ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ
Team Udayavani, Jun 27, 2022, 10:51 PM IST
ಹುಣಸೂರು : ಟೆಂಪೋ ಟ್ರಾವೆಲರ್ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿ ಒರ್ವ ಸಾವನ್ನಪ್ಪಿದ್ದರೆ. ನಾಲ್ವರಿಗೆ ಗಾಯವಾಗಿರುವ ಘಟನೆ ಹೆದ್ದಾರಿಯ ಮಲ್ಲಿನಾಥಪುರದ ಬಳಿ ನಡೆದಿದೆ.
ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಲೈಬ್ರರಿಯನ್ ನಾಗಯ್ಯ(46) ಮೃತ ದುರ್ದೈವಿ. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಅಪಘಾತದಲ್ಲಿ ತಟ್ಟೆಕೆರೆ ಗ್ರಾಮದ ಮಂಗಳಮ್ಮ, ಧರ್ಮಪುರದ ಕೆಂಡಗಣ್ಣಮ್ಮ, ಮಂಟಿಕೊಪ್ಪಲಿನ ಜಯಮ್ಮ, ಅರಸು ಕಲ್ಲಹಳ್ಳಿಯ ಶೇಖರ್ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲರೂ ಮಂಡ್ಯದಲ್ಲಿ ನಡೆದಿದ್ದ ಸಮಾವೇಶಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು.
ಮಲ್ಲಿನಾಥಪುರದ ಬಳಿ ರಾತ್ರಿ 9 ರ ವೇಳೆ ಮೈಸೂರಿನಿಂದ ಹುಣಸೂರು ಕಡೆ ಹೋಗುತ್ತಿದ್ದ ಟಿಟಿ( ಟೆಂಪೋ ಟ್ರಾವೆಲರ್) ಹಾಗೂ ಹುಣಸೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು. ತೀವ್ರಗಾಯಗೊಂಡ ನಾಗಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ನಾಲ್ವರು ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಇದನ್ನೂ ಓದಿ : ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್ ಆಕ್ಷೇಪ
ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿದ್ದು ಬಿಳಿಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಸಹಕಾರದಿಂದ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಶವವನ್ನು ಬಿಳಿಕೆರೆ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರ್ಸಿಂಗ್ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್
ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್ ಗುಂಡೂರಾವ್
ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗದು
ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ
ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್