ರಂಜಾನ್ ಉಪವಾಸ ಕೈಗೊಳ್ಳುವವರಿಗೆ ಗೌರವ ನೀಡಿ
Team Udayavani, May 11, 2021, 1:42 PM IST
ಕೆ.ಆರ್.ನಗರ: ರಂಜಾನ್ ವೇಳೆ ಕಠಿಣ ಉಪವಾಸ ಮಾಡುವುದರ ಜತೆಗೆ ಪವಿತ್ರ ವ್ರತ ಕೈಗೊಳ್ಳುವವರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್ ಹೇಳಿದರು.
ಪಟ್ಟಣದ ಮುಸ್ಲಿಂ ಬಡಾವಣೆಯ ಆರ್‌ಕೆಎಫ್ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಭಾಂಧವರಿಗೆ ಆಹಾರ ಪದಾರ್ಥ ವಿತರಿಸಿ ಮಾತನಾಡಿದರು. ಸರ್ವರನ್ನೂ ಎಲ್ಲರೂ ಪ್ರೀತಿಸಬೇಕು ಎಂದು ಎಲ್ಲಾ ಧರ್ಮಗಳು ಹೇಳುತ್ತವೆ. ಆದ್ದರಿಂದ ನಾವು ಆ ಧರ್ಮಗಳ ಸಾರವನ್ನು ಅರಿತು ಪಾಲಿಸಬೇಕು ಎಂದರು.
ಮುಂದುವರೆಸುವೆ: ತಾನು ಪ್ರತೀ ವರ್ಷ 500ಕ್ಕೂ ಹೆಚ್ಚು ಮುಸಲ್ಮಾನ ಬಾಂಧವರಿಗೆ ರಂಜಾನ್ ವೇಳೆ ಆಹಾರ ಪದಾರ್ಥ ಸೇರಿ ಇತರೆ ವಸ್ತುಗಳನ್ನು ದಾನ ಮಾಡುತ್ತಿದ್ದು, ಈಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇನೆಂದು ತಿಳಿಸಿದರು.
ಆತ್ಮತೃಪ್ತಿಯಿದೆ: ಮುಂಬರುವ ದಿನಗಳಲ್ಲಿ ಪಟ್ಟಣದ ಸ್ವಚ್ಛತೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ ಆಹಾರ ಪದಾರ್ಥವಿತರಿಸಲು ನಿರ್ಧರಿಸಿದ್ದೇನೆ. ಸಂಪಾದಿಸಿದ ಆದಾಯದಲ್ಲಿ ಅಲ್ಪ ಪ್ರಮಾಣವನ್ನು ಬಡವರು ಮತ್ತು ನಿರ್ಗತಿಕರಿಗೆ ನೀಡುವುದರಿಂದ ತನಗೆ ಆತ್ಮತೃಪ್ತಿ ಸಿಗುತ್ತದೆ ಎಂದರು.
ಇದೇ ವೇಳೆ ಮುಸ್ಲಿಂ ಬಡಾವಣೆಯ 500ಕ್ಕೂ ಅಧಿಕ ಮಂದಿಗೆ ದವಸ, ಧಾನ್ಯ, ಇತರೆ ಪದಾರ್ಥಗಳನ್ನುನೀಡಿದರಲ್ಲದೆ ರಂಜಾನ್ ವ್ರತ ಕೈಗೊಂಡಿದ್ದ ಕೆಲವರಿಗೆ ಆರ್ಥಿಕ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಂಜುಳಾ, ಪೊಲೀಸ್ ಉಪನಿರೀಕ್ಷಕ ವಿ.ಚೇತನ್, ಪುರಸಭೆ ಮಾಜಿ ಸದಸ್ಯ ಸೈಯದ್‌ಅಸ್ಲಾಂ, ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಆರ್‌ಕೆಎಫ್ ಗ್ರೂಪ್‌ನ ಅಧ್ಯಕ್ಷ ರಮೀಜ್‌ವುಲ್ಲಾಖಾನ್, ವೈದ್ಯ ಡಾ. ರಿಜ್ವಾನ್‌ವುಲ್ಲಾಖಾನ್, ಶಾಫಿ ಮಸೀದಿ ಅಧ್ಯಕ್ಷಇಸ್ಮಾಯಿಲ್‌ಖನೋಲಿ, ಮುಸ್ಲಿಂ ಮುಖಂಡರಾದ ಏಜಾಜ್ ಅಹಮದ್, ಎಂಜಾಸ್‌ಇಸ್ಮಾಯಿಲ್, ಶಾಕೀರ್‌ಅಹಮದ್, ಆನಂದ್‌ಇಮ್ರಾನ್, ಇರ್ಷಾದ್, ನಾಸಿರ್‌ಪಾಷಾ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿರಿಯಾಪಟ್ಟಣ : ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
ಇದು ಗುಂಡಿಯೋ ! ಗುಂಡೊಯೊಳಗೊಂದು ರಸ್ತೆಯೋ ? ಹುಣಸೂರಿನ ಸಂಪರ್ಕ ರಸ್ತೆಯ ದುಸ್ಥಿತಿ
ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
ಹುಣಸೂರು: ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಪೂರ್ಣಗೊಂಡಲ್ಲಿ ನಗರದಲ್ಲಿ ನೀರಿನ ಸಮಸ್ಯೆ ನೀಗಲಿದೆ :ಮಂಜುನಾಥ್