ಪಾರ್ವತಿ ಅಲಂಕಾರದಲ್ಲಿ ಕಂಗೊಳಿಸಿದ ದೇವಿ


Team Udayavani, Jul 24, 2021, 5:54 PM IST

mysore news

ಮೈಸೂರು: ನಾಡ ದೇವತೆ ಶ್ರೀ ಚಾಮುಂಡೇಶ್ವರಿಸನ್ನಿಧಿಯಲ್ಲಿ ಎರಡನೇ ಆಷಾಢ ಶುಕ್ರವಾರವೂ ಭಕ್ತರಅನುಪಸ್ಥಿತಿಯಲ್ಲಿ ವಿಶೇಷ ಪೂಜಾ ಮಹೋತ್ಸವನೆರವೇರಿತು.

ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿಚಾ.ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಭಂದಿಸಿರುವುದರಿಂದಪೂಜೋತ್ಸವದಲ್ಲಿ ಭಾಗಿಯಾಗಲು ಮತ್ತು ಸಂಭ್ರಮದಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಸಾಧ್ಯವಾಗಲಿಲ್ಲ.

ಪ್ರತಿವರ್ಷ ಆಷಾಢ ಮಾಸದ ಶುಕ್ರವಾರದಂದುಚಾಮುಂಡೇಶ್ವರಿ ದರ್ಶನ ಪಡೆಯಲು ಸಾವಿರಾರುಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಹೀಗಾಗಿಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದರು. ಆದರೆ, ಕೊರೊನಾ ಸೋಂಕು ಹಿನ್ನೆಲೆಕಳೆದ ವರ್ಷದಂತೆಯೆ ಈ ಬಾರಿಯೂ ಜನರಅನುಪಸ್ಥಿತಿಯಲ್ಲಿ ಆಷಾಢ ಪೂಜೋತ್ಸವಜರುಗುತ್ತಿದೆ.

ಜಿಲ್ಲಾಡಳಿತದ ಸೂಚನೆ ಮೇರೆಗೆ ಭಕ್ತರು ಬೆಟ್ಟದತ್ತಮುಖ ಮಾಡಲಿಲ್ಲ. ಅರ್ಚಕರು, ಮಾಧ್ಯಮಪ್ರತಿನಿಧಿಗಳು ಹಾಗೂ ಬೆಟದr ಗ್ರಾಮಸ್ಥರಿಗೆ ಮಾತ್ರಅವಕಾಶ ನೀಡಲಾಗಿತ್ತು. ದೃಶ್ಯ ಮಾಧ್ಯಮದಲ್ಲಿಬಿತ್ತರಗೊಂಡ ಸಂಭ್ರಮದ ಕ್ಷಣವನ್ನು ಜನರುಕಣ್ತುಂಬಿಕೊಂಡರು.

ಬೆಟ್ಟದಲ್ಲಿ ಪೂಜಾ ಕೈಂಕರ್ಯ ಎಂದಿನಂತೆನಡೆಯಿತು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ನೇತೃತ್ವದಲ್ಲಿ ದೇವಿಗೆ ಅಭಿಷೇಕ ನೆರವೇರಿಸಿದ ನಂತರವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿ ಸನ್ನಿಧಿಯಲ್ಲಿಪೂಜಾ ಕೈಂಕರ್ಯಗಳು ಸರಳ ಮತ್ತು ಸಂಪ್ರದಾಯದಂತೆ ಜರುಗಿದವು.

ಬೆಳಗ್ಗೆ 4 ಗಂಟೆಗೆದೇವಸ್ಥಾನದ ಬಾಗಿಲು ತೆರೆದು ವಿಶೇಷ ಪೂಜೆ,ಅಭಿಷೇಕವನ್ನು ಅರ್ಪಿಸಲಾಯಿತು. ಬಳಿಕರುದ್ರಾಭಿಷೇಕ, ಅರ್ಚನೆ ಮತ್ತು ಮಹಾ ಮಂಗಳಾರತಿಮಾಡಲಾಯಿತು. ಪ್ರತಿವರ್ಷ ಆಷಾಢ ಮಾಸದಶುಕ್ರವಾರದಂದು ಬೆಳಗಿನ ಜಾವ 7 ರಿಂದ ರಾತ್ರಿ10ರವರೆಗೂ ಶಕ್ತಿ ದೇವತೆಯ ದರ್ಶನಕ್ಕೆ ಅವಕಾಶ ಇರುತ್ತಿತ್ತು.

ಆದರೆ, ಇಂದು ಬೆಳಗ್ಗೆ 7 ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿದ ಅರ್ಚಕರು, ಬೆಳಗ್ಗೆ 9ಗಂಟೆ ವರಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿದರು.ಇದೇ ಸಂದರ್ಭ ಚಾಮುಂಡೇಶ್ವರಿಯ ಉತ್ಸವಮೂರ್ತಿ ಮೆರವಣಿಗೆ ದೇವಸ್ಥಾನದ ಆವರಣದೊಳಗೆ ನೆರವೇರಿತು.

ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ಮಾತ್ರ ದೇವಿಯದರ್ಶನಕ್ಕೆ ಅವಕಾಶ ನೀಡಲಾಯಿತು. ಸುಮಾರು200ಗ್ರಾಮಸ್ಥರು ಸರದಿ ಪ್ರಕಾರ ಒಬ್ಬರೇ ಬಂದು ದರ್ಶನ ಪಡೆದರು. ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌.ಎ.ರಾಮದಾಸ್‌, ಅಖಂಡ ಶ್ರೀನಿವಾಸಮೂರ್ತಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವರ ದರ್ಶನಪಡೆದರು.ಇನ್ನುಭಕ್ತರಿಗೆಬೆಟ್ಟಕ್ಕೆಪ್ರವೇಶನಿರ್ಬಂಧಿಸಿರುವುದುಹಾಗೂ ವೈರಸ್‌ ಹರಡುವ ಭೀತಿಯಿಂದ ಈ ಬಾರಿಪ್ರಸಾದ ವಿತರಣೆಗೆ ಅವಕಾಶ ಇರಲಿಲ್ಲ. ಪ್ರತಿವರ್ಷಸಾವಿರಾರು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದರು.

ಕೇವಲ ಬೆಟ್ಟದಲ್ಲಿ ಮಾತ್ರವಲ್ಲದೆ ನಗರದ ವಿವಿಧೆಡೆತಾಯಿ ಚಾಮುಂಡೇಶ್ವರಿಯ ಪ್ರತಿಮೆ ಪ್ರತಿಷ್ಠಾಪಿಸಿಪೂಜೆ ಸಲ್ಲಿಸಿದ ನಂತರ ಪ್ರಸಾದ ಹಂಚಿಕೆಮಾಡಲಾಗುತಿತ್ತು.ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಪ್ರಸಾದಹಂಚಿಕೆ ಮಾಡಬಾರದೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನಸೂಚನೆ ನೀಡಿದ ಹಿನ್ನೆಲೆಯಲ್ಲಿ ಭಕ್ತರುಮನೆಯಲ್ಲಿಯೇ ಉಳಿದು ದೇವಿಯನ್ನು ಮನದಲ್ಲಿನೆನೆಯುವಂತಾಯಿತು.

ಬೆಟ್ಟಕ್ಕೆ ಮುಗಿಲ ಮುತ್ತು: ಬೆಟ್ಟದಲ್ಲಿ ಸುರಿದಮಳೆಯಿಂದ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿತ್ತಲ್ಲದೆ ಮುಂಜಾನೆ ಚಾ.ಮುಂಡಿ ಬೆಟ್ಟವನ್ನುಮುಗಿಲು ಮುತ್ತಿಕ್ಕುವಂತೆ ಆವರಿಸಿದ್ದರಿಂದ ಇಡೀಬೆಟ್ಟದಲ್ಲಿ ಮಂಜಿನ ವಾತಾವರಣ ಕಂಡುಬಂದಿತು. ಬೆಟ್ಟದ ಕೆಳಭಾಗದಿಂದ ನೋಡುವವರಿಗೆಬೆಟ್ಟಕ್ಕೆ ಮೋಡಗಳು ಬಂದು ಅಪ್ಪಳಿಸಿದ ರೀತಿಯದೃಶ್ಯಗಳು ಮುತ್ತಿಕ್ಕುವಂತೆ ಕಾಣುವ ಸುಂದರ ದೃಶ್ಯಕಂಡುಬಂದಿತು.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.