

ಪತಿಯ ಹೆಸರಿನಲ್ಲಿ 1 ಕೆಜಿ ಚಿನ್ನ ಇದೆ. ಬಂಡಿಪಾಳ್ಯ, ಹಾಲಹಳ್ಳಿಯಲ್ಲಿ ಗೀತಾ 2 ಎಕರೆ 33 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಪತಿ ಎಚ್‌ಎಸ್‌ಎಂ ಹೆಸರಿನಲ್ಲಿ ವಿಜಯಪುರ, ಬೊಗ್ಗನಪುರ, ಅರೆಪುರ ಸೇರಿ 39 ಎಕರೆ ಜಮೀನಿದೆ. ಮೈಸೂರಿನ ಗಗನಚುಂಬಿ ರಸ್ತೆಯಲ್ಲಿ, ಹೇಮಾವತಿ ಅಪಾರ್ಟ್‌ಮೆಂಟ್‌ನಲ್ಲಿ ಎಚ್‌ಎಸ್‌ಎಂ ಹೆಸರಿನಲ್ಲಿ ಕಟ್ಟಡಗಳಿವೆ. ಚಾಮರಾಜನಗರ ದಲ್ಲಿ ನಿವೇಶನವಿದೆ.

2.86 ಕೋಟಿ ರೂ ಒಡೆಯ ನಿರಂಜನಕುಮಾರ್‌:  ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌ 2.86 ಕೋಟಿ ಸ್ಥಿರಾಸ್ಥಿ ಹೊಂದಿದ್ದು, 17.25 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ತಂದೆ ಶಿವಮಲ್ಲಪ್ಪ ಅವರದೂ ಸೇರಿದಂತೆ ಒಟ್ಟು 1.15 ಕೋಟಿ ರೂ. ಸಾಲವಿರುವುದಾಗಿ ತಿಳಿಸಿದ್ದಾರೆ. ಸ್ವಯಾರ್ಜಿತ ಸ್ವತ್ತು 1.45 ಕೋಟಿ ರೂ. ಬೆಲೆ ಹೊಂದಿದೆ. ಪಿತ್ರಾರ್ಜಿತ ಆಸ್ತಿ 1.41 ಕೋಟಿ ರೂ. ಬೆಳೆಯುಳ್ಳದ್ದಾಗಿದೆ. ಬೆಳವಾಡಿ, ಹುಂಡೀಪುರ, ಹುಲ್ಲೇಪುರ ಸೇರಿದಂತೆ 47 ಲಕ್ಷ ರೂ. ಕೃಷಿ ಜಮೀನು ಹೊಂದಿದ್ದಾರೆ.

ಸಿದ್ದಯ್ಯನಪುರ ಬಳಿ ಕೃಷಿಯೇತರ 1.50 ಕೋಟಿ ರೂ. ಜಮೀನಿದೆ. ಗುಂಡ್ಲುಪೇಟೆಯಲ್ಲಿ ಸಿಎಂಎಸ್‌ ಕಲ್ಯಾಣಮಂಟಪ 75 ಲಕ್ಷ ರೂ. ಬೆಲೆ, ಮೈಸೂರಿನ ನಾಚನಹಳ್ಳಿಪಾಳ್ಯದಲ್ಲಿ 25 ಲಕ್ಷ ರೂ., ಗುಂಡ್ಲುಪೇಟೆಯ್ಲಲಿ 25 ಲಕ್ಷ ರೂ. ಬಲೆಯ ಮನೆಯಿದೆ. ಪತ್ನಿಯ ಹೆಸರಿನಲ್ಲಿ ಮೈಸೂರಿನ ನಾಚನಹಳ್ಳಿಪಾಳ್ಯದಲ್ಲಿ ತಲಾ 20*70 ಅಳತೆಯುಳ್ಳ ಎರಡು ನಿವೇಶನಗಳಿವೆ. 1 ಕೆಜಿ ಚಿನ್ನ ಹೊಂದಿದ್ದಾರೆ. ಇನ್ನೋವಾ ಹಾಗೂ ಹೋಂಡಾ ಸಿಟಿ ಕಾರುಗಳಿವೆ. ತಂದೆ, ತಾಯಿ ಹೆಸರಿನಲ್ಲಿ ಜಂಟಿಯಾಗಿ 49.50 ಲಕ್ಷ ಪ್ರತ್ಯೇಕ ಸಾಲವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...