ಮೈಸೂರು ದಸರಾ: ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ


Team Udayavani, Aug 7, 2022, 10:18 AM IST

ಮೈಸೂರು ದಸರಾ: ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಗಜಪಯಣಕ್ಕೆ ಭಾನುವಾರ ಸಂಭ್ರಮ, ಸಾಂಪ್ರದಾಯಿಕ ಚಾಲನೆ ದೊರೆಯಿತು.

ತುಂತುರು ಮಳೆಯ ನಡುವೆಯೂ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಯ ವೀರನಹೊಸಹಳ್ಳಿ ಬಳಿಯಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್ ಬಳಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳು, ಮುತ್ತೈದೆಯರು, ಹಾಡಿಯ ಜನರು ಈ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕೃಷ್ಣಪಕ್ಷದ ಶುಭ ದಿನವಾದ ಭಾನುವಾರ ಬೆಳಗ್ಗೆ 9.01ರಿಂದ 9.35ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಹಾಡಿ ರಾಜ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್  ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಿಂಗಾರಗೊಂಡು ಸಾಲಾಗಿ ನಿಂತಿದ್ದ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ, ಕಾವೇರಿ ಆನೆಗಳ ಪಾದ ತೊಳೆದು ಹೂ, ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು. ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಗಿರಿಜನ ಆಶ್ರಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಗಜಪಯಣಕ್ಕೆ ಧಾರ್ಮಿಕ ಚಾಲನೆ ನೀಡಿದರು. ಆನೆಗಳು ಕಾಡಿನಿಂದ ನೇರವಾಗಿ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಆಗಮಿಸಲಿದ್ದು, ಆ.10ರಂದು ಅರಮನೆ ಪ್ರವೇಶಿಸಲಿವೆ.

ಆಂಜನೇಯನಿಗೆ ವಿಶೇಷ ಪೂಜೆ: ಗಜಪಯಣಕ್ಕೂ ಮುನ್ನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೇಟ್ ಬಳಿಯಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಆಂಜನೇಯ ಸ್ವಾಮಿಗೆ ಮಾವುತರು ಹಾಗೂ ಕಾವಾಡಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಗಜಪಯಣದ ಹಿನ್ನಲೆಯಲ್ಲಿ ಆಂಜನೇಯನಿಗೆ ಅಭಿಷೇಕ, ಮಹಾಮಂಗಳಾರತಿ, ಅರ್ಚನೆ, ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ಇದನ್ನೂ ಓದಿ:ಚೆಕ್ ಡ್ಯಾಂ ಗೆ ಬಿದ್ದು ಮಹಿಳೆ ನಿರುಪಾಲು : ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

ಈ ಬಗ್ಗೆ ಮಾತನಾಡಿದ ಹಾಡಿ ಪುರೋಹಿತ ಪ್ರಹ್ಲಾದ್ ರಾವ್, ಕಳೆದ ಹಲವು ವರ್ಷಗಳಿಂದ ಗಜಪಯಣದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ. ಎಂದಿನಂತೆ ಈ ಬಾರಿಯೂ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ನಾಡಿಗೆ, ದೇಶಕ್ಕೆ ಒಳಿತಾಗಲಿ ಎಂದು ಗಣಪನ ಪ್ರತಿರೂಪವಾದ ಆನೆ, ಚಾಮುಂಡೇಶ್ವರಿ ಹಾಗೂ ವನದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ಸಂಭ್ರಮಕ್ಕೆ ಮಳೆ ಅಡ್ಡಿ: ಗಜಪಯಣದ ಹಿನ್ನೆಲೆಯಲ್ಲಿ ವೀರನಹೊಸಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಜನರನ್ನು ಸೇರಿಸಿ ಆನೆಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಬೆಳಗ್ಗೆಯಿಂದಲೇ ಆರಂಭವಾದ ಮಳೆ ಸಂಭ್ರಮಕ್ಕೆ ಅಡ್ಡಿಯಾಯಿತು. ಮಳೆಯಿಂದಾಗಿ ಹೆಚ್ಚು ಜನರು ಭಾಗವಹಿಸಲಿಲ್ಲ. ಅಧಿಕಾರಿಗಳು ಕೊಡೆಗಳನ್ನು ಹಿಡಿದುಕೊಂಡೇ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮಳೆಯ ನಡುವೆಯೇ ಡೊಳ್ಳು ಕುಣಿತ, ಸೋಮನ ಕುಣಿತ, ಚಂಡೆ, ವಿವಿಧ ಜಾನಪದ ಕಲಾತಂಡಗಳು, ತಾಳ ಮೇಳ, ವಾದ್ಯಗಳು ಗಜಪಯಣಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಶಾಸಕ‌ ಹೆಚ್.ಪಿ.ಮಂಜುನಾಥ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಮೇಯರ್ ಸುನಂದ ಪಾಲನೇತ್ರ, ನಿಗಮ ಮಂಡಳಿ ಅಧ್ಯಕ್ಷರಾದ ಶಿವಕುಮಾರ್, ಎಂ.ಶಿವಣ್ಣ, ಜಿಲ್ಲಾಧಿಕಾರಿ ಡಾ.ಬಗಾದ್ ಗೌತಮ್, ಎಸಿಎಫ್ ಗಳಾದ ಕರಿಕಾಳನ್, ಕಮಲಾ ಕರಿಕಾಳನ್, ಜಿ.ಪಂ‌ ಸಿಇಒ ಪೂರ್ಣಿಮಾ.ಬಿ.ಆರ್ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

1-asdsadsad

ಖರ್ಗೆ ಅವರಿಗೆ ರಾವಣ ಯಾರು ಎಂದು ಗೊತ್ತಾಗಿದೆ ಎಂದು ಭಾವಿಸುತ್ತೇನೆ: ಸಿ.ಟಿ.ರವಿ

tdy-13

ಸುಳ್ಯ: ʼಕಾಂತಾರʼಸಿನೆಮಾ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ

1-dasdadad

ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್; ಆಪ್ ಖಾತೆ ತೆರೆಯಲು ವಿಫಲ

ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫ‌ಲಿತಾಂಶ ಪ್ರಕಟ

ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫ‌ಲಿತಾಂಶ ಪ್ರಕಟ

15

ಪಣಜಿ: ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಯಾವುದೇ ಯೋಜನೆ ಇಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asddd

ಹುಣಸೂರು: ಹನುಮ ಜಯಂತಿಯ ಶೋಭಾಯಾತ್ರೆ: 15 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

1-asd-sad

ಹುಣಸೂರು: ವಿಜೃಂಭಣೆಯ ಹನುಮ ಜಯಂತಿ ಶೋಭಾಯಾತ್ರೆಗೆ ಚಾಲನೆ

ಹುಣಸೂರಲ್ಲಿ ಹನುಮಜಯಂತಿ: ಪೊಲೀಸರ ಸರ್ಪಗಾವಲು, ಐಜಿಪಿ ಪರಿಶೀಲನೆ

ಹುಣಸೂರಲ್ಲಿ ಹನುಮ ಜಯಂತಿ: ಪೊಲೀಸರ ಸರ್ಪಗಾವಲು, ಐಜಿಪಿ ಪರಿಶೀಲನೆ

ಬಹುರೂಪಿಗೆ ಸಜ್ಜಾಗುತ್ತಿದೆ ರಂಗಾಯಣ

ಬಹುರೂಪಿಗೆ ಸಜ್ಜಾಗುತ್ತಿದೆ ರಂಗಾಯಣ

1-WQWQEWEW

ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಮತ್ತೊಂದು ಆರೋಪ

MUST WATCH

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

ಹೊಸ ಸೇರ್ಪಡೆ

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

17

ಗಂಗಾವತಿ: ಕನ್ನಡ ಸಾಹಿತ್ಯ ಸಮ್ಮೇಳ ಜನಜಾಗೃತಿ ರಥಯಾತ್ರೆಗೆ ಸ್ವಾಗತ

1-asasaS

ಐವರು ಸಮಾಜಘಾತುಕರಿಗೆ ಬೆಳಗಾವಿಯಿಂದ ಗಡಿಪಾರು ಮಾಡಿದ ಡಿಸಿಪಿ ಗಡಾದಿ

16

ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಕೊರಟಗೆರೆ ವಕೀಲರ ಸಂಘದ ಪ್ರತಿಭಟನೆ

bjp-congress

ಸಿಎಂ ಭಾಷಣ ತಿರುಚಿದ ಕಾಂಗ್ರೆಸ್ ಕಾರ್ಯಕರ್ತ: ಕೊರಟಗೆರೆ ಪೊಲೀಸ್ ಠಾಣೆಗೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.