Udayavni Special

ಎಪಿಎಂಸಿ ಆದಾಯ ಶೇ.50 ಖೋತಾ; ಸಚಿವ ತಬ್ಬಿಬ್ಬು!

ಎಪಿಎಂಸಿಯಲ್ಲಿನ ಸೆಸ್‌ ಸಂಗ್ರಹ ಶೇ.50ರಷ್ಟು ಇಳಿಕೆ ! ಜಿಪಂ ಕೆಡಿಪಿ ಸಭೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿ ಮಾಹಿತಿ

Team Udayavani, Feb 9, 2021, 1:23 PM IST

Minister Somshekar

ಮೈಸೂರು: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸೆಸ್‌ ಸಂಗ್ರಹ ಶೇ.50ರಷ್ಟು ಇಳಿಕೆಯಾಗಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದ್ದು, ಸಚಿವರನ್ನೇ ತಬ್ಬಿಬ್ಟಾಗಿಸಿದ ಪ್ರಸಂಗ ಜಿಲ್ಲಾ ಪಂಚಾಯಿತಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಸಂಬಂಧ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿ ಸಂಗೀತಾ, ಇಲಾಖೆ ಪ್ರಗತಿ ಸಂಬಂಧ ಮಾಹಿತಿ ನೀಡುವಾಗ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಿಲ್ಲೆಯಲ್ಲಿರುವ ಎಪಿಎಂಸಿಗಳು ಸಂಗ್ರಹಿಸುತ್ತಿದ್ದ ಸೆಸ್‌ (ಸುಂಕ) ಶೇ.50 ರಷ್ಟು ಕಡಿಮೆಯಾಗಿದ್ದು, ಎಪಿಎಂಸಿಗಳ ನಿರ್ವಹಣೆಯೇ ಕಷ್ಟವಾಗುತ್ತಿದೆ.

ಮೈಸೂರು ತಾಲೂಕು ಎಪಿಎಂಸಿಯಲ್ಲಿ 2019-  20ನೇ ಸಾಲಿನಲ್ಲಿ 2.1 ಕೋಟಿ ರೂ. ಸಂಗ್ರಹವಾಗಿತ್ತು. ಈ  ಬಾರಿ 1.48 ಕೋಟಿ ರೂ.ಗೆ ಇಳಿಕೆಯಾಗಿದೆ. ಇನ್ನು ಪಿರಿಯಾಪಟ್ಟಣ ತಾಲೂಕು ಎಪಿಎಂಸಿಯಲ್ಲಿ 2019-20ನೇ ಸಾಲಿನಲ್ಲಿ 1.8 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಕೇವಲ 50 ಲಕ್ಷ ರೂ. ಸಂಗ್ರಹವಾಗಿದೆ. ಇದೇ ಮಾದರಿಯಲ್ಲಿ ಎಲ್ಲ ಎಪಿಎಂಸಿಗಳಲ್ಲೂ ಸುಂಕ ಸಂಗ್ರಹ ಕಡಿಮೆ ಯಾಗಿದೆ ಎಂದು ಮಾಹಿತಿ

ನೀಡಿದರು. ಇದಕ್ಕೆ ತಬ್ಬಿಬ್ಟಾದ ಸಹಕಾರ ಸಚಿವರು ಸಚಿವರು, ಕಾಯ್ದೆಯಿಂದ ರೈತರಿಗೆ ಏನಾ ದರೂ  ತೊಂದರೆ ಇದ್ದರೆ ಹೇಳಿ. ಅಧಿಕಾರಿಗಳಿಗೆ ಹಾಗೂ ಸಮಿತಿಗೆ ತೊಂದರೆಯಾದರೆ ಸರ್ಕಾರ ನೋಡಿಕೊಳು ತ್ತದೆ. ಎಪಿಎಂಸಿ ಸಿಬ್ಬಂದಿಗೆ ಸರ್ಕಾರ ಸಂಬಳ ನೀಡು ತ್ತಿದೆ. ಕಾಯಿದೆಯಿಂದ ರೈತರಿಗೆ ಸಮಸ್ಯೆ  ಆಗಿದೆಯಾ ಎಂದು ಅಧಿಕಾರಿ ಯನ್ನು ಪ್ರಶ್ನಿಸಿದ ಅವರು, ರೈತರು ಇಷ್ಟು ದಿನ ಎಪಿಎಂಸಿ ಯಲ್ಲಿ ತಮ್ಮ  ಉತ್ಪನ್ನ ಮಾರಾಟ ಮಾಡುತ್ತಿದ್ದರು. ಹೊಸ ಕಾಯ್ದೆಯಿಂದ ತಮಗಿಷ್ಟಬಂದಲ್ಲಿ ಮಾರುತ್ತಿದ್ದಾರೆ. ಇದರರ್ಥ ಅವ ರಿಗೆ ಅನುಕೂಲವಾಗಿದೆಯಂದಲ್ಲವೇ ಎಂದರು.

17 ಸಾವಿರ ವಾರಿಯರ್ಗೆ ಲಸಿಕೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 36 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲು ಗುರಿ ಹೊಂದಲಾಗಿತ್ತು. ಈ ಪೈಕಿ 22 ಸಾವಿರ ಜನರಿಗೆ ಲಸಿಕೆ ನೀಡಿದ್ದೇವೆ. ಉಳಿದ 14 ಸಾವಿರ ಜನ ಲಸಿಕೆ ಪಡೆಯಲು ಭಾಗಿಯಾಗಿಲ್ಲ. ಸೋಮವಾರದಿಂದ ಮೊದಲ ಸಾಲಿನ ವಾರಿಯರ್ಸ್ ಗಳಾದ ನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆಯ 17 ಸಾವಿರ ಸಿಬ್ಬಂದಿಗೆ ಲಸಿಕೆ  ನೀಡುವ ಕಾರ್ಯ ಆರಂಭಿಸಿದ್ದೇವೆ. ದಿನಕ್ಕೆ 6 ಸಾವಿರದಂತೆ ಮೂರು ದಿನಗಳಲ್ಲಿ ಲಸಿಕೆ ನೀಡಲು ಗುರಿ ಹೊಂದಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‌ನಾಥ್‌ ಸಭೆಗೆ ಮಾಹಿತಿ ನೀಡಿದರು.

ಕಂದಾಯ ಕಟ್ಟಿಸಿ, ಸೌಲಭ್ಯ ಏಕೆ ನೀಡುತ್ತಿಲ್ಲ: ನಗರದ ಹತ್ತಕ್ಕೂ ಹೆಚ್ಚು ಬಡಾವಣೆಗಳು ಮುಡಾ  ವ್ಯಾಪ್ತಿಯ ಲ್ಲಿದ್ದು, ಕಂದಾಯವನ್ನು ನೀವೇ ಕಟ್ಟಿಸಿಕೊಳ್ಳುತ್ತಿದ್ದೀರಿ. ಆದರೆ, ಕುಡಿಯುವ ನೀರು ಮತ್ತು  ಬೀದಿ ದೀಪ ಸೌಲಭ್ಯವನ್ನು ನೀಡುತ್ತಿಲ್ಲ. ಕೇಳಿದರೆ ಪಾಲಿಕೆಯತ್ತ ಬೊಟ್ಟು ಮಾಡುತ್ತೀರಿ ಎಂದು ಮುಡಾ ಆಯುಕ್ತರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಹರಿಹಾಯ್ದರು. ಸ್ಥಳೀಯರಿಗೆ ಟೆಂಡರ್‌ ನೀಡಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಊಟ ಹಾಗೂ ಸ್ವತ್ಛತೆಗೆ ಟೆಂಡರ್‌ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಕಡೆ ಹೊರ ರಾಜ್ಯ ಮತ್ತು ಜಿಲ್ಲೆಯವರು ಟೆಂಡರ್‌ ಪಡೆದು, ಬಳಿಕ ಕಡಿಮೆ ಬೆಲೆಗೆ ಸ್ಥಳೀಯರಿಗೆ ಉಪ ಟೆಂಡರ್‌ ನೀಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಗುಣ ಮಟ್ಟದ ಆಹಾರ ಸಿಗುತ್ತಿಲ್ಲ. ಅಲ್ಲದೇ ಸ್ವತ್ಛತಾ ಸಿಬ್ಬಂ ದಿಗೆ ಸಮರ್ಪಕವಾಗಿ ಸಂಬಳ ಪಾವತಿಸುತ್ತಿಲ್ಲ. ಆದ್ದ ರಿಂದ ಸ್ಥಳೀಯರಿಗೆ ಟೆಂಡರ್‌ ನೀಡುವಂತೆ ಶಾಸಕ ಎಚ್‌. ಪಿ.ಮಂಜುನಾಥ್‌ ಆರೋಗ್ಯಾಧಿಕಾರಿಗೆ ಹೇಳಿದರು.

20 ಕೋಟಿ ಸೆಸ್‌ ಬಾಕಿ: ಮಹಾನಗರ ಪಾಲಿಕೆಗೆ ತೆರಿಗೆದಾರರಿಂದ ಸಂಗ್ರಹಿಸುವ ಗ್ರಂಥಾಲಯ ಸುಂಕವನ್ನು ಗ್ರಂಥಾಲಯ ಇಲಾಖೆ ಪಾವತಿಸಿಲ್ಲ. ಸುಮಾರು 20 ಕೋಟಿ ರೂ. ಸೆಸ್‌ನ್ನು (ಕರ) ಮೈಸೂರು ಮಹಾನಗರ ಪಾಲಿಕೆಯಿಂದ ನಮಗೆ ಬರಬೇಕಿದೆ ಎಂದು ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಯುಕ್ತರ ಬಳಿ ಉತ್ತರ ಕೇಳಿದ ಸಚಿವರು, ಶೀಘ್ರವೇ ಗ್ರಂಥಾಲಯ ಸೆಸ್‌ ಪಾವತಿಸಲು ಕ್ರಮವಹಿಸಿ ಎಂದು ತಾಕೀತು ಮಾಡಿದರು.

ಇದನ್ನೂ ಓದಿ :ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!

ಸಭೆಯಲ್ಲಿ ವಿವಿಧ ಇಲಾಖೆಗಳ ತ್ತೈಮಾಸಿಕ ಪ್ರಗತಿ ಹಾಗೂ ಅನುಪಾಲನ ವರದಿಯನ್ನು ಸಭೆಯ ಗಮನಕ್ಕೆ ತಂದರು. ಸಫಾಯಿ ಮಿತ್ರ ಸುರಕ್ಷ: ಇದಕ್ಕೂ ಮುನ್ನಾ ಮೈಸೂರು ಮಹಾನಗರ ಪಾಲಿಕೆ ರೂಪಿಸಿರುವ ಒಳ ಚರಂಡಿ ದೂರುಗಳ ಸಹಾಯವಾಣಿಯಾದ ಸಫಾಯಿ ಮಿತ್ರ ಸುರಕ್ಷ ಸವಾಲು ದೂರವಾಣಿ ಸಂಖ್ಯೆ 14420ಯನ್ನು ಸಚಿವರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಬಿಡುಡೆ ಮಾಡಿದರು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಅಶ್ವಿ‌ನ್‌ ಕುಮಾರ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಒ ಪರಮೇಶ್‌, ಎಸ್ಪಿ  ರಿಷ್ಯಂತ್‌, ಡಿಸಿಪಿ ಗೀತಾ ಪ್ರಸನ್ನ ಇತರರಿದ್ದರು.

ಟಾಪ್ ನ್ಯೂಸ್

Untitled-2

ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

puneeth raj

ಧಾರಾವಾಹಿ ನಿರ್ಮಾಣಕ್ಕೆ ಮುಂದಾದ ಪುನೀತ್ ರಾಜಕುಮಾರ್

bengalore-2

ಬಜೆಟ್ ಅಧಿವೇಶನದಲ್ಲಿ 6ನೇ ವೇತನ ಆಯೋಗ ಅಂಗೀಕರಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ

ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ

ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ

bc-patil

ಕೋವಿಡ್ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಜನೌಷಧ ಮಾರಾಟ

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಜನೌಷಧ ಮಾರಾಟ

bengalore-2

ಬಜೆಟ್ ಅಧಿವೇಶನದಲ್ಲಿ 6ನೇ ವೇತನ ಆಯೋಗ ಅಂಗೀಕರಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ

ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ

ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ

bc-patil

ಕೋವಿಡ್ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ. ಪಾಟೀಲ್

MUST WATCH

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

ಹೊಸ ಸೇರ್ಪಡೆ

Untitled-2

ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಜನೌಷಧ ಮಾರಾಟ

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಜನೌಷಧ ಮಾರಾಟ

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಯಜಮಾನನಿಗೆ 2 ವರ್ಷ ಸೆಲ್ಫಿ ಶೇರ್‌ ಮಾಡಿದ ರಶ್ಮಿಕಾ

ಯಜಮಾನನಿಗೆ 2 ವರ್ಷ ಸೆಲ್ಫಿ ಶೇರ್‌ ಮಾಡಿದ ರಶ್ಮಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.