ಹುಣಸೂರು : ಭಾರಿ ಮಳೆಗೆ ಅಬ್ಬೂರಿನಲ್ಲಿ 6 ಮನೆಗೆ ಹಾನಿ
Team Udayavani, Jul 21, 2022, 8:52 PM IST
ಹುಣಸೂರು : ಕಳೆದ 15 ದಿನಗಳಿಂದ ಬೀಳುತ್ತಿರುವ ಅಪಾರ ಮಳೆಯಿಂದಾಗಿ ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮವೊಂದರಲ್ಲೇ ಆರು ಮನೆಗಳ ಗೋಡೆ ಬಿದ್ದು ಹೋಗಿದ್ದು, ಮನೆಗಳವರನ್ನು ಅತಂತ್ರ ಮಾಡಿದೆ.
ಅಬ್ಬೂರಿನ ಮಂಗಳಮ್ಮ, ಪಾರ್ವತಮ್ಮ, ಗೌರಮ್ಮ, ರಾಜೇಗೌಡ, ಮಾದೇಗೌಡ, ಸುಶೀಲಮ್ಮರವರಿಗೆ ಸೇರಿದ ಮನೆಗಳು ಬಿದ್ದು ಹೋಗಿದ್ದು, ಮನೆಯ ಗೋಡೆಗಳು ಮಣ್ಣಿನಿಂದ ಕೂಡಿದವುಗಳಾಗಿದ್ದು, ವಾಸಸಿಸಲು ಯೋಗ್ಯವಿಲ್ಲದಂತಾಗಿದ್ದು, ಸಂಕಷ್ಟಕೊಳಗಾಗಿರುವ ಕುಟುಂಬಗಳಿಗೆ ಹೊಸ ಮನೆ ಮಂಜೂರು ಮಾಡಬೇಕೆಂದು ಗ್ರಾ.ಪಂ.ಸದಸ್ಯ ಕುಮಾರ್ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಪ್ರಶಾಂತರಾಜೇ ಅರಸ್, ಗ್ರಾಮಲೆಕ್ಕಿಗ ಸುಮಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.