ಹುಣಸೂರು: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು
Team Udayavani, Jan 22, 2022, 7:03 PM IST
ಹುಣಸೂರು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಸುಮಾರು 3-4 ವಯಸ್ಸಿನ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ಹುಣಸೂರು-ಮಡಿಕೇರಿ ಹೆದ್ದಾರಿಯ ತಾಲೂಕಿನ ನಾಗಮಂಗಲದ ಬಳಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 8-8.30 ರ ವೇಳೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಹಿಂದಿನ ಎಡಗಾಲು ಮುರಿದಿದ್ದು, ಇಂಟರ್‌ನಲ್ ಬ್ಲೀಡಿಂಗ್ ಆಗಿ ತೀವ್ರ ಅಸ್ಪಸ್ಥಗೊಂಡಿದ್ದ ಚಿರತೆಯು ಸಾವನ್ನಪ್ಪಿದೆ. ದಾರಿ ಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ತಕ್ಷಣವೇ ಆರ್.ಎಫ್.ಓ. ನಂದಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ವಾಹನ ಪತ್ತೆಗೆ ಮುಂದಾಗಿ, ಪೊಲೀಸರು ಹಾಗೂ ವರ್ಕ್ ಶಾಪ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಶನಿವಾರ ಕಲ್‌ಬೆಟ್ಟದ ಮರ ಸಂಗ್ರಹಾಲಯದಲ್ಲಿ ಚಿರತೆಯ ಶವ ಪರೀಕ್ಷೆ ಯನ್ನು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್‌ಕುಮಾರ್, ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಕರ್ನಾಟಕ ಮುಖ್ಯಸ್ಥ ವೆಂಕಟನಾಯ್ಡು ಸಮ್ಮುಖದಲ್ಲಿ ಪಶು ವೈದ್ಯ ಡಾ.ರಮೇಶ್ ನಡೆಸಿದರು.
ಎಸಿಎಫ್ ಅನುಷಾ, ಆರ್.ಎಫ್.ಓ.ನಂದಕುಮಾರ್ ಹಾಗೂ ಸಿಬ್ಬಂದಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆಯಿಂದ ಸಿಎಫ್ ಟಿಆರ್ಐನಲ್ಲಿ ಟೆಕ್ ಭಾರತ್
ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ
ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK
ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ
ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ