Udayavni Special

ಜಿಲ್ಲೆಯಲ್ಲಿ ಮಳೆ ಅಬ್ಬರ; ಮತ್ತೆ ಪ್ರವಾಹ ಭೀತಿ

ಕಬಿನಿ, ನುಗು, ತಾರಕ ಜಲಾಶಯಗಳು ಭರ್ತಿ

Team Udayavani, Aug 8, 2020, 11:43 AM IST

Mysuru-tdy-2

ಮೈಸೂರು: ಜಿಲ್ಲೆಯಲ್ಲಿ ವರ್ಷಧಾರೆ ಚುರುಕುಗೊಂಡಿದ್ದು, ಕಳೆದ 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ, ಜಿಲ್ಲೆಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ಬಯಲು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ, ಸರಗೂರು ತಾಲೂಕಿನ ನುಗು, ತಾರಕ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಒಳಹರಿವು ಹೆಚ್ಚಿರುವ ಪರಿಣಾಮ ಡ್ಯಾಂನಿಂದ ನದಿಗೆ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಕೇರಳ ವೈನಾಡು ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆ ಮೈದುಂಬಿರುವ ಕಪಿಲಾ ನದಿ, ನೆರೆ ಭೀತಿ ಸೃಷ್ಟಿಸಿದೆ. ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದ್ದು ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಕಪಿಲಾ, ಲಕ್ಷ್ಮಣತೀರ್ಥ ನದಿಗಳು ಈಗಾಗಲೇ ಮೈದುಂಬಿ ಹರಿಯುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಅನೇಕ ಜನವಸತಿ ಪ್ರದೇಶ ಮುಳುಗಡೆ ಆತಂಕ ಎದುರಾಗಿದೆ. ಈಗಾಲೇ ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದ್ದು, 13400 ಕ್ಯೂಸೆಕ್‌ ನೀರಿನ್ನು ಬಿಟ್ಟಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಪಿರಿಯಾಪಟ್ಟಣ ತಾಲೂಕಿನ ಆವರ್ತಿ, ಕೊಪ್ಪ, ಕಣಗಾಲ್‌ ಹಾಗೂ ಕೆ.ಆರ್‌.ನಗರ ತಾಲೂಕಿನ ಹಲವು ಭಾಗಗಳಿಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕಾವೇರಿ ಕೊಳ್ಳದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹವುಂಟಾಗಿದ್ದು ಹುಣಸೂರು ತಾಲೂಕು ಹನಗೋಡು, ಶಿಂಡೇನಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಜತೆಗೆ ಹುಣಸೂರು ಪಟ್ಟಣದ ಕೆಲ ಬಡಾವಣೆಗಳಿಗೂ ನೀರು ಆವರಿಸುವ ಮುನ್ಸೂಚನೆ ಇದ್ದು, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ನಾಲೆ ಅಂಚು ಕುಸಿತ: ಮಳೆ ರಭಸಕ್ಕೆ ಎಚ್‌.ಡಿ.ಕೋಟೆ ತಾಲೂಕಿನ ತಾರಕ ಜಲಾಶಯ ಭರ್ತಿಯಾಗಿದ್ದು, ನಾಲೆಗೆ ನೀರು ಹರಿಬಿಡಲಾಗಿದೆ. ಬಲದಂಡೆಯ ನಾಲೆಯಲ್ಲಿ ಕಲೆವೆಡೆ ನೀರಿನ ರಭಸಕ್ಕೆ ಅಂಚುಗಳು ಕುಸಿತಗೊಂಡಿದೆ. ರೆಡ್‌ ಅಲರ್ಟ್‌ ಘೋಷಣೆ: ಜಿಲ್ಲೆಯ ನದಿ ಬಯಲು ಪ್ರದೇಶಗಳಲ್ಲಿ ಜಿಲ್ಲಾಡಳಿತ ಈಗಾಗಲೇ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದು, ತಗ್ಗು ಪ್ರದೇಶಗಳ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಬಾರಿ ಇದೇ ಆಗಸ್ಟ್‌ ನಲ್ಲಿ ಸುರಿದ ಭಾರೀ ಮಳೆಗೆ ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಎಚ್‌.ಡಿ.ಕೋಟೆ, ತಿ.ನರಸೀಪುರ ತಾಲೂಕಿನ ಹಲವು ಪ್ರದೇಶ ಮತ್ತು ಬಡಾವಣೆ ಮನೆಗಳು ಜಲಾವೃತಗೊಂಡಿದ್ದವು. ನೂರಕ್ಕೂ ಹೆಚ್ಚು ಮನೆ ಹಾನಿಯೊಳಗಾಗಿದ್ದವು. ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಈ ವೇಳೆ ಹಲವೆಡೆ ಗಂಜಿ ಕೇಂದ್ರ ತೆರೆಯಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು ಆತಂಕ ಮನೆಮಾಡಿದೆ.

ಗಾಯದ ಮೇಲೆ ಬರೆ ಎಳೆದ ವರುಣ: ಕೋವಿಡ್  ಲಾಕ್‌ಡೌನ್‌ ಹಿನ್ನೆಲೆ ಜಿಲ್ಲೆಯಲ್ಲಿ ತರಕಾರಿ, ಹೂ ಹಾಗೂ ಹಣ್ಣು ಬೆಳೆಯುವ ರೈತರು ಕಳೆದ 4-5 ತಿಂಗಳಿಂದ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಲಭ್ಯವಾಗದೇ ನಷ್ಟ ಅನುಭವಿಸಿ, ಇನ್ನೂ ಚೇತರಿಸಿಕೊಳ್ಳುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು ಬೆಳೆ ಹೊಲ ದಲ್ಲಿಯೇ ಹಾಳುಗುತ್ತಿದೆ. ಅಲ್ಲದೇ, ತಗ್ಗು ಪ್ರದೇಶದ ಮನೆಗಳು ಜಲಾವೃತ ಅಪಾಯ ಎದುರಾಗಿದೆ.

ನಂಜನಗೂಡು ತಾಲೂಕಿನಲ್ಲಿ ನೆರೆ : ಕಬಿನಿ ಜಲಾಶಯ ತುಂಬಿದ್ದು, ಭಾರಿ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ಕಪಿಲಾ ನದಿ ತಟದಲ್ಲಿಯೂ ಜನವಸತಿ ಪ್ರದೇಶ ಮುಳುಗಡೆ ಸಾಧ್ಯತೆ ಇದೆ. ಈಗಾಗಲೇ ಎಚ್‌.ಡಿ.ಕೋಟೆ- ಎನ್‌.ಬೇಗೂರು ಸಂಪರ್ಕದಲ್ಲಿ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುತ್ತೂರು ಸೇತುವೆ ಜಲಾವೃತಗೊಂಡಿದೆ. ಜತೆಗೆ ನಂಜನಗೂಡಿನ ಪರಶುರಾಮ ದೇಗುಲ, 16 ಕಾಲು ಮಂಟಪ, ಸ್ನಾನದ ಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದರೆ ಹಳ್ಳದಕೇರಿ, ಒಕ್ಕಲಗೇರಿ, ದೇವಸ್ಥಾನ ಅಕ್ಕಪಕ್ಕದ ಬಡಾವಣೆಗಳು ಜಲಾವೃತಗೊಂಡಿವೆ.

 

-ಸತೀಶ್‌ ದೇಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

IPLಓವರ್‌ ಟು ಯುಎಇ IPL‌ ಶೋ ಆರಂಭ

ಓವರ್‌ ಟು ಯುಎಇ IPL‌ ಶೋ ಆರಂಭ

Narasimha-Nayaka

ಸಿಎಂ ಕುರ್ಚಿ ಪತನ, ಗುದ್ದಾಟ ಎಲ್ಲಾ ಗಾಳಿ ಸುದ್ದಿ: ನರಸಿಂಹ ನಾಯಕ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

mysuru-tdy-1

ಮೋದಿ ಹುಟ್ಟುಹಬ್ಬ: ಬಸವ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

ಹುಣಸೂರು: ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ; ಓರ್ವನ ಬಂಧನ; ನಾಲ್ವರು ಪರಾರಿ

ಹುಣಸೂರು: ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ; ಓರ್ವನ ಬಂಧನ; ನಾಲ್ವರು ಪರಾರಿ

ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆಯಾದ ಉನ್ನತ ಶಿಕ್ಷಣ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆಯಾದ ಉನ್ನತ ಶಿಕ್ಷಣ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ



ಹೊಸ ಸೇರ್ಪಡೆ

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

IPLಓವರ್‌ ಟು ಯುಎಇ IPL‌ ಶೋ ಆರಂಭ

ಓವರ್‌ ಟು ಯುಎಇ IPL‌ ಶೋ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.