ಶಾಸಕರದ್ದು ಬಾಲಿಶತನದ ಹೇಳಿಕೆ: ಕಳಲೆ ಕೇಶವಮೂರ್ತಿ


Team Udayavani, Oct 23, 2020, 4:38 PM IST

mysuru-tdy-1

ನಂಜನಗೂಡು: ಜುಬಿಲಿಯಂಟ್ಸ್‌ ಕಿಟ್‌ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು ನಿಜ ಎಂದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸಂಸದ ಪ್ರತಾಪ ಸಿಂಹ ನಿಜವನ್ನೇ ಹೇಳಿದ್ದಾರೆ. ಆ ಸತ್ಯಕ್ಕೆ ಸ್ಥಳೀಯ ಶಾಸಕರ ಉತ್ತರ ಮಾತ್ರ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

ಗುರುವಾರ ನಂಜನಗೂಡಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.2 ತಿಂಗಳ ಹಿಂದೆಯೇ ಮಾಜಿ ಲೋಕಸಭಾ ಸದಸ್ಯ ಆರ್‌.ಧ್ರುವನಾರಾಯಣ ಹಾಗೂ ತಾವು ಈ ಆಹಾರದ ಕಿಟ್‌ ಹಂಚಿಕೆಯಲ್ಲಿ ಭಾರೀ ಗೋಲ್‌ ಮಾಲ್‌ ನಡೆದಿದ್ದು ತನಿಖೆಯಾಬೇಕುಎಂದು ಹೇಳಿದ್ದನ್ನು ಮೆಲುಕು ಹಾಕಿದ ಅವರು, ನಾವು ಹೇಳಿದ್ದ ಸತ್ಯವನ್ನೇ ಈಗ ಬಿಜೆಪಿ ಸಂಸದ ಪ್ರತಾಪಸಿಂಹ್‌ ಪುಷ್ಟೀಕರಿಸಿದ್ದಾರೆಂದರು. ಅರ್ಥವಾಗಿಲ್ಲ:ಜುಬಿಲಿಯಂಟ್ಸ್‌ ಕಾರ್ಖಾನೆ ನಂಜನಗೂಡಿನ ಲ್ಲಿದ್ದ ಮಾತ್ರಕ್ಕೆ ಅದು ನಂಜನಗೂಡಿಗೆ ಸೀಮಿತ ವಲ್ಲ. ಅದು ವಿಶ್ವಮಟ್ಟದ ಔಷಧಿಕಾರ್ಖಾನೆ ಎಂಬುದನ್ನು ಮೊದಲು ಶಾಸಕರು ಅರಿಯಲಿ. ಕಾರ್ಖಾನೆ ನೌಕರರು ಹಬ್ಬಿಸಿದ ಸೋಂಕು ಕೇವಲ ನಂಜನಗೂಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ರಲಿಲ್ಲ. ಇದು ಇವರ ಬಾಲಿಶತನಕ್ಕೆ ಅರ್ಥ ವಾಗಬೇಕಲ್ಲ ಎಂದು ಕಟುಕಿದರು.

ಹಿಂಬಾಲಕರಿಗೆ:ಶಾಸಕರೇ ಒಪ್ಪಿಕೊಂಡ ಹಾಗೆಯೇ ಜುಬಿಲಿ ಯಂಟ್ಸ್‌ ನೀಡಿದ 50 ಸಾವಿರ ಆಹಾರದ ಕಿಟ್‌ ಹಂಚಿಕೆಯಾಗಿದ್ದು ನಿಜ. ಆದರೆ ಸಾರ್ವಜನಿಕರಿ ಗಲ್ಲ, ಬಡವರಿಗೂ ಅಲ್ಲ. ಶಾಸಕರ ಹಿಂಬಾಲಿಕರಿಗೆ ಮಾತ್ರ ಹಂಚಿಕೆಯಾಗಿದ್ದು ಸತ್ಯ ಎಂದು ಟೀಕಿಸಿದರು.

ಭ್ರಷ್ಟಾಚಾರದ ವಿರುದ್ಧ ಸತ್ಯ ಹೇಳಿದರೆ ಕ್ಷೇತ್ರಕ್ಕೆ ಅಪಮಾನ ಎಂದರೆ ಕುಂಬಳ ಕಾಯಿ ಕಳ್ಳ ಎಂದರೆ ಮೈ ಪರಚಿಕೊಂಡ ಹಾಗೆ ಎಂದು ಕೇಶವಮೂರ್ತಿಹಾಲಿ ಶಾಸಕರ ಮಾತಿಗೆ ಕಿಡಿಕಾರಿದರು. ಅಪ್ರಾಮಾಣಿಕತೆಯ ವಿಷಯ ಬಂದಾಗ ತಾತ ಬಸವಲಿಂಗಪ್ಪ ಮಾವ ಶ್ರೀನಿವಾಸ್‌ ಪ್ರಸಾದರಕವಚ ಧರಿಸಲು ಹೊರಡುವ ಹರ್ಷವರ್ಧನ ಮೊದಲು ಕಿಟ್‌ ಅವ್ಯಹಾರದ ತನಿಖೆ ಮಾಡಿಸಲಿ. ಕ್ಷೇತ್ರದ ಎಷ್ಟು ಮನೆಗೆ ಇವರು ಪಡೆದಿರುವಜುಬಿಲಿಯಂಟ್ಸ್‌ ಕಿಟ್‌ ತಲುಪಿದೆ. ಹಿಂಬಾಲಕರಿಗೆಷ್ಟು ತಲುಪಿದೆ ಎಂಬ ಹೂರಣ ಹೊರಬರಲಿ ಎಂದು ಒತ್ತಾಯಿಸಿದರು.

ತನಿಖೆ ಮೊಟಕು:ಪ್ರಾಮಾಣಿಕ ಅಧಿಕಾರಿ ಹರ್ಷಗುಪ್ತರ ತನಿಖೆ ಸ್ಥಗಿತವಾಗಲು ಕಿಟ್‌ ಹಂಚಿಕೆ ಗೋಲ್‌ಮಾಲ್‌ ಅವ್ಯವಹಾರವೇಕಾರಣ. ತನಿಖೆ ಪೂರ್ಣವಾಗಿದ್ದರೆ ಇವರಹುಳುಕು ಬಯಲಾಗುತ್ತಿತ್ತು. ಅದಕ್ಕಾಗಿಯೇ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.ಪ್ರತಾಪ ಸಿಂಹ ಹೇಳಿದ್ದು ಅಕ್ಷರಶಃ ಸತ್ಯ. ಸತ್ಯ ಹೇಳಲು ಯಾವುದೇ ಕ್ಷೇತ್ರ ಪರಿಧಿ ಬೇಕೇ. ಶಾಸಕರು ಮೊದಲು ಬಾಲಿಶತನದ ಹೇಳಿಕೆ ನಿಲ್ಲಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಕಾಂಗ್ರೆಸ್‌ ನಗರಾಧ್ಯಕ್ಷ ಸಿ. ಎಂ.ಶಂಕರ್‌, ಗ್ರಾಮಾಂತರ ಅಧ್ಯಕ್ಷ ಮಹೇಶ ಕುರಹಟ್ಟಿ , ಹುಲ್ಲಳ್ಳಿ ಘಟಕದ ಅಧ್ಯಕ್ಷ ಶ್ರೀಕಂಠನಾಯಕ, ನಗರಸಭಾ ಸದಸ್ಯರಾದ ಗಂಗಾಧರ್‌, ಸ್ವಾಮಿ, ಗಾಯತ್ರಿ, ಮುಖಂಡರಾದ ರಾಮಲಿಂಗು, ಸಿದ್ದಲಿಂಗಪ್ಪ ಮತ್ತಿತರರಿದ್ದರು.

ಟಾಪ್ ನ್ಯೂಸ್

siddaram

ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೋನ್ಯತೆಯಿದೆ: ಸಿದ್ದರಾಮಯ್ಯ

1-mang-1

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaram

ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೋನ್ಯತೆಯಿದೆ: ಸಿದ್ದರಾಮಯ್ಯ

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

MUST WATCH

udayavani youtube

ಕಾಫಿನಾಡಲ್ಲಿ ಇಂದಿನಿಂದ ದತ್ತಜಯಂತಿ ಆಚರಣೆ

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

ಹೊಸ ಸೇರ್ಪಡೆ

davanagere news

ತಪ್ಪಿತಸ್ಥರ ಬಂಧನಕ್ಕೆ ಶಿವಕುಮಾರ್‌ ಆಗ್ರಹ

1-fff

ಮಿತಿ ಮೀರಿದೆ ಡಾ| ಜಾಧವ ಸುಳ್ಳು : ರಾಠೊಡ

davanagere news

ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐಗೆ ವಹಿಸಿ

7-ggsd

ಬಿಜೆಪಿ ಅಭ್ಯರ್ಥಿ ಪಾಟೀಲ ಹಣವಂತ-ಗುಣವಂತ: ನೀಲಕಂಠ

ಕಾಟಾಚಾರಕ್ಕೆ  ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ಜನೋತ್ಸವ: ಸಾರ್ವಜನಿಕರ ಆಕ್ರೋಶ

ಕಾಟಾಚಾರಕ್ಕೆ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ಜನೋತ್ಸವ: ಸಾರ್ವಜನಿಕರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.