Udayavni Special

ಸಾಧ್ಯವಾದರೆ ಬನ್ನಿ, ಇಲ್ಲವಾದರೆ ಸುಮ್ಮನಿರಿ


Team Udayavani, Jan 21, 2021, 12:48 PM IST

H.vishwanath speech

ಮೈಸೂರು: ಎಸ್ಟಿ ಮೀಸಲಿಗಾಗಿ ಕುರುಬ ಸಮಾಜದ ಸ್ವಾಮೀಜಿಗಳು ಹಣ ಪಡೆದು ಹೋರಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಕೇವಲ ಸ್ವಾಮೀಜಿಗಷ್ಟೇ ಅಲ್ಲ, ಇಡೀ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಕಿಡಿಕಾರಿದರು.

ನಗರದ ವಿದ್ಯಾರಣ್ಯಪುರಂನಲ್ಲಿರುವ ಖಾಸಗಿ ಕಲ್ಯಾಣಮಂಟಪದಲ್ಲಿ ಬುಧವಾರ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಹೋರಾಟ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜವನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಿನೊಬ್ಬನೇ ಬುದ್ಧಿವಂತ ಅಲ್ಲ

ಕುಲಶಾಸ್ತ್ರ ಅಧ್ಯಯನ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಕಿಡಿಕಾರಿದ ವಿಶ್ವನಾಥ್‌, ಸಿದ್ದರಾಮಯ್ಯ ನಿನೊಬ್ಬನೇ ಬುದ್ಧಿವಂತ ಅಲ್ಲ. ನಮಗೂ ಅದು ಗೊತ್ತಿದೆ. ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು. ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಗುಡುಗಿದರು. ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆ ಸರಿ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಅದೇ ರೀತಿ ಇದ್ದಾರೆ. ಇದರಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು, ನಾನು, ನಾನು ಅನ್ನೋದು ಎಲ್ಲರಿಗೂ ಬಂದಿದೆ ಎಂದು ಪ್ರಸಕ್ತ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಶ್ರೀಗಳು ಆರೆಸ್ಸೆಸ್‌ ಮೂಲದವರು:ಕುರುಬ ಸಮಾಜದ ಎಸ್ಟಿ ಮೀಸಲು ಹೋರಾಟಕ್ಕೆ ಆರ್‌ಎಸ್‌ ಎಸ್‌ ಪ್ರಚೋದನೆ ನೀಡುತ್ತಿದೆ ಎಂದು ಹೇಳುತ್ತಿದ್ದಿರಾ, ನಮ್ಮ ಮಠದ ಸ್ವಾಮೀಜಿ ಕೂಡ ಆರ್‌ಎಸ್‌ಎಸ್‌ ಮೂಲದವರು ಎಂಬುದು ತಮಗೆ ತಿಳಿದಿಲ್ಲವೇ, ಆರ್‌ಎಸ್‌ಎಸ್‌ ಕುಮ್ಮಕ್ಕಿನಿಂದ ಹೊರಾಟ ನಡೆಯುತ್ತಿದೆ ಎನ್ನುವ ಮೂಲಕ ಇಡೀ ಸಮಾಜವನ್ನು ಅವಮಾನ ಮಾಡುತ್ತಿದ್ದಿರಾ, ಕುರುಬ ಸಮಾಜದ ಅಭಿವೃದ್ಧಿಗಾಗಿ ನಡೆಸುತ್ತಿರುವ ಎಸ್ಟಿ ಮೀಸಲಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸಾಧ್ಯವಾದರೆ ಬನ್ನಿ ಇಲ್ಲವಾದರೆ ಸುಮ್ಮನಿರಿ ಎಂದು ಹೇಳಿದರು.

ಸಮಾಜದ ಜನರು ಎಸ್ಟಿ ಮೀಸಲು ಹೋರಾಟ ಸಂಬಂಧ ಯಾವುದೇ ವದಂತಿಗಳಿಗೆ ಕಿವಿಗೊಡದೇ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌, ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಮುಕುಡಪ್ಪ, ಅಣ್ಣೇಗೌಡ, ಬಿ.ಎಂ.ರಘು, ಸಂಘಟನಾ ಕಾರ್ಯದರ್ಶಿ ಜೋಗಿ ಮಂಜು, ಹರೀಶ್‌, ಮುಡಾ ಸದಸ್ಯ ನವೀನ್‌, ಪಿರಿಯಾಪಟ್ಟಣ ಗಣೇಶ್‌, ಹುಣಸೂರು ಗಣೇಶ್‌, ಗುಂಡ್ಲುಪೇಟೆ ಹುಚ್ಚೇಗೌಡ, ಬೀರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagadish shetytar

ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲಿದೆ: ಶೆಟ್ಟರ್‌

Laxman

ಜಾರಕಿಹೊಳಿ ವಿರುದ್ಧ ಎಫ್ಐಆರ್‌ ದಾಖಲಿಸಿ

Cheeta Death

ಉರುಳಿಗೆ ಸಿಲುಕಿ 3 ವರ್ಷದ ಗಂಡು ಚಿರತೆ ಸಾವು

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಭಾರಿ ಪ್ರಮಾಣದ ಬೆಂಕಿ

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಭಾರಿ ಪ್ರಮಾಣದ ಬೆಂಕಿ

ಆನೆದಾಳಿಗೆ ಬಲಿಯಾಗಿದ್ದ ಮಣಿಕಂದನ್‌ ಕಾರ್ಯ ಚಿರಸ್ಥಾಯಿ

ಆನೆದಾಳಿಗೆ ಬಲಿಯಾಗಿದ್ದ ಮಣಿಕಂದನ್‌ ಕಾರ್ಯ ಚಿರಸ್ಥಾಯಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ನಳ್ಳಿ  ತಿರುಗಿಸಿದರೆ ಬರೋದು ಬರಿ ಗಾಳಿ!

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.