ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !
Team Udayavani, May 25, 2022, 8:58 AM IST
ಹುಣಸೂರು ; ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಂದೆ ಮಗನಿಗೆ ತಾಕೀತು ಮಾಡಿದ್ದರು. ಕೋಪಗೊಂಡ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದು, ಪೆಟ್ಟುತಾಳಲಾರದೆ ತಂದೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಮೇ.24 ರಂದು ನಡೆದಿದೆ.
ಮದ್ಯದ ಅಮಲಿನಲ್ಲಿ ಜನ್ಮ ನೀಡಿದ ಅಪ್ಪನನ್ನೆ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆಯಲ್ಲಿ ನಡೆದಿದೆ. ಗ್ರಾಮದ ದಿ.ದೊಡ್ಡಚನ್ನಯ್ಯರ ಪುತ್ರ ಸಣ್ಣಯ್ಯ(70)ಕೊಲೆಯಾದಾತ, ಈತನ ಪುತ್ರ ಮಹದೇವನೇ ಕೊಲೆ ಆರೋಪಿ.
ಮಹದೇವ ನಿತ್ಯ ಕುಡಿದು ಬಂದು ತಂದೆ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುವುದನ್ನು ಪರಿಪಾಠವಾಗಿಸಿಕೊಂಡಿದ್ದ, ಮೇ.20ರ ಸಂಜೆ ಸಣ್ಣಯ್ಯನ ಮಗ ಮಹದೇವನ ಮನೆಗೆ ಬಂದಾಗ ಮಗಳ ಮದುವೆಯ ಸಾಲ ತೀರಿಸಿಲ್ಲಾ, ಹಣ ಕೊಡು, ಇಲ್ಲವೇ ಜಮೀನು ಬರೆದುಕೊಡು ಎಂದು ತಂದೆಯೊಂದಿಗೆ ಜಗಳ ತೆಗೆದಿದ್ದಾನೆ.
ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ, ಕೆಳಗೆ ಬಿದ್ದಿದ್ದ ತಂದೆಯನ್ನು ಮೊಮ್ಮಕ್ಕಳು ರೂಮಿನಲ್ಲಿ ಮಲಗಿಸಿದ್ದಾರೆ, ಹಲ್ಲೆಯಿಂದ ತೀವ್ರಗಾಯಗೊಂಡಿದ್ದ ಸಣ್ಣಯ್ಯ ಸಾವನ್ನಪ್ಪಿದ್ದಾರೆಂದು ಗ್ರಾಮಸ್ಥರು ನಂಜನಗೂಡಿನಲ್ಲಿರುವ ಮಗಳಿಗೆ ಮಾಹಿತಿ ನೀಡಿದ ಮೇರೆಗೆ ಮೃತ ಸಣ್ಣಯ್ಯನ ಪುತ್ರಿ ಗೌರಮ್ಮ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಪಿ.ಚೇತನ್, ಡಿವೈಎಸ್‌ಪಿ ರವಿಪ್ರಸಾದ್ ಭೇಟಿ ನೀಡಿದ್ದರು. ಇನ್ಸ್ಫೆಕ್ಟರ್ ಚಿಕ್ಕಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಣಸೂರು: ಚಿಲ್ಕುಂದದಲ್ಲಿ ಕೊಳೆರೋಗ, ಹುಳುಬಾಧೆ ಉಪಕ್ರಮಗಳ ಕುರಿತು ಪ್ರಾತ್ಯಕ್ಷಿಕೆ
ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಿಸದೆ ಸಾವು
ಆನೆ ದಂತ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ, ಪ್ರಮುಖ ಆರೋಪಿ ಎಸ್ಕೇಪ್
ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್
ಹುಣಸೂರು: ಮಹಿಳಾ ಕಾಲೇಜಿಗೆ ತುಳಸಿ ಜ್ಯುವೆಲ್ಲರ್ಸ್ನಿಂದ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ
MUST WATCH
ಹೊಸ ಸೇರ್ಪಡೆ
ಧಾರಾಕಾರ ಮಳೆ; ಬಂಟ್ವಾಳದಲ್ಲಿ ಅಪಾಯದ ಮಟ್ಟ ತಲುಪದ ನೇತ್ರಾವತಿ
ವಿಟ್ಲ: ಮಳೆ ಅಬ್ಬರ- ಹಲವು ಮನೆಗಳು ಜಲಾವೃತ-ಜನ ಜೀವನ ಅಸ್ತವ್ಯಸ್ತ
ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್ ಐಎ ತಂಡ
ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ
ಉದಯಪುರ ಮತ್ತೆ ಉದ್ವಿಗ್ನ: ಶಿರಚ್ಛೇದನ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ, ಕಲ್ಲುತೂರಾಟ