7 ಕೋಟಿ ರೂ. ಯೋಜನೆಗೆ 24 ಕೋಟಿ ವ್ಯಯಿಸಿದ್ದರೂ ಮತ್ತೆ 34 ಕೋಟಿ ಬೇಕಾ?


Team Udayavani, Dec 19, 2020, 7:07 PM IST

7 ಕೋಟಿ ರೂ. ಯೋಜನೆಗೆ 24 ಕೋಟಿ ವ್ಯಯಿಸಿದ್ದರೂ ಮತ್ತೆ 34 ಕೋಟಿ ಬೇಕಾ?

ನಂಜನಗೂಡು: ನಗರಸಭೆಯ ಪ್ರಪ್ರಥಮ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಕುಂಟುತ್ತಾ ಸಾಗುತ್ತಿರುವ ಒಳಚರಂಡಿ ಕಾಮಗಾರಿ ಅವ್ಯವಸ್ಥೆ ಪ್ರತಿಧ್ವನಿಸಿತು.

ಅಧ್ಯಕ್ಷ ಎಚ್‌.ಎಸ್‌.ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ನಗರದ ಒಳ ಚರಂಡಿ ಅವ್ಯವಸ್ಥೆಯನ್ನು ಸದಸ್ಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪಕ್ಷಬೇಧಮರೆತ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಿಮಗೆ ಈ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ಹಣ ಬೇಕು, ಒಂದು ಯೋಜನೆಗೆ ಎಷ್ಟು ಬಾರಿ ಅಂದಾಜು ವೆಚ್ಚ ಸಿದ್ಧಪಡಿಸುತ್ತೀರಿ, ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ಲವೇ, ಹಣ ಏನುಬಿಟ್ಟಿ ಬಿದ್ದಿದಿಯಾ, 2007ರಲ್ಲಿ 7 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಗೆಈಗಾಗಲೇ 24 ಕೋಟಿ ರೂ. ಖರ್ಚಾಗಿದೆ. ಈಗಮತ್ತೆ ಕಾಮಗಾರಿಪೂರ್ಣಗೊಳಿಸಲು ಇನ್ನೂ34 ಕೋಟಿ ರೂ.ಯೋಜನೆ ಸಿದ್ಧಪಡಿಸುತ್ತಿದ್ದೀರಿ ಎಂದು ಸದಸ್ಯರಾದ ಖಾಲೀದ್‌, ಕಪೀಲೇಶ್‌,ಯೋಗೀಶ್‌, ಗಾಯತ್ರಿ, ಯೋಗಾನಂದ, ಗಿರೀಶ್‌, ಶ್ವೇತಾ ಲಕ್ಷ್ಮೀ, ಶ್ರೀಕಂಠಸ್ವಾಮಿ, ದೊರೆಸ್ವಾಮಿ, ಮಹೇಶ್‌ ಮತ್ತಿತರ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು.

34 ಕೋಟಿ ನೀಡಿದರೆ ಪೂರ್ಣ: ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಒಳ ಚರಂಡಿ ಮಂಡಳಿಅಧಿಕಾರಿ ಉಮೇಶ್‌, ಇನ್ನೂ 34 ಕೋಟಿರೂ.ನೀಡಿದಲ್ಲಿ ಮಾತ್ರ ಕಾಮಗಾರಿಪೂರ್ಣಗೊಳಿಸಲು ಸಾಧ್ಯ. ಇನ್ನಾವುದೇ ಹೊಸಯೋಜನೆಗಳಿಲ್ಲ. ಕಾಮಗಾರಿನಿರ್ವಹಣೆಗೆ ಮಂಡಳಿಯಲ್ಲಿ ಹಣವೂ ಇಲ್ಲ. ಸಿಬ್ಬಂದಿ ಕೂಡ ಇಲ್ಲ. ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಳ ಚರಂಡಿ ಕಾಮಗಾರಿಗಳ ಚೇಂಬರ್‌ಗಳು ಹಾಳಾಗಿದ್ದು ಎಷ್ಟು, ಕುಸಿದಿರುವುದು ಎಷ್ಟು, ಮಚ್ಚಳವೇ ಇಲ್ಲದೆ ಎಷ್ಟು ಚೇಂಬರ್‌ಗಳು ಬಾಯ್ದೆರೆದು ನಿಂತಿವೆ ಎಂಬ ಸದಸ್ಯರ ಪ್ರಶ್ನೆಗಳಿಗೆಉತ್ತರ ಸಿಗಲಿಲ್ಲ.

ನೋಟಿಸ್‌ ನೀಡಿ: ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕಾಗಿ ಹಣ ಪಡೆದು ಕಾಮಗಾರಿ ಪೂರ್ಣಗೊಳಿಸದ ಹಾಗೂ ಇಂದಿನಸಭೆಯಿಂದಲೂ ದೂರ ಉಳಿದಲೋಕೋಪಯೋಗಿ ಇಲಾಖೆ ಅಧಿಕಾರಿಗೆನೋಟಿಸ್‌ ನೀಡಬೇಕು. ಸಭೆಗೆ ಗೈರಾಗಿರುವಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಕರಿಬಸವಯ್ಯ, ಅಧಿಕಾರಿಗಳು ಗ್ರಾಪಂ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು. ಇದರಿಂದ ಕೋಪಗೊಂಡ ಸದಸ್ಯರು, ನೀವು ಅಧಿಕಾರಿಗಳ ಪರವೋ ಅಥವಾ ಜನತೆಯಪರವೋ ಎಂಬುದನ್ನುಮೊದಲು ತೀರ್ಮಾನಿಸಿ ಎಂದು ತರಾಟೆಗೆ ತೆಗೆದುಕೊಂಡರು.

ಬಜಾರ್‌ ರಸ್ತೆ: 2016ರಲ್ಲಿ ಬಜಾರ್‌ ರಸ್ತೆ ಅಭಿವೃದ್ಧಿಗಾಗಿ ಆದ ಕಾಂಕ್ರೀಟ್‌ ರಸ್ತೆ ಟೆಂಡರ್‌ ಏನಾಯಿತು, ಆಗ ಬಿಡುಗಡೆಯಾದ ಆದ 2.5 ಕೋಟಿ ರೂ. ಏನಾಯ್ತು, ಈಗ ಕಾಂಕ್ರೀಟ್‌ ಬದಲು ಡಾಂಬರು ಹಾಕಲು ಏಕೆ

ಮುಂದಾಗಿದ್ದೀರಿ, ಇದು ಪೂರ್ಣಗೊಳ್ಳುವುದು ಯಾವಾಗ ಎಂದು ಸದಸ್ಯರು ಪ್ರಶ್ನಿಸಿದರು. ಈ ಕಾಮಗಾರಿಯ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ ದಿಂದ ಬಜಾರ್‌ ರಸ್ತೆಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ಗೈರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ನೋಟಿಸ್‌ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನಗರ ಸಭಾ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ತ್ಯಾಜ್ಯ ಗುಂಡ್ಲುನದಿ ಮೂಲಕ ಕಪಿಲೆ ನದಿ ಒಡಲು ಸೇರುತ್ತೆ! ನಗರಸಭಾಅಧ್ಯಕ್ಷ ಮಹದೇವಸ್ವಾಮಿ ಮಾತ ನಾಡಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ನಗರಸಭಾ ಸದಸ್ಯರನ್ನು ಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ದೇವಾಲಯದ ಸುತ್ತ ಸ್ವತ್ಛತೆ ಇಲ್ಲವಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೆ ಮುಂದುವರಿದಿದೆ. ಒಳ ಚರಂಡಿ ತ್ಯಾಜ್ಯವನ್ನು ಎಲ್ಲಿಗೆ ಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವಾಲಯದ ಎಂಜನಿಯರ್‌ ರವಿಕುಮಾರ್‌, “ಇನ್ನೆಲ್ಲಿಗೆ ಬಿಡಲು ಸಾಧ್ಯ ಸರ್‌, ತ್ಯಾಜ್ಯ ನೀರು ಗುಂಡ್ಲು ನದಿಗೆ ಸೇರಿಕೊಳ್ಳುತ್ತೆ.ಅಲ್ಲಿಂದಅದುಕಪಿಲಾ ನದಿಯ ಒಡಲಿಗೆ ಹೋಗುತ್ತದೆ¤ ಎಂಬ ಸತ್ಯವನ್ನು ಬಹಿರಂಗ ಪಡಿಸಿದಾಗ ಸಭೆಯಲ್ಲಿದ್ದ ಎಲ್ಲರೂ ಬೆಚ್ಚಿ ಬಿದ್ದರು.

ಟಾಪ್ ನ್ಯೂಸ್

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೆ.ಕೆ.ಮೈದಾನದಲ್ಲಿ ರಂಗೇರಿದ ಮಹಿಳಾ, ಮಕ್ಕಳ ದಸರಾ

ಜೆ.ಕೆ.ಮೈದಾನದಲ್ಲಿ ರಂಗೇರಿದ ಮಹಿಳಾ, ಮಕ್ಕಳ ದಸರಾ

9

ಹುಣಸೂರು: ಚಿರತೆ ದಾಳಿಗೆ ಕರು ಬಲಿ

8

ಹುಣಸೂರು: ಹುಲಿ ಪತ್ತೆಗೆ ಬಲರಾಮ, ಅಶ್ವತ್ಥಾಮನ ನೆರವು

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು ದಸರಾ; 90 ದಿನಗಳ ಕಾಲ ನಡೆಯಲಿರುವ ವಸ್ತುಪ್ರದರ್ಶನ

ಮೈಸೂರು ದಸರಾ; 90 ದಿನಗಳ ಕಾಲ ನಡೆಯಲಿರುವ ವಸ್ತುಪ್ರದರ್ಶನ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

12

ರಬಕವಿ-ಬನಹಟ್ಟಿ: ಭಗತ್ ಸಿಂಗ್ ಯುವ ಪೀಳಿಗೆಗೆ ಸ್ಪೂರ್ತಿ:‌ ವಿದ್ಯಾಧರ ಸವದಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.