ಪಕ್ಷೇತರರ ಒಲವು ಪಡೆದವರಿಗೆ ಅಧಿಕಾರದ ಗದ್ದುಗೆ


Team Udayavani, Oct 31, 2020, 3:24 PM IST

MYSURU-TDY-1

ಹುಣಸೂರು: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದ್ದು, ಅತಂತ್ರ ಫ‌ಲಿತಾಂಶ ಬಂದಿರುವುದರಿಂದ ಯಾವ ಪಕ್ಷಕ್ಕೆ ಅಧಿಕಾರ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಅತಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್‌ ಪಕ್ಷವು ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಈ ನಡುವೆ ಜೆಡಿಎಸ್‌ ಪಕ್ಷವು ಬಿಜೆಪಿ, ಪಕ್ಷೇತರರ ಜೊತೆಗೆ ಎಸ್‌ಡಿಪಿಐ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ.

31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌-14, ಜೆಡಿಎಸ್‌-7, ಬಿಜೆಪಿ-3, ಎಸ್‌ಡಿಪಿಐ-2 ಹಾಗೂ 5ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಶಾಸಕರು,  ಎಂಎಲ್‌ಸಿ ಹಾಗೂ ಸಂಸದರ ತಲಾ ಒಂದು ಮತ ಸೇರಿ 34 ಮತಗಳು ಇವೆ. ಬಹುಮತಕ್ಕೆ 18 ಮತಗಳು ಅಗತ್ಯವಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಎಸ್‌ಟಿಗೆ ಮೀಸಲಾಗಿದೆ.

ಕಾಂಗ್ರೆಸ್‌ ಲೆಕ್ಕಾಚಾರ: ಕಾಂಗ್ರೆಸ್‌ನ-14, ಮೂವರು ಪಕ್ಷೇತರರು, ಶಾಸಕ ಮಂಜುನಾಥ್‌ ಅವರ ಒಂದು ಮತ ಸೇರಿದಂತೆ ಕಾಂಗ್ರೆಸ್‌ ಬಲ 18ಕ್ಕೆರಲಿದೆ. ಈಗಾಗಲೇ ಮೂವರು ಪಕ್ಷೇತರ ಸದಸ್ಯರಾದ 13ನೇ ವಾರ್ಡ್‌ನ ಮಾಲಿಕ್‌ ಪಾಷ, 20ನೇ ವಾರ್ಡ್‌ನ ಫ‌ರ್ವೀನ್‌ ತಾಜ್‌, ಜಿಟಿಡಿ ಬೆಂಬಲಿಗ ಸತೀಶ್‌ಕುಮಾರ್‌ ಕಾಂಗ್ರೆಸ್‌ ನೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಇಬ್ಬರು ಎಸ್‌ ಡಿಪಿಐ ಸದಸ್ಯರ ಬೆಂಬಲ ಗಿಟ್ಟಿಸಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನಿಸುತ್ತಿದೆ.

ಜೆಡಿಎಸ್‌ ಲೆಕ್ಕಾಚಾರ: ಏಳು ಸ್ಥಾನ ಹೊಂದಿರುವ ಜೆಡಿಎಸ್‌ ಪಕ್ಷವು ಎಸ್‌ಡಿಪಿಐನ ಇಬ್ಬರು ಸದಸ್ಯರ ಬೆಂಬಲ ಪಡೆಯುವ ಸಲುವಾಗಿ 14ನೇ ವಾರ್ಡ್‌ನ ಜೆಡಿಎಸ್‌ನ ಶಹೀನ್‌ ತಾಜ್‌ ಅವರನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಇದರೊಂದಿಗೆ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಹಾಗೂ ಸಂಸದರು, ಎಂಎಲ್‌ಸಿ ವಿಶ್ವನಾಥ್‌ ಮತಗಳೊಂದಿಗೆ ಅಧಿಕಾರ ಹಿಡಿಯುವ ತಂತ್ರಗಾರಿಕೆ ನಡೆಸುತ್ತಿದೆ. ಕಾಂಗ್ರೆಸ್‌ಗೆ ಟಾಂಗ್‌ ಕೊಡಲು ಕೆ.ಆರ್‌. ನಗರ ಶಾಸಕ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಆಕಾಂಕ್ಷಿಗಳು: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯರಾದ 15ನೇ ವಾರ್ಡ್‌ನ ಸೌರಭ ಸಿದ್ದರಾಜು, 9ನೇ ವಾರ್ಡ್‌ನ ಶಮೀನಾ ಫ‌ರ್ವಿನ್‌, 3ನೇ ವಾರ್ಡ್‌ ನ ಎಸ್‌.ಅನುಷಾ, 24ನೇ ವಾರ್ಡ್‌ನ ಗೀತಾ ಹಾಗೂ 29ನೇ ವಾರ್ಡ್‌ನ ಪ್ರಿಯಾಂಕ ಥೋಮಸ್‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನವು ಎಸ್‌ಟಿಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ 6ನೇ ವಾರ್ಡ್‌ನ ದೇವನಾಯ್ಕ ಸ್ಪರ್ಧೆ ಖಚಿತವಾಗಿದೆ. ಇನ್ನು ಜೆಡಿಎಸ್‌ನಿಂದ 1ನೇ ವಾರ್ಡ್‌ನ ದೇವರಾಜು ಅಥವಾ ಎಸ್‌ಟಿ ಮೀಸಲಿನಿಂದ ಪಕ್ಷೇತರ ಸದಸ್ಯೆ ಎಚ್‌.ಡಿ.ಆಶಾ ಜೆಡಿಎಸ್‌ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯಲಿದ್ದಾರೆ.

ಒಟ್ಟಾರೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಶಾಸಕ ಮಂಜುನಾಥ್‌ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ ಪಕ್ಷವು ಬಿಜೆಪಿ ಸದಸ್ಯರು, ಇಬ್ಬರು ಎಸ್‌ಡಿಪಿಐ ಸದಸ್ಯರು, ಇಬ್ಬರು ಪಕ್ಷೇತರರು ಬೆಂಬಲಿಸುವ ವಿಶ್ವಾಸದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದೆ.

ಟಾಪ್ ನ್ಯೂಸ್

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-d

ಕೆರೆಗಳು ರೈತರ ಜೀವನಾಡಿ: ತಾಪಂ ಇಒ ಸಿ.ಆರ್. ಕೃಷ್ಣಕುಮಾರ್

election allegations

ಅಖಾಡದಲ್ಲಿ ಕಾಂಚಣ ಬಲ, ವಾಗ್ಯುದ್ಧ, ಕೆಸರೆರೆಚಾಟ

vote

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಶ್ರೀ ಗಂಧ ಅಕ್ರಮ

ಶ್ರೀಗಂಧ ಚೋರರ ಮೇಲೆ ಗುಂಡಿನ ದಾಳಿ..!

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.