ಧರ್ಮರಾಜ್ಯ ಸಾಪನೆ ಹಿಂದೂ ಧರ್ಮದ ಪರಮ ಗುರಿ
Team Udayavani, May 24, 2022, 6:13 PM IST
ಮಾಗಡಿ: ರಾಜ್ಯದಲ್ಲಿ ಧರ್ಮರಾಜ್ಯ ಸ್ಥಾಪನೆಹಿಂದೂ ಧರ್ಮದ ಪರಮ ಗುರಿಯಾಗಿದೆಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಶ್ರೀ ರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕಮಂಡಳಿ ಏರ್ಪಡಿಸಿದ್ದ ಕುರುಕ್ಷೇತ್ರ ಎಂಬ ಪೌರಾಣಿಕನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದಅವರು, ಪ್ರಾಚೀನ ಸಂಸ್ಕೃತಿಯಲ್ಲಿ ರಂಗಕಲೆಗೆ ಹೆಚ್ಚಿನಮಹತ್ವ ಇತ್ತು.
ಪೌರಾಣಿಕ ನಾಟಕಗಳು ರಾತ್ರಿ ವೇಳೆನಡೆಸಲಾಗುತ್ತಿತ್ತು. ಬದಲಾದ ಸನ್ನಿವೇಶದ ಜೊತೆಗೆಮಳೆ ಬೀಳುವ ಆತಂಕ ಜೊತೆಗೆ ವಿದ್ಯುತ್‌ಸಮಸ್ಯೆಯಿಂದ ಹಗಲು ವೇಳೆ ವಿಶೇಷವಾಗಿಪೌರಾಣಿಕ ನಾಟಕಗಳನ್ನು ನಡೆಯುತ್ತಿರುವುದುಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಕಲಾವಿದರನ್ನು ಪ್ರೋತ್ಸಾಹಿಸಿ: ಕಲಾಭಿಮಾನಿಗಳೂಸಹ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ.ಇಲ್ಲಿ ಪಾತ್ರಕ್ಕೆ ಸೂಕ್ತ ಕಲಾವಿದರನ್ನು ಆಯ್ಕೆಮಾಡಿರುವುದರಿಂದ ಅರ್ಥಪೂರ್ಣ ನಾಟಕಪ್ರದರ್ಶನವಾಗಿ ಬಿತ್ತರಗೊಳ್ಳುತ್ತಿದೆ.
ಪೌರಾಣಿಕನಾಟಕಗಳು ಜೀವನಕ್ಕೆ ಹತ್ತಿರವಾಗಿದೆ. ಜನರನಾಟಕ ಪ್ರದರ್ಶನ ನೋಡಿದರೆ ಸಾಲದು,ನಾಟಕದಲ್ಲಿ ಬರುವ ಸನ್ನಿವೇಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನುಹಸನು ಮಾಡಿಕೊಳ್ಳಲು ಸಾಧ್ಯವಿದೆ ಎಂದರು