Udayavni Special

ಸಮಾಜಕ್ಕೆ ಕೊಡುಗೆ ನೀಡುವ ಕೆಲಸವಾಗಲಿ

Team Udayavani, May 26, 2019, 3:00 AM IST

samajakke

ಮೈಸೂರು: ಮನುಷ್ಯ ಹುಟ್ಟಿದ ಮೇಲೆ ಭಗವಂತನ ಸೇವೆ ಮಾಡುವ ಮೂಲಕ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮೈಸೂರು ನಗರಕ್ಕೆ ಕರಾವಳಿ ಭಕ್ತರು ನೀಡಿರುವ ಕೊಡುಗೆಗಳಲ್ಲಿ ಶ್ರೀ ಕೃಷ್ಣಧಾಮವೂ ಒಂದು. ಸಂಸ್ಕೃತಿ, ಧಾರ್ಮಿಕ ಸಂಸ್ಕಾರ, ಆಚಾರ ಪದ್ಧತಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಕೆಂಪೇಗೌಡರು ಮೈಸೂರು ಮುಡಾ ಅಧ್ಯಕ್ಷರಾಗಿದ್ದಾಗ ಎರಡು ಸ್ಥಳಗಳಲ್ಲಿ ನಿವೇಶನವನ್ನು ನೀಡಿದರು.

ಒಂದು ಸ್ಥಳದಲ್ಲಿ ವಿಜಯ ವಿಠ್ಠಲ ವಿದ್ಯಾ ಸಂಸ್ಥೆ ನಿರ್ಮಾಣಗೊಂಡು ಜ್ಞಾನವನ್ನು ಪಸರಿಸಿದರೆ, ಮತ್ತೂಂದು ಸ್ಥಳದಲ್ಲಿ ಶ್ರೀ ಕೃಷ್ಣಧಾಮ ಸಮಾಜಕ್ಕೆ ಭಕ್ತಿಯನ್ನು ಪಸರಿಸುತ್ತಿದೆ. ಭಕ್ತಿ ಮತ್ತು ಜ್ಞಾನ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು.

ಸಂಸ್ಥೆಗೆ ವಯಸ್ಸಾದಂತೆ ಮೃತ್ಯುವಿನ ಭಯವಿರುವುದಿಲ್ಲ. ಬದಲಿಗೆ ಧೈರ್ಯ, ಹುಮ್ಮಸ್ಸು ಮತ್ತು ಅನುಭವ ಹೆಚ್ಚುತ್ತದೆ. ಜೊತೆಗೆ ಚಿರಂಜೀವಿಯಾಗಿ ಬೆಳೆಯುತ್ತಿರುತ್ತದೆ. ದೇವರ ಅನುಗ್ರಹ ಮತ್ತು ಮಾನವನ ಪ್ರಯತ್ನ ಇದ್ದರೆ ಮಾತ್ರ ಸಮಾಜದಲ್ಲಿ ಏಳಿಗೆ ಹಾಗೂ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾನವನೆಂಬ ನಾವಿಕನಿಗೆ ದೀಪದ ಕಂಬಗಳಂತೆ ದಿಕ್ಕು ತೋರಿಸಲು ದೇಗುಲ, ಧಾರ್ಮಿಕ ಕೇಂದ್ರಗಳು, ಮಠ ಮಾನ್ಯಗಳು ಅಗತ್ಯವಾಗಿದೆ. ಇವುಗಳು ಮನುಷ್ಯನನ್ನು ಸರಿಯಾದ ದಾರಿಗೆ ಕೊಂಡೊಯ್ಯುತ್ತವೆ. ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ ಮೇಲೆ ಭಗವಂತನ ಆರಾಧನೆ, ಸೇವೆ ಮಾಡುವ ಮೂಲಕ ಸಮಾಜಕ್ಕೆ ಯಾವ ರೂಪದಲ್ಲಾದರೂ ಒಂದು ಕೊಡುಗೆ ನೀಡಬೇಕು ಎಂದರು.

ನಮಗೆ ಆಧ್ಯಾತ್ಮದ ಜೊತೆಗೆ ಆಧುನಿಕ ಶಿಕ್ಷಣವೂ ಅಗತ್ಯ. ಎಲ್ಲಾ ಭಾಷೆ, ಎಲ್ಲಾ ವಿದ್ಯೆಗಳು ಬೇಕು. ಭಾರತೀಯನ ಹೃದಯ ಅರಳಲು ಆಧ್ಯಾತ್ಮಿಕ ಶಿಕ್ಷಣದಿಂದ ಅರಳಲು ಮಾತ್ರ ಸಾಧ್ಯ ಎಂದು ಹೇಳಿದರು.

ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಒಂದು ಸಂಸ್ಥೆ ಪ್ರಗತಿ ಮತ್ತು ಏಳಿಗೆಯನ್ನು ಸಾಧಿಸಲು ಸಂಸ್ಥೆಯ ಸ್ಥಾಪನೆ ಯಾರಿಂದ, ಯಾವ ಹಿನ್ನೆಲೆಯಲ್ಲಿ ಆಯಿತು ಎಂಬುದು ಮುಖ್ಯ. ಇದರೊಟ್ಟಿಗೆ ಸಂಸ್ಥೆಯ ಕಾರ್ಯಕರ್ತರಲ್ಲಿ ವಿವೇಕ, ಮುಂದಿನ ನಡೆ ಬಗ್ಗೆ ದೂರ ದೃಷ್ಟಿ, ಹೊಂದಾಣಿಕೆಯ ಮನೋಭಾವವೂ ಮುಖ್ಯವಾಗಿರುತ್ತದೆ ಎಂದರು.

ಶ್ರೀ ಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷ ಪಿ. ಜಯರಾಮ ಭಟ್‌, ಜೆ.ಎಲ್‌. ಅನಂತ ತಂತ್ರಿ, ಕಾರ್ಯದರ್ಶಿ ಎಚ್‌.ವಿ. ರಾಘವೇಂದ್ರ ಭಟ್‌, ಎಚ್‌.ಬಿ. ರಮಾಕಾಂತ್‌, ಶ್ರೀ ಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ಪಿ.ವಿ. ನಾಗೇಶ್‌, ಉಪಾಧ್ಯಕ್ಷ ರವಿಶಾಸ್ತ್ರಿ ಸೇರಿದಂತೆ ಮತ್ತಿತರರು ಇದ್ದರು.

ನಮ್ಮಲ್ಲಿ ಶಿಕ್ಷಣವೇ ಬೇರೆ, ಆಧ್ಯಾತ್ಮವೇ ಬೇರೆ ಎಂಬ ಜಿಜ್ಞಾಸೆಗಳಿವೆ. ಆದರೆ ಭಾರತೀಯ ಪರಂಪರೆ ಮತ್ತು ತತ್ವಶಾಸ್ತ್ರದಲ್ಲಿ ಆಧ್ಯಾತ್ಮ ಮತ್ತು ಶಿಕ್ಷಣ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ, ಆಧ್ಯಾತ್ಮಿಕ ಪ್ರಪಂಚದತ್ತ ನಾವುಗಳು ವಾಲಬೇಕಿದೆ. ನಮ್ಮ ಪರಂಪರೆ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆ ಇಂತಹ ಧಾರ್ಮಿಕ ಸಂಸ್ಥೆಗಳಿಂದ ಹೆಚ್ಚಿದೆ.
-ಪ್ರೊ.ಜಿ. ಹೇಮಂತ ಕುಮಾರ್‌, ಮೈಸೂರು ವಿವಿ ಕುಲಪತಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಬಲ್ ಎಂಜಿನ್ ಗೆ ಬದ್ಧತೆ ಇದ್ದಿದ್ದರೆ ಠಾಕ್ರೆ ಹೇಳಿಕೆ ಖಂಡಿಸಬೇಕಿತ್ತು: ಕುಮಾರಸ್ವಾಮಿ

ಡಬಲ್ ಎಂಜಿನ್ ಗೆ ಬದ್ಧತೆ ಇದ್ದಿದ್ದರೆ ಠಾಕ್ರೆ ಹೇಳಿಕೆ ಖಂಡಿಸಬೇಕಿತ್ತು: ಕುಮಾರಸ್ವಾಮಿ

ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್

ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್!

ಯಡಿಯೂರಪ್ಪ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪ: ಡಿ ಕೆ ಶಿವಕುಮಾರ್

ಯಡಿಯೂರಪ್ಪ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪ: ಡಿ ಕೆ ಶಿವಕುಮಾರ್

siddaramaiah

ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ ;ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ

siddaramaiah

ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ: ಸಿದ್ದರಾಮಯ್ಯ

‘Sahebru Bandave’ Drama Show

‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ

Fund raising for Ram Mandir

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಆರ್.ಶಂಕರ್

ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಆರ್.ಶಂಕರ್

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಕಾಮಗಾರಿ ಮುಂದೂಡಿಕೆ: ವಿವಿಧ ರೈಲು ಸೇವೆ ಪುನಾರಂಭ

ಕಾಮಗಾರಿ ಮುಂದೂಡಿಕೆ: ವಿವಿಧ ರೈಲು ಸೇವೆ ಪುನಾರಂಭ

ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

ಡಬಲ್ ಎಂಜಿನ್ ಗೆ ಬದ್ಧತೆ ಇದ್ದಿದ್ದರೆ ಠಾಕ್ರೆ ಹೇಳಿಕೆ ಖಂಡಿಸಬೇಕಿತ್ತು: ಕುಮಾರಸ್ವಾಮಿ

ಡಬಲ್ ಎಂಜಿನ್ ಗೆ ಬದ್ಧತೆ ಇದ್ದಿದ್ದರೆ ಠಾಕ್ರೆ ಹೇಳಿಕೆ ಖಂಡಿಸಬೇಕಿತ್ತು: ಕುಮಾರಸ್ವಾಮಿ

ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್

ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್!

ಯಡಿಯೂರಪ್ಪ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪ: ಡಿ ಕೆ ಶಿವಕುಮಾರ್

ಯಡಿಯೂರಪ್ಪ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪ: ಡಿ ಕೆ ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.