ಹುಣಸೂರು: ದೊಡ್ಡಹೆಜ್ಜೂರಲ್ಲಿ ಆಂಜನೇಯಸ್ವಾಮಿ ಪುನರ್ ಪ್ರತಿಷ್ಟಾಪನೆ

ಧಾರ್ಮಿಕ ಕಾರ್ಯದಲ್ಲಿ ಐದು ಸಾವಿರ ಮಂದಿ ಭಾಗಿ

Team Udayavani, Jan 28, 2023, 9:00 AM IST

3-hunsur

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಶ್ರೀಆಂಜನೇಯಸ್ವಾಮಿ ದೇವಾಲಯದ ಪ್ರಾಣಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಪ್ರಾರಂಭೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಸುಮಾರು 700 ವರ್ಷಗಳ ಇತಿಹಾಸವಿರುವ ದೊಡ್ಡಹೆಜ್ಜೂರಿನ ಶ್ರೀ ಆಂಜನೇಯಸ್ವಾಮಿಯ ಪುರಾತನ ದೇವಾಲಯವನ್ನು ಸುಮಾರು ಒಂದು ಕೋಟಿಗೂ ಹೆಚ್ಚು ವೆಚ್ಚದಡಿ ನಿರ್ಮಿಸಿರುವ ದೇವಸ್ಥಾನದ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಶುಕ್ರವಾರ ಮುಂಜಾನೆಯಿಂದಲೇ ಆದಿಚುಂಚನಗಿರಿ ಶಾಖಾಮಠದ ಸೋಮನಾಥ ಸ್ವಾಮಿಜಿ ಹಾಗೂ ಗಾವಡಗೆರೆಯ ನಟರಾಜ ಸ್ವಾಮಿಜಿಗಳ ಸಾನಿಧ್ಯದಲ್ಲಿ ದೇವಾಲಯದ ಆವರಣದಲ್ಲಿನ ನವಗ್ರಹ, ಅರಳಿಕಟ್ಟೆ, ಗರುಡಗಂಭ ಹಾಗೂ ದೇವಾಲಯದ ಗೋಪುರ ಉದ್ಘಾಟನೆ ನಡೆಯಿತು. ಶಾಸಕ ಜಿ.ಟಿ. ದೇವೇಗೌಡರು ಮಂಜಾನೆಯೇ ಭೇಟಿಯಾಗಿ ದೇವರ ದರ್ಶನ ಪಡೆದರು.

ನಂತರ ದೇವಾಲಯದ ಜಾತ್ರಾ ಮಾಳದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸುತ್ತಮುತ್ತಲ 16 ಹಳ್ಳಿಗರು ಸೇರಿ ಐತಿಹ್ಯವುಳ್ಳ ಈ ದೇವಾಲಯವನ್ನು ಸುಂದರವಾಗಿ ನಿರ್ಮಿಸಿಕೊಂಡಿದ್ದು,  ಅರಣ್ಯದಂಚಿನಲ್ಲಿರುವ ಈ ದೇವಾಲಯಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂದವಿದ್ದು, ನಮ್ಮೆಲ್ಲಾ ಶುಭಕಾರ್ಯಗಳು ಇಲ್ಲಿಂದಲೇ ಆರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಆದಿಚುಂಚನಗಿರಿ ಮೈಸೂರು ಶಾಖಮಠದ ಶ್ರೀ ಸೋಮನಾಥ ಸ್ವಾಮಿಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮಿಜಿ ಆರ್ಶೀವಚನ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ಶೇಖರೇ ಗೌಡ, ಗ್ರಾ.ಪಂ.ಅಧ್ಯಕ್ಷ ಸುಭಾಷ್, ಗ್ರಾ.ಪಂ. ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಮುಖಂಡ ರವಿ ಮಾತನಾಡಿದರು.

ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ, ನಟರಾಜ್, ನಾಗೇಶ್, ರಾಮಕೃಷ್ಣೇ ಗೌಡ, ಮಹದೇವಣ್ಣ, ಮಾದೇಗೌಡ, ದೊಡ್ಡಹೆಜ್ಜೂರು ಸೊಸೈಟಿ ಅಧ್ಯಕ್ಷ ಚಂದ್ರಶೇಖರ್, ಹನಗೋಡು ಸೊಸೈಟಿ ಅಧ್ಯಕ್ಷ ಹನುಮ, ಯ.ರಾಮೇಗೌಡ, ಯ.ನಂಜಯ್ಯ, ಉದ್ಯಮಿ ಅನಿಲ್, ಬನ್ನಿಕುಪ್ಪೆ ಕೂಸಪ್ಪ ಸೇರಿದಂತೆ ಅನೇಕರಿದ್ದರು. ಐದು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು.

ಶಾಸಕ ಮಂಜುನಾಥ್ ಸಂಜೆ ಭೇಟಿ: ಶುಕ್ರವಾರ ಸಂಜೆ ದೊಡ್ಡಹೆಜ್ಜೂರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ ಶಾಸಕ ಎಚ್.ಪಿ. ಮಂಜುನಾಥರನ್ನು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಅದ್ದೂರಿಯಿಂದ ಬರಮಾಡಿಕೊಂಡರು.

ಶಾಸಕರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಆಂಜನೇಯನ ಭಕ್ತನಾಗಿದ್ದು, ಈ ಸುಂದರ ದೇವಾಲಯ ತಾಲೂಕಿನ ಕೀರ್ತಿ, ವೈಭವವನ್ನು ಹೆಚ್ಚಿಸಿದೆ. ನಮ್ಮ ಕುಟುಂಬ ಸಹ ದೇವಾಲಯ ನಿರ್ಮಾಣಕ್ಕೆ ನೆರವು ನೀಡಿದೆ ಎಂದ ಅವರು, ಈ ದೇವಸ್ಥಾನ ಪುನರ್ ನಿರ್ಮಾಣಕ್ಕೆ ನೆರವಾದ ಎಲ್ಲ ದಾನಿಗಳನ್ನು ಅಭಿನಂದಿಸಿದರು.

ಈ ವೇಳೆ ಮುಖಂಡರಾದ ಕಸ್ತೂರಿ ಗೌಡ, ಗಣೇಶ್, ಶಿವಕುಮಾರ್, ರಾಜುಶಿವರಾಜೇ ಗೌಡ, ಬಸವಣ್ಣ, ಸಾವರ್, ಮಂಜು, ವಿಜಯ್, ಹರೀಶ್, ಗೌರಮ್ಮ ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

Bomb Blast

ರಾಮ ನವಮಿ ಘರ್ಷಣೆಯ ನಂತರ ಬಿಹಾರ ಬಾಂಬ್ ಸ್ಫೋಟ: ಐವರಿಗೆ ಗಾಯ

ರೈಲು ಗಾಡಿಗೆ ಅಡ್ಡ ಬಂದ ಪಾದಾಚಾರಿ: ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

ರೈಲು ಗಾಡಿಗೆ ಅಡ್ಡ ಬಂದ ಪಾದಾಚಾರಿ: ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್‌ ಚಾಟ್‌’ ಫೀಚರ್‌

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್‌ ಚಾಟ್‌’ ಫೀಚರ್‌

ಗೂಗಲ್‌ ಉದ್ಯೋಗಿಗಳ ಸವಲತ್ತುಗಳಿಗೆ ಕತ್ತರಿ

ಗೂಗಲ್‌ ಉದ್ಯೋಗಿಗಳ ಸವಲತ್ತುಗಳಿಗೆ ಕತ್ತರಿ

ಮರುಮದುವೆ ಪರಿಹಾರ ನಿರಾಕರಣೆಗೆ ಕಾರಣವಲ್ಲ: ಬಾಂಬೆ ಹೈಕೋರ್ಟ್‌

ಮರುಮದುವೆ ಪರಿಹಾರ ನಿರಾಕರಣೆಗೆ ಕಾರಣವಲ್ಲ: ಬಾಂಬೆ ಹೈಕೋರ್ಟ್‌

ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?

ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈಭವದಿಂದ ನೆರವೇರಿದ ವಿಶ್ವ ವಿಖ್ಯಾತ ಮೇಲುಕೋಟೆ ಚಲುವನಾಯಣಸ್ವಾಮಿ ವೈರಮುಡಿ ಉತ್ಸವ

ವೈಭವದಿಂದ ನೆರವೇರಿದ ವಿಶ್ವ ವಿಖ್ಯಾತ ಮೇಲುಕೋಟೆ ಚಲುವನಾಯಣಸ್ವಾಮಿ ವೈರಮುಡಿ ಉತ್ಸವ

tdy-9

ಬೇಸಿಗೆ ಬಿಸಿಲ ತಾಪಕ್ಕೆ ಬರಿದಾಗುತ್ತಿದೆ ಕಬಿನಿ ಜಲಾಶಯದ ಒಡಲು

3-hunsur

ಹುಣಸೂರು: 50ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

2–hunsur

ಚೆಕ್ ಪೋಸ್ಟ್, ಕಂಟ್ರೋಲ್ ರೂಂ ಸಿಬ್ಬಂದಿಗಳ ಕಾರ್ಯ ವೈಖರಿ ಪರಿಶೀಲಿಸಿದ ಡಿ.ಸಿ. ಡಾ.ರಾಜೇಂದ್ರ

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ