ಸಂಸದ ಪ್ರತಾಪ್‌ ಸಿಂಹ ಆದಾಯ 6.03 ಲಕ್ಷ ರೂ.

Team Udayavani, Mar 26, 2019, 1:04 PM IST

m5-samsada

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಅವರ 2018-19ನೇ ಹಣಕಾಸು ವರ್ಷದಲ್ಲಿನ ಒಟ್ಟು ಆದಾಯ 6,03,937 ರೂ., ಪತ್ನಿ ಡಾ.ಅರ್ಪಿತ ಜೆ.ಎಸ್‌.ಅವರ ಆದಾಯ 3,01,219 ರೂ. ಎಂದು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಕನ್ನಡ ಪತ್ರಿಕೆಯ ಅಂಕಣಕಾರ ಮತ್ತು ಬರಹಗಾರರಾಗಿರುವ ಪ್ರತಾಪ್‌ ಸಿಂಹ ಅವರಿಗೆ ಅಂಕಣಕಾರರ ಗೌರವಧನ ಮತ್ತು ಸಂಸದರ ವೇತನ ಆದಾಯದ ಮೂಲವಾದರೆ, ಅವರ ಪತ್ನಿ ಡಾ.ಅರ್ಪಿತ ಅವರಿಗೆ ಮೈಸೂರಿನ ಪ್ರೀಮಿಯರ್‌ ರೀಟೇಲ್‌ ಸಂಸ್ಥೆಯಲ್ಲಿನ ವ್ಯಾಪಾರ ಆದಾಯ ಮೂಲವಾಗಿದೆ.

ಪ್ರತಾಪ್‌ ಸಿಂಹ ಕೈಯಲ್ಲಿ 28 ಸಾವಿರ ರೂ. ನಗದು, ಪತ್ನಿ ಅರ್ಪಿತ ಅವರ ಬಳಿ 25 ಸಾವಿರ ರೂ. ನಗದು ಇದೆ. ಬೆಂಗಳೂರಿನ ಲೇಡಿ ಕರ್ಜನ್‌ ರಸ್ತೆಯಲ್ಲಿನ ಎಸ್‌ಬಿಐ ಬ್ಯಾಂಕ್‌ ಶಾಖೆಯ ಖಾತೆಯಲ್ಲಿ 40,330 ರೂ., ನವ ದೆಹಲಿ ಪಾರ್ಲಿಮೆಂಟ್‌ ಹೌಸ್‌ನ ಎಸ್‌ಬಿಐ ಶಾಖೆಯ ಖಾತೆಯಲ್ಲಿ 1,91,295 ರೂ. ಇದೆ.

ಬೆಂಗಳೂರಿನ ಕರ್ನಾಟಕ ಜರ್ನಲಿಸ್ಟ್‌ ಸೊಸೈಟಿಯಲ್ಲಿ 500 ರೂ.ಗಳ ಷೇರು ಹೊಂದಿದ್ದಾರೆ. ಬೆಂಗಳೂರಿನ ಸರ್‌ ಎಂ.ವಿ.ಕೋ ಆಫ್ ಲಿ.ನಲ್ಲಿ 1200 ರೂ. ಷೇರು, ಬೆಂಗಳೂರಿನ ಮಾತಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರ ನಿಯಮಿತದಲ್ಲಿ 1000ರೂ.ಗಳ ಷೇರು ಹೊಂದಿದ್ದಾರೆ.

ಅರ್ಪಿತ ಅವರ ಹಿನಕಲ್‌ನ ಕೆನರಾಬ್ಯಾಂಕ್‌ ಶಾಖೆಯ ಖಾತೆಯಲ್ಲಿ 40,440 ರೂ. ಇದೆ.
ಸೋಮವಾರ ಪೇಟೆಯಲ್ಲಿ ಮೋಹನ್‌ ರಾಂ ಎಂಬುವವರಿಗೆ ಮನೆ ಬಾಡಿಗೆಗಾಗಿ 2 ಲಕ್ಷ ಮುಂಗಡ ನೀಡಿದ್ದರೆ, ಅರ್ಪಿತ ಅವರು 2,27,078 ರೂ. ನೀಡಿದ್ದಾರೆ.

ಪ್ರತಾಪ್‌ ಸಿಂಹ 11,09,697 ರೂ. ಮೌಲ್ಯದ ಚರಾಸ್ತಿ, 63,14,697 ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದರೆ, ಅರ್ಪಿತ ಸಿಂಹ ಅವರು 40,32,435 ರೂ. ಮೌಲ್ಯದ ಚರಾಸ್ತಿ, 1,21,82,435 ರೂ. ಮೌಲ್ಯದ ಸ್ವಯಾರ್ಜಿತ ಸ್ವತ್ತುಗಳನ್ನು ಹೊಂದಿದ್ದಾರೆ.

ಪ್ರತಾಪ್‌ ಸಿಂಹ ಹೆಸರಲ್ಲಿ 2011ರ ಮಾಡೆಲ್‌ನ 3,25,545 ರೂ. ಮೌಲ್ಯದ ಹುಂಡೈ 120 ಕಾರು, ಅರ್ಪಿತ ಅವರ ಹೆಸರಲ್ಲಿ 2018ರ ಮಾಡೆಲ್‌ನ 24,66,995 ರೂ. ಮೌಲ್ಯದ ಕ್ರಿಸ್ಟಾ 2.4 ಕಾರು ಇದೆ. ಪ್ರತಾಪ್‌ ಸಿಂಹ ಅವರ ಬಳಿ ಯಾವುದೇ ಚಿನ್ನಾಭರಣವಿಲ್ಲ. ಅರ್ಪಿತ ಅವರ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.

ಪ್ರತಾಪ್‌ ಸಿಂಹ ಸರಸ್ವತಿಪುರಂನ ಎಸ್‌ಬಿಐ ಪರ್ಸನಲ್‌ ಬ್ಯಾಂಕಿಂಗ್‌ ಶಾಖೆಯಲ್ಲಿ ಚಿನ್ನದ ಮೇಲೆ 3,53,866 ರೂ. ಸಾಲಪಡೆದಿದ್ದರೆ, ಅರ್ಪಿತ ಸಿಂಹ ಅವರು, ಶ್ರೀ ಕನ್ಯಾಕಾ ಪರಮೇಶ್ವರಿ ಕೋ-ಆಫ್ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ 2.35 ಲಕ್ಷ ರೂ. ಸಾಲ ಪಡೆದಿದ್ದಾರೆ. ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ 14,62,839 ರೂ. ಕಾರು ಸಾಲ ಪಡೆದಿದ್ದಾರೆ.

ಬೆಂಗಳೂರಿನ ಶೇಷಾಚಲ ಎಂಬುವವರಿಗೆ 16,56,355 ರೂ. ಸಾಲ ಕೊಡಬೇಕಿದೆ. ಅರ್ಪಿತ ಅವರು ಪತಿ ಪ್ರತಾಪ್‌ ಸಿಂಹ ಅವರಿಗೇ 2,3,078 ರೂ. ಸಾಲ ಪಾವತಿಸಬೇಕಿದೆ. ಸೆಂತಿಲ್‌ ಕುಮಾರ್‌ ಅವರಿಗೂ 4.50 ಲಕ್ಷ ರೂ. ಸಾಲ ಕೊಡಬೇಕಿದೆ. ಪ್ರತಾಪ್‌ ಸಿಂಹ ಒಟ್ಟು 23,64,087 ರೂ. ಸಾಲ, ಅರ್ಪಿತ ಸಿಂಹ 23,74,917 ರೂ. ಸಾಲ ಹೊಂದಿದ್ದಾರೆ.

ಟಾಪ್ ನ್ಯೂಸ್

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.