ಹುಣಸೂರು ನಗರಸಭೆ: ಕಾಂಗ್ರೆಸ್ ಪಾಲಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ
Team Udayavani, Oct 31, 2020, 2:32 PM IST
ಹುಣಸೂರು: ನಗರಸಭೆಯ ವರಿಷ್ಠ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಅನುಷಾ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ದೇವನಾಯ್ಕ ಚುನಾಯಿತರಾದರು.
ಕಾಂಗ್ರೆಸ್ ನ ಅನುಷಾ ಮತ್ತು ದೇವನಾಯ್ಕ ತಲಾ 20 ಮತ ಪಡೆದು ಜಯ ಸಾಧಿಸಿದರು. ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಹೀನಾಬಾನು ಹಾಗೂ ಉಪಾಧ್ಯಕ್ಷ ಸ್ಥಾನದ ಪಕ್ಷೇತರ ಸದಸ್ಯೆ ಆಶಾರಾಣಿ ತಲಾ 11 ಮತ ಪಡೆದು ಸೋಲು ಅನುಭವಿಸಿದರು.
ಇದನ್ನೂ ಓದಿ:ತೊನಸಿಹಾಳ-ಮೆಣಸಗೇರಿ ಆದರ್ಶ ಗ್ರಾಮಕ್ಕೆ ಆಯ್ಕೆ
ಶಾಸಕ ಮಂಜುನಾಥ್ ಚುನಾವಣೆಯಲ್ಲಿ ಭಾಗವಹಿಸಿದ್ದರೆ, ಸಂಸದ ಪ್ರತಾಪ ಸಿಂಹ, ಎಂ.ಎಲ್.ಸಿ. ವಿಶ್ವನಾಥ್ ಹಾಗೂ ಬಿಜೆಪಿ ಸದಸ್ಯ ವಿವೇಕ್ ಗೈರಾಗಿದ್ದರು. ಉಪ ವಿಭಾಗಾಧಿಕಾರಿ ವೀಣಾ ಚುನಾವಣಾಧಿಕಾರಿಯಾಗಿದ್ದರು.