Udayavni Special

ಸಂಪನ್ಮೂಲ ಸಂಗ್ರಹಿಸಿ, ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವೆ: ಅಧ್ಯಕ್ಷೆ ಅನುಷಾ

ಹುಣಸೂರು ನಗರಸಭೆ ನೂತನ ಅಧ್ಯಕ್ಷೆಯ ಮನದಾಳ

Team Udayavani, Nov 7, 2020, 2:33 PM IST

ಸಂಪನ್ಮೂಲ ಸಂಗ್ರಹಿಸಿ, ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವೆ: ಅಧ್ಯಕ್ಷೆ ಅನುಷಾ

ಹುಣಸೂರು: ಹುಣಸೂರು ನಗರಸಭೆಯಾದ ನಂತರ ಪ್ರಥಮ ಬಾರಿಗೆ ಶಾಸಕ ಎಚ್‌.ಪಿ. ಮಂಜುನಾಥ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದೆ. 3ನೇ ವಾರ್ಡ್‌ನ ಸದಸ್ಯೆ ಅನುಷಾ ರಘು ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆದು 9 ತಿಂಗಳು ಬಳಿಕ ಸದಸ್ಯರಿಗೆ ಅಧಿಕಾರ ದೊರೆತಿದೆ. ನಗರ ಅಭಿವೃದ್ಧಿ, ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು, ತಮ್ಮಕಾರ್ಯವೈಖರಿ ಕುರಿತು ಅನುಷಾ “ಉದಯವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಗರ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು? :

-ನಗರದಲ್ಲಿ ಶೀಘ್ರವೇ ಕಂದಾಯ ಅದಾಲತ್‌ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕರಿಂದತೆ ರಿಗೆ ಹಣ ಕ್ರೋಢೀಕರಿಸಿಕೊಂಡು ವ್ಯವಸ್ಥಿತ ವಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುವೆ.ಮಾದರಿ ನಗರವನ್ನಾಗಿಸಲು ಶ್ರಮಿಸುವೆ.

ಹಿರಿಯ ಸದಸ್ಯರಿದ್ದರೂ ನಿಮ್ಮನ್ನೇ ಆಯ್ಕೆ ಮಾಡಲುಕಾರಣವೇನು? :

-ಹಲವು ಆಕಾಂಕ್ಷಿಗಳು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದು, ತಮಗೆ ಸಹಕಾರ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಆಶೀರ್ವಾದದಿಂದ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವೆ.

ನಗರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆಯಲ್ಲಾ? :

-ನಿಜ, ಕಳೆದ ಒಂದೂವರೆ ವರ್ಷದಿಂದ ನಗರ ಸಭೆಗೆ ಕಾಯಂ ಪೌರಾಯುಕ್ತರಿಲ್ಲ. ಜೊತೆಗೆ 9 ತಿಂಗಳಿನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದರೂ ಅಧ್ಯಕ್ಷರ ಆಯ್ಕೆ ನಡೆಯದೇ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಇದೀಗ ತಾವು ಆಯ್ಕೆಯಾಗಿದ್ದು, ಈಗಾಗಲೇ ಶಾಸಕ ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹಾಗೂ ಸಂಸದರಿಗೂ ಕಾಯಂ ಪೌರಾಯುಕ್ತರ ನೇಮಕಕ್ಕೆ ಮನವಿ ಮಾಡಲಾಗಿದೆ. ಶೀಘ್ರ ನಗರಾಭಿವೃದ್ಧಿ ಸಚಿವರ ಬಳಿ ಎಲ್ಲಾ ಸದಸ್ಯರ ನಿಯೋಗ ತೆರಳಿ ಕಾಯಂ ಪೌರಾಯುಕ್ತರ ನೇಮ ಕಕ್ಕೆ ಕ್ರಮವಹಿಸಿ, ನನೆಗುದಿಗೆ ಬಿದ್ದಿರುವ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಶ್ರಮಿಸುವೆ.

ವಾರ್ಡ್‌ಗಳಿಗೆ ಮೂಲಭೂತ ಸೌಕರ್ಯಕ್ಕೆ ಯಾವ ಕ್ರಮ ವಹಿಸುವಿರಿ? :

-ನಗರದ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಅನುದಾನದ ಕೊರತೆ ಇದೆ. ಶೀಘ್ರ ಅಧಿಕಾರಿ ಗಳೊಂದಿಗೆ ವಾರ್ಡ್‌ಗಳಿಗೆ ತೆರಳಿ ಕಂದಾಯ ಅದಾಲತ್‌ ನಡೆಸಿ ತೆರಿಗೆಯಿಂದ ಬರುವ ಹಣ ಹಾಗೂ ಬಾಕಿ ಉಳಿದಿರುವ ನಗರೋತ್ಥಾನ ಅನುದಾನ ಜೊತೆಗೆ ಸರ್ಕಾರದ ವಿವಿಧ ಯೋಜನೆ ಗಳ ಅನುದಾನಕ್ಕೆ ಮೂವರು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸುವೆ. ನಗರದ ಬಹುತೇಕ ವಾರ್ಡ್‌ ಅಕ್ರಮವೆಂಬ ಹಣೆಪಟ್ಟಿ ಇದೆ. ಸಕ್ರಮ ಖಾತೆ ಮಾಡಿದರೆ ತೆರಿಗೆ ಹೆಚ್ಚಳವಾಗಲಿದೆ ಇದನ್ನು ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತರಲಾಗುವುದು.

ನಿಮ್ಮ ವಾರ್ಡ್‌ನ ಮತದಾರರಿಗೆ ಕೊಡುಗೆ ಏನು? :

-ನನ್ನ ಪತಿ ರಾಘು ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದನ್ನು ವರಿಷ್ಠರು ಗುರುತಿಸಿ ಟಿಕೆಟ್‌ ನೀಡಿದ್ದಲ್ಲದೆ, ಮತದಾರರು ಕೂಡ ಕೈ ಹಿಡಿದಿದ್ದಾರೆ. ವಾರ್ಡ್‌ನಲ್ಲಿ ಕುಡಿವ ನೀರಿನಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇನೆ. ಇದನ್ನು ಪರಿಹರಿಸಲು ಗಮನ ಹರಿಸುವೆ.

ಪರಿಸರ, ಸ್ವಚ್ಛತೆ, ನಗರ ಸೌಂದಯಕ್ಕೆಕ್ರಮ ಏನು? :

-ನಾನು ಈ ನಗರಕ್ಕೆ ಹೊಸಬಳೇನೂ ಅಲ್ಲ. ಇಲ್ಲಿನ ಸೊಸೆ ಜೊತೆಗೆ ಮಗಳು ಸಹ.ನಗರದ ಮಧ್ಯ ಭಾಗದಲ್ಲಿ ಹರಿಯುವ ಜೀವನದಿ ಲಕ್ಷ್ಮಣ ತೀರ್ಥಕ್ಕೆ ಸೇರುವ ಒಳಚರಂಡಿ ನೀರಿನ ದುರ್ವಾಸನೆ, ನದಿಯ ಅವಸ್ಥೆಯನ್ನು ಕಂಡು ಬೇಸತ್ತಿದ್ದೇನೆ. ಇದಕ್ಕೊಂದು ಕಾಯಕಲ್ಪ ನೀಡಲು ಶಾಸಕ, ಸಂಸದ, ಎಂಎಲ್‌ಸಿ ಸಾಧ್ಯವಾದಲ್ಲಿ ಮುಖ್ಯಮಂತ್ರಿಗಳ ಬಳಿಗೆ ಅಧಿಕಾರಿ – ಜನಪ್ರತಿ ನಿಧಿಗಳ ನಿಯೋಗ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಚಿಂತಿಸಿದ್ದೇನೆ.

ಮಹಿಳಾ ಸದಸ್ಯರ ಪತಿಯರೇ ಅಧಿಕಾರ ನಡೆಸುತ್ತಾರೆಂಬ ಅಪವಾದ ಇದೆಯಲ್ಲಾ? :

ನಾನು ಅಧಿಕಾರಕ್ಕೆ ಹೊಸಬಳಿರಬಹುದು. ಆದರೆ ನಾನು ಪದವಿವರೆಗೆ ವ್ಯಾಸಂಗ ಮಾಡಿದ್ದೇನೆ. ಕಾನೂನು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಅಪವಾದದ ಹೊರತಾಗಿ ಆಡಳಿತ ನಡೆಸುತ್ತೇನೆ. ಯಾರ ಪ್ರಭಾವ, ಹಸ್ತಕ್ಷೇಪಕ್ಕೂ ಅವಕಾಶ ನೀಡುವುದಿಲ್ಲ. ಪಾರದರ್ಶಕ ಆಡಳಿತ ನೀಡುವೆ. ಅಧಿಕಾರಿಗಳು ಹಾಗೂಸದಸ್ಯರನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವೆ.

 

 

 ಸಂಪತ್‌ ಕುಮಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ

ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ

17 ಜನ ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ, ಅವರ ಬಗ್ಗೆ ಗೌರವವಿದೆ: ಸವದಿ

17 ಜನ ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ, ಅವರ ಬಗ್ಗೆ ಗೌರವವಿದೆ: ಸವದಿ

ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಹಾರಾಟ: ಗುಂಡಿನ ದಾಳಿ ನಂತರ ಪಾಕ್ ಗೆ ಮರಳಿದ ಡ್ರೋನ್

ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಹಾರಾಟ: ಗುಂಡಿನ ದಾಳಿ ನಂತರ ಪಾಕ್ ಗೆ ಮರಳಿದ ಡ್ರೋನ್

ಸಂಪುಟ ವಿಸ್ತರಣೆಗಾಗಿ ಇಂದು ದೆಹಲಿಯವರ ಜತೆ ಮಾತುಕತೆ: ಸಿಎಂ ಯಡಿಯೂರಪ್ಪ

ಸಂಪುಟ ವಿಸ್ತರಣೆಗಾಗಿ ಇಂದು ದೆಹಲಿಯವರ ಜತೆ ಮಾತುಕತೆ: ಸಿಎಂ ಯಡಿಯೂರಪ್ಪ

ಜಲ ಮಂಡಳಿಯ ಎಡವಟ್ಟು: ಮನೆ ಮೇಲೆ ಮುರಿದು ಬಿದ್ದ ಮರ

ಜಲ ಮಂಡಳಿಯ ಎಡವಟ್ಟು: ಮನೆ ಮೇಲೆ ಮುರಿದು ಬಿದ್ದ ಮರ

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ :

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mysuru-tdy-2

ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್‌ ಶಿಬಿರಕ್ಕೆ ಚಾಲನೆ

ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

ಸಿಂಧೂರಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

ಮೈಸೂರು ಡಿ.ಸಿ. ರೋಹಿಣಿ ವಿರುದ್ಧ ಶಾಸಕರ ಆಕ್ರೋಶ

ಮೈಸೂರು ಡಿ.ಸಿ. ರೋಹಿಣಿ ವಿರುದ್ಧ ಶಾಸಕರ ಆಕ್ರೋಶ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

ಚಾ.ನಗರ ಜಿಲ್ಲಾ ಕಸಾಪ ನೂತನ ಕಚೇರಿ ಹಸ್ತಾಂತರ

ಚಾ.ನಗರ ಜಿಲ್ಲಾ ಕಸಾಪ ನೂತನ ಕಚೇರಿ ಹಸ್ತಾಂತರ

ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ

ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ

17 ಜನ ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ, ಅವರ ಬಗ್ಗೆ ಗೌರವವಿದೆ: ಸವದಿ

17 ಜನ ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ, ಅವರ ಬಗ್ಗೆ ಗೌರವವಿದೆ: ಸವದಿ

ಪಾತಾಳಕ್ಕಿಳಿದ ತರಕಾರಿ ಬೆಲೆ: ರೈತರಿಗೆ ನಿರಾಸೆ

ಪಾತಾಳಕ್ಕಿಳಿದ ತರಕಾರಿ ಬೆಲೆ: ರೈತರಿಗೆ ನಿರಾಸೆ

ಸಮಸ್ಯೆ ಬಗೆಹರಿಸದೆ ಕಾಲ ಕಳೆಯುತ್ತಿರುವ ಬಿಜೆಪಿ: ಆರೋಪ

ಸಮಸ್ಯೆ ಬಗೆಹರಿಸದೆ ಕಾಲ ಕಳೆಯುತ್ತಿರುವ ಬಿಜೆಪಿ: ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.