ದೇವರಾಜು ಅರಸು ರಾಜಕಾರಣದ ಮೇರು ಪರ್ವತ

Team Udayavani, Aug 21, 2019, 3:00 AM IST

ತಿ.ನರಸೀಪುರ: ರಾಜಕಾರಣದಲ್ಲಿ ಹೊಸದೊಂದು ಛಾಪು ಮೂಡಿಸಿ, ಕಲ್ಯಾಣ ಕಾರ್ಯಕ್ರಮಗಳ ಮೂಲಕ ಕರ್ನಾಟಕವನ್ನು ಮುನ್ನಲೆಗೆ ತಂದಂತಹ ದೇವರಾಜ ಅರಸು ದೇಶ ಕಂಡ ಧೀಮಂತ ರಾಜಕಾರಣಿ ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಬಣ್ಣಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಪ್ರತಿಯೊಂದು ಅಧಿವೇಶನದ ವಿಚಾರದಲ್ಲಿಯೂ ಪ್ರಸ್ತಾಪಗೊಳ್ಳುವ ಅರಸು ಅವರು ರಾಜಕಾರಣದಲ್ಲಿ ಹಾಸು ಹೊಕ್ಕಿದ್ದಾರೆ. ರಾಜಕಾರಣದ ಮೇರು ಪರ್ವತದಂತ್ತಿದ್ದ ಅರಸು ಆದರ್ಶ ಹಾಗೂ ಚಿಂತನೆಗಳು ಚಿರಕಾಲ ಮಾರ್ಗದರ್ಶನವಾಗಲಿವೆ ಎಂದು ಸ್ಮರಿಸಿದರು.

ನೆರವು ನೀಡಿ: ಭೀಕರ ಪ್ರವಾಹದಿಂದ ರಾಜ್ಯ ಸೇರಿದಂತೆ ತಾಲೂಕು ಕೂಡ ತುತ್ತಾಗಿದ್ದು, ಹೆಚ್ಚಿನ ಹಾನಿಯಾಗಿದೆ. ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಲು ನಾವೆಲ್ಲರೂ ಕೈ ಜೋಡಿಸಬೇಕು. ತಾಲೂಕಿನಲ್ಲಿ ಕೆಲವು ಸರ್ಕಾರಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಭೂ ಒಡೆತನ: ಜಿಪಂ ಸದಸ್ಯ ಮಂಜುನಾಥನ್‌ ಮಾತನಾಡಿ, ರಾಜ್ಯದಲ್ಲಿ ದೇವರಾಜ ಅರಸು ಮಹತ್ವದ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿದ್ದರಿಂದ ಭೂ ರಹಿತ ಸಮುದಾಯಗಳು ಭೂಮಿಯ ಮೇಲಿನ ಒಡೆತನ ಹೊಂದಿದರು. ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತಂದು ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರ ಬದುಕಿನಲ್ಲಿ ಸುಧಾರಣೆ ತಂದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಆರ್‌.ಚಲುವರಾಜು, ಕಸಾಪ ಅಧ್ಯಕ್ಷ ಎಂ.ರಾಜು, ತಾಪಂ ಸದಸ್ಯರಾದ ರಾಮಲಿಂಗಯ್ಯ, ಶಿವಮ್ಮ ಮಹದೇವ, ಎಂ.ಚಂದ್ರಶೇಖರ್‌, ರತ್ನರಾಜ್‌, ಕೆಬ್ಬೆ ರಂಗಸ್ವಾಮಿ, ಪುರಸಭೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ, ತಹಶೀಲ್ದಾರ್‌ ಪಿ.ಎನ್‌.ನಾಗಪ್ರಶಾಂತ್‌, ತಾಪಂ ಇಒ ಎಂ.ಜರಾಲ್ಡ್‌ ರಾಜೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸ್ವಾಮಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಪಿ.ಜಯಕುಮಾರ್‌, ಸಿಡಿಪಿಒ ಬಿ.ಎನ್‌.ಬಸವರಾಜು,

ಶಿರಸ್ತೇದಾರ್‌ ಪ್ರಭುರಾಜ್‌, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ನಿಂಗಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಸಂಚಾಲಕ ಬಿ.ಮನ್ಸೂರ್‌ ಆಲಿ, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್‌.ಷಣ್ಮುಖಸ್ವಾಮಿ, ನೌಕರರ ಸಂಘದ ಖಜಾಂಚಿ ವೆಂಕಟಶೆಟ್ಟಿ, ಮುಖಂಡರಾದ ಎಸ್‌.ಮಹದೇವಶೆಟ್ಟಿ, ಕರೋಹಟ್ಟಿ ಮಹದೇವಯ್ಯ, ತುಂಬಲ ಮಂಜುನಾಥ್‌, ಭೈರಾಪುರ ಮಹದೇವಮ್ಮ, ಜಯಲಕ್ಷ್ಮೀ, ಜವರಯ್ಯ, ಕಲಿಯೂರು ಸಿದ್ದರಾಜು, ಸಿ.ಪುಟ್ಟಮಲ್ಲಯ್ಯ, ಮಾವಿನಹಳ್ಳಿ ರಾಜೇಶ್‌, ಸ್ವಾಮಿ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಮುಂಜಾನೆ ನಡೆದ ಚಾಮುಂಡೇಶ್ವರಿ ರಥೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ದೇವಿ ದರ್ಶನ ಪಡೆದು, ರಥಕ್ಕೆ ಹಣ್ಣು...

  • ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಆಟೋಮೋಟಿವ್‌ ಸ್ಪೋರ್ಟ್ಸ್ ಕ್ಲಬ್‌ ಆಫ್ ಮೈಸೂರು ವತಿಯಿಂದ ಲಲಿತ ಮಹಲ್‌ನ...

  • ಕೆ.ಆರ್‌.ನಗರ: ಕೆ.ಆರ್‌.ನಗರ ತಾಲೂಕನ್ನು ವಿಭಾಗ ಮಾಡಿ ಸಾಲಿಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ...

  • ಜಿಲ್ಲಾದ್ಯಂತ ಭಾನುವಾರ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೀಲುಕುದುರೆ, ಡೊಳ್ಳುಕುಣಿತ, ನಂದಿಧ್ವಜ...

  • ಮೈಸೂರು: ಪ್ಲಾಸ್ಟಿಕ್‌ ಬಳಕೆ ಅನೇಕ ಕಾಯಿಲೆಗಳಿಗೆ ಕಾರಣವಾಗಿದ್ದು, ಪರಿಸರವನ್ನು ನಾಶ ಮಾಡುತ್ತಿದೆ. ಆದ್ದರಿಂದ ನಾವು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ...

ಹೊಸ ಸೇರ್ಪಡೆ