Udayavni Special

ಶಾಲಾ ಮಕ್ಕಳಿಗೆ ಮೂರು ತಿಂಗಳ ಪಡಿತರ ಡೌಟು

Team Udayavani, Nov 3, 2020, 3:52 PM IST

mysuru-tdy-1

ಸಾಂದರ್ಭಿಕ ಚಿತ್ರ

ಮೈಸೂರು: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆ ಬಿಸಿಯೂಟ ಪಡಿತರ ಹಾಗೂ ಕ್ಷೀರ ಭಾಗ್ಯ ಯೋಜನೆಯನ್ನುತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಮಕ್ಕಳಿಗೆ 3 ತಿಂಗಳ ಪಡಿತರ ಸಿಗುವುದು ಅನುಮಾನವಾಗಿದೆ.

ದೇಶದಲ್ಲಿ ಕೋವಿಡ್ ವೈರಾಣು ಭೀತಿ ಹಿನ್ನೆಲೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಮಾರ್ಚ್‌ 12ರಿಂದ ಬಂದ್‌ ಆಗಿದ್ದವು. ಆದರೂ ಮಕ್ಕಳ ಬಿಸಿಯೂಟಯೋಜನೆಯಡಿ ಸರ್ಕಾರ ಮೇ ತಿಂಗಳ ಅಂತ್ಯದವರೆಗೆ ಪಡಿತರ ನೀಡಿ ನಂತರ ಸ್ಥಗಿತಗೊಳಿಸಿತ್ತು. ಬಳಿಕ ಶಿಕ್ಷಣ ಇಲಾಖೆಯು, ಜೂನ್‌ನಿಂದ ಆಗಸ್ಟ್‌ ವರೆಗಿನ ಪಡಿತರವನ್ನು ವಿದ್ಯಾರ್ಥಿಗಳಿಗೆ ನೀಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆದಿತ್ತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೆರೆಡು ಶೇ.60/40ರ ಅನುಪಾತದಲ್ಲಿ ಬಿಪಿಎಲ್‌, ಐಪಿಎಲ್‌ ಕುಟುಂಬಗಳಿಗೆ ನೀಡಲಾಗುತ್ತಿದೆ. ಒಂದು ವೇಳೆ ಶಾಲಾ ಮಕ್ಕಳಿಗೂ ಈ ಮೂರು ತಿಂಗಳ ಬಿಸಿಯೂಟ ಪಡಿತರ ನೀಡಿದರೆ ಪುನರಾವರ್ತನೆಯಾಗಲಿದೆ ಎಂದು ತಿಳಿಸಿತ್ತು.

ಆದರೆ, ಮಕ್ಕಳಲ್ಲಿ ಪೂರಕ ಪೌಷ್ಟಿಕಾಂಶ ಕೊರತೆ ಇರುವುದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಆದೇಶ ನೀಡಿದ್ದು, ಅದರ ಉಲ್ಲಂಘನೆಯಾಗಬಾರದು ಎಂದು ಶಿಕ್ಷಣ ಇಲಾಖೆ ಮತ್ತೆ ಹಣಕಾಸು ಇಲಾಖೆಗೆ 3 ತಿಂಗಳ ಪಡಿತರ ನೀಡಲು ಅನುಮೋದಿಸುವಂತೆ ಪತ್ರ ನೀಡಿದೆ.

ಸರ್ಕಾರದ ನಿರ್ಧಾರ ಏನು?: ಒಂದು ವೇಳೆ ಶಿಕ್ಷಣ ಇಲಾಖೆ ಮನವಿಗೆ ಸರ್ಕಾರ ಸ್ಪಂದಿಸಿದರೆ, ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಮಕ್ಕಳಿಗೂ ಮೂರು ತಿಂಗಳ ಪಡಿತರ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2.20 ಲಕ್ಷ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 2,367 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಒಂದನೇ ತರಗತಿಯಿಂದ 10ನೇ ತರಗತಿಯ ವರೆಗೆ 2.20 ಲಕ್ಷ ವಿದ್ಯಾರ್ಥಿಗಳು ಒಳಪಟ್ಟಿದ್ದಾರೆ. ಇವರಲ್ಲಿ 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 100 ಗ್ರಾಂ ಅಕ್ಕಿ ಹಾಗೂ 4.91 ರೂ. ಬೇಳೆ ಮತ್ತು ಇತರೆ ಪದಾರ್ಥಗಳನ್ನು ನೀಡಲಾಗುತ್ತಿದೆ. ಜೊತೆಗೆ 6ನೇ ತರಗತಿಯಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 150 ಗ್ರಾಂ ಅಕ್ಕಿ, 7.45 ರೂ. ಮೌಲ್ಯದ ಬೇಳೆ ಪದಾರ್ಥ ನೀಡಲಾಗುತ್ತಿದೆ.

ಪ್ರಸ್ತುತ ಒಂದನೇ ತರಗತಿಯಿಂದ 8ನೇ ತರಗತಿಯ ಮಕ್ಕಳಿಗೆ ಕೇಂದ್ರ ಸರ್ಕಾರ ಅಕ್ಕಿ ಮತ್ತು ಗೋದಿ ಪೂರೈಕೆ ಮಾಡಿದರೆ, ಉಳಿದ ಸಾಂಬಾರ ಪದಾರ್ಥ, ಅಡುಗೆ ತಯಾರಿಕೆ ಹಾಗೂ ತರಕಾರಿ ಖರ್ಚನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ.40/60ರ ಅನುಪಾತದಲ್ಲಿ ಹಣ ವಿನಿಯೋಗಿಸುತ್ತಿವೆ. ಒಂಭತ್ತು ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ವೆಚ್ಚ ಮಾಡುತ್ತಿದ್ದು, ಇದರ ಜೊತೆಗೆ ಒಂದರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆ ಕಲ್ಪಿಸಿದೆ.

ವಿದ್ಯಾರ್ಥಿಗಳಿಗೆ ಸಿಗಬೇಕಾದ ಪಡಿತರ :  ಸದ್ಯಕ್ಕೆ ಶಾಲೆಗಳ ಬಾಗಿಲು ತೆರೆಯದೇ ಇರುವುದ ರಿಂದ ಜೂನ್‌, ಜುಲೈ ಹಾಗೂ ಆಗಸ್ಟ್‌ ಮಾಸದ ಪಡಿತರ ನೀಡಿಲ್ಲ. ಒಂದು ವೇಳೆ ಪಡಿತರವನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿದರೆ, ಒಂದನೇ ತರಗತಿಯಿಂದ 5ರವರೆಗಿನ ಪ್ರತಿ ವಿದ್ಯಾರ್ಥಿಗೆ 7.5 ಕೆ.ಜಿ. ಅಕ್ಕಿ, 368 ರೂ. ಮೌಲ್ಯದ ಬೇಳೆ ಪದಾರ್ಥ ಹಾಗೂ ಹಾಲಿನ ಪುಡಿ ಲಭ್ಯವಾಗಲಿದೆ. 5ರಿಂದ ಹತ್ತನೇ ತರಗತಿ ವರೆಗಿನ ಪ್ರತಿ ವಿದ್ಯಾರ್ಥಿಗೆ 11.5 ಕೆ.ಜಿ. ಅಕ್ಕಿ ಹಾಗೂ 558 ರೂ. ಮೌಲ್ಯದ ಬೇಳೆ ಪದಾರ್ಥ ಹಾಗೂ ಹಾಲಿನ ಪುಡಿ ಸಿಗಲಿದೆ.

ಕೋವಿಡ್ ಸೊಂಕಿನ ಹಿನ್ನೆಲೆ ಶಾಲೆಗಳು ನಡೆಯದೆ ಇರುವುದ ರಿಂದ ಶಾಲೆಗಳಿಗೆ ಬಿಸಿಯೂಟ ಪಡಿತರ ನೀಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಆದರೆ ಮಕ್ಕಳಲ್ಲಿ ಪೂರಕ ಪೌಷ್ಟಿಕಾಂಶದ ಕೊರತೆ ಉಂಟಾಗ ಬಾರದು ಎಂಬ ಕಾರಣಕ್ಕಾಗಿ ಜೂನ್‌ನಿಂದ ಆಗಸ್ಟ್‌ವರೆಗಿನ ಮಧ್ಯಾಹ್ನದ ಬಿಸಿಯೂಟದಪಡಿತರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಿ.ಲಿಂಗರಾಜಯ್ಯ, ಶಿಕ್ಷಣಾಧಿಕಾರಿ ಬಿಸಿಯೂಟ ಕಾರ್ಯಕ್ರಮ

ಸತೀಶ್‌ ದೇಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಂಡಿಎಚ್ ಮಸಾಲ ಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

ಎಂಡಿಎಚ್ ಮಸಾಲ ಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ

ವರ್ತೂರು ಪ್ರಕಾಶ್‌ ಅಪಹರಣದಲ್ಲಿ ಖಾಸಗಿ ಹೈಡ್ರಾಮಾ; ಮಹಿಳೆ ವಿಚಾರಕ್ಕೆ ನಡೆಯಿತಾ ಕಿಡ್ನಾಪ್?

ವರ್ತೂರು ಪ್ರಕಾಶ್‌ ಅಪಹರಣದಲ್ಲಿ ಖಾಸಗಿ ಹೈಡ್ರಾಮಾ; ಮಹಿಳೆ ವಿಚಾರಕ್ಕೆ ನಡೆಯಿತಾ ಕಿಡ್ನಾಪ್?

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

ದೇಶೀಯ ಕ್ರಿಕೆಟ್‌ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?

ದೇಶೀಯ ಕ್ರಿಕೆಟ್‌ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?

ಹಳ್ಳಿ ಹಸನಾಗಲಿ: ಗ್ರಾಮ ಕಟ್ಟುವ ಕೆಲಸದಲ್ಲಿ ಯುವ ಜನರು ಕೈಜೋಡಿಸಬೇಕು

ಹಳ್ಳಿ ಹಸನಾಗಲಿ: ಗ್ರಾಮ ಕಟ್ಟುವ ಕೆಲಸದಲ್ಲಿ ಯುವ ಜನರು ಕೈಜೋಡಿಸಬೇಕು

ಚಳಿ ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?

ಚಳಿ, ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಲವ್ ಜಿಹಾದ್ ಗಿಂತ ಮುಖ್ಯವಾದ ಹಲವು ಸಮಸ್ಯೆಗಳಿವೆ ಸರಕಾರ ಅದನ್ನು ಬಗೆಹರಿಸಲಿ :HDK

ರಾಜ್ಯದಲ್ಲಿ ಲವ್ ಜಿಹಾದಿಗಿಂತ ಮುಖ್ಯವಾದ ಹಲವು ಸಮಸ್ಯೆಗಳಿವೆ ಸರಕಾರ ಅದನ್ನು ಬಗೆಹರಿಸಲಿ :HDK

ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಪುಟ್ಟಣ್ಣ ಬಿಡುತ್ತಿರಲಿಲ್ಲ

ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಪುಟ್ಟಣ್ಣ ಬಿಡುತ್ತಿರಲಿಲ್ಲ

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು

ಜನಸ್ಪಂದನದಲ್ಲಿ ಸಿಕ್ಕಿದ್ದು ಭರವಸೆ, ನಿರಾಸೆ ಮಾತ್ರ

ಜನಸ್ಪಂದನದಲ್ಲಿ ಸಿಕ್ಕಿದ್ದು ಭರವಸೆ, ನಿರಾಸೆ ಮಾತ್ರ

mangalore

ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ

MUST WATCH

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

udayavani youtube

ಮಂಗಳೂರು ಬೋಟ್ ದುರಂತ: ನಾಲ್ವರು ಪತ್ತೆಯಾಗುವವರೆಗೂ ಮೀನುಗಾರಿಕಾ ಬಂದರು ಬಂದ್ ಮಾಡಿ ಮುಷ್ಕರ

ಹೊಸ ಸೇರ್ಪಡೆ

ಎಂಡಿಎಚ್ ಮಸಾಲ ಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

ಎಂಡಿಎಚ್ ಮಸಾಲ ಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ

ವರ್ತೂರು ಪ್ರಕಾಶ್‌ ಅಪಹರಣದಲ್ಲಿ ಖಾಸಗಿ ಹೈಡ್ರಾಮಾ; ಮಹಿಳೆ ವಿಚಾರಕ್ಕೆ ನಡೆಯಿತಾ ಕಿಡ್ನಾಪ್?

ವರ್ತೂರು ಪ್ರಕಾಶ್‌ ಅಪಹರಣದಲ್ಲಿ ಖಾಸಗಿ ಹೈಡ್ರಾಮಾ; ಮಹಿಳೆ ವಿಚಾರಕ್ಕೆ ನಡೆಯಿತಾ ಕಿಡ್ನಾಪ್?

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

ದೇಶೀಯ ಕ್ರಿಕೆಟ್‌ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?

ದೇಶೀಯ ಕ್ರಿಕೆಟ್‌ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.